ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
2025-26ನೇ ಸಾಲಿನ 10ನೇ ತರಗತಿಯ ಸಿಬಿಎಸ್‍ಸಿ ಫಲಿತಾಂಶ CBSC 10th Result ಪ್ರಕಟಗೊಂಡಿದ್ದು, ಶಿವಮೊಗ್ಗ ಪೋದಾರ್ ಇಂಟರ್‌ನ್ಯಾಷನಲ್ ಶಾಲೆಯು Shivamogga Podar International School ಶೇ.100 ರಷ್ಟು ಫಲಿತಾಂಶ ಪಡೆಯುವ ಮೂಲಕ ಸಾಧನೆ ಮಾಡಿದೆ.
ಶಾಲೆಯ ವಿದ್ಯಾರ್ಥಿಗಳಾದ ಸಂಚಿತ್ ಎಸ್ ಭೂಪಾಳಂ ಶೇ.96.8, ವಿಹಾಸ್ ಕೆ.ಗೌಡ ಶೇ.96, ಚಂದನ್ ಆರ್.ಗೌಡ ಶೇ.95.4, ಯುಕ್ತ.ಎಸ್ ಶೇ.94.6, ಚಿರಂತನ್ ಎಸ್.ಪಿ ಶೇ.94.5, ಅಕ್ಶೋಭ್ಯ ಎಸ್ ನಾಡಿಗ್ ಶೇ.94.33 ಪಡೆಯುವ ಮೂಲಕ ಅತ್ಯುತ್ತಮ ಶ್ರೇಣಿ ಸ್ಥಾನವನ್ನು ಪಡೆದ್ದಾರೆ.
ಶಾಲೆಯಿಂದ ಪರೀಕ್ಷೆಗೆ ಹಾಜರಾಗಿದ್ದ 187 ವಿದ್ಯಾರ್ಥಿಗಳಲ್ಲಿ 67 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯನ್ನೂ, 110 ವಿದ್ಯಾರ್ಥಿಗಳು ಪ್ರಥಮ, 10 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯನ್ನು ಪಡೆದಿದ್ದು, 27 ವಿದ್ಯಾರ್ಥಿಗಳು ಕನ್ನಡ, ಸಮಾಜ ಮತ್ತು ಐಟಿ ವಿಷಯದಲ್ಲಿ 100 ಕ್ಕೆ 100 ಅಂಕವನ್ನು ಗಳಿಸಿದ್ದಾರೆ.
ಉತ್ತಮ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಜನರಲ್ ಮ್ಯಾನೆಜರ್ ರವೀಂದ ವಂಕೇಲ, ಪ್ರಾಂಶುಪಾಲರಾದ ಸುಕೇಶ್ ಸೇರಿಗಾರ, ಉಪ ಪ್ರಾಂಶುಪಾಲರಾದ ಉಮಾ ಮಹೇಶ್ವರಿ, ಮುಖ್ಯೋಪಾಧ್ಯಾಯಿನಿ ದೀಪಾ ಎಸ್ ಡಿ, ಶಿಕ್ಷಕರುಗಳು, ಆಡಳಿತಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪೋಷಕರು ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















