ಅಂತರ‌್ರಾಷ್ಟ್ರೀಯ ಮೈನಿಂಗ್ ಸಂಸ್ಥೆಗಳಿಂದ ಕಡಿಮೆ ಆದ್ಯತೆಯ ವಲಯಗಳೆಂದು ಗುರುತಿಸಲ್ಪಡುವ ಪ್ರದೇಶಗಳಲ್ಲಿ CSHD ಡಿಮೈನಿಂಗ್ ಕೆಲಸ ಮಾಡುತ್ತಿದೆ. ಈ ಅಂತರ‌್ರಾಷ್ಟ್ರೀಯ ಸಂಸ್ಥೆಯು ಗುರುತಿಸಲ್ಪಟ್ಟ ಹೆಚ್ಚು ಆದ್ಯತೆಯ ಪ್ರದೇಶಗಳಲ್ಲಿ ಮಾತ್ರ ಲ್ಯಾಂಡ್‌ಮೈನ್‌ಗಳನ್ನು ನಿಷ್ಕ್ರಿಯಗೊಳಿಸುತ್ತವೆ.
ಸ್ಥಾಪನೆಗೊಂಡ ಮೊದಲ ವರ್ಷದಲ್ಲೇ 1,63,000 ಸ್ಕ್ವೇರ್ ಮೀಟರ್‌ನಷ್ಟು ಭೂಮಿಯನ್ನು ಲ್ಯಾಂಡ್‌ಮೈನ್ ಮುಕ್ತಗೊಳಿಸಿ, ನಾಗರಿಕರು ಆತಂಕರಹಿತವಾಗಿ ಬಾಳಲು ಮತ್ತು ಕೃಷಿ ಚಟುವಟಿಕೆ ನಡೆಸಲು ನೆರವಾಗಿದೆ. 1,63,000 ಸ್ಕ್ವೇರ್ ಭೂಮಿಯನ್ನು ಲ್ಯಾಂಡ್‌ಮೈನ್ ಮುಕ್ತಗೊಳಿಸಲು CSHD ಯು ಪ್ರತಿ ತಿಂಗಳು ಸರಾಸರಿ 4,314 ಅಮೆರಿಕನ್ ಡಾಲರ್ ವ್ಯಯಿಸಿದೆ.
CSHDಯು ತನ್ನ ಅಮೆರಿಕಾ ಮತ್ತು ಆಸ್ಟ್ರೇಲಿಯಾದ ಸಹಯೋಗಿಯಾದ The Landmine relief fund ÊÜáñÜᤠVietnam Veterans Mine clearing Teamನಿಂದ ಸಾಕಷ್ಟು ಅನುದಾನ ಪಡೆಯುತ್ತಿದೆ. ಅಮೆರಿಕಾದ United States Department of States 2009ರಲ್ಲಿ ಆದ್ಯತೆಯ ಹಳ್ಳಿಗಳಲ್ಲಿ ಲ್ಯಾಂಡ್‌ಮೈನ್‌ಗಳನ್ನು ನಿಷ್ಕ್ರಿಯಗೊಳಿಸಲು 1,00,000 ಅಮೆರಿಕನ್ ಡಾಲರ್‌ನ್ನು ನೀಡಿದೆ.
ಸದ್ಯದ ಪರಿಸ್ಥಿತಿಯಲ್ಲಿ CSHDಯ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲ ಮತ್ತು ದೊಡ್ಡ ದೊಡ್ಡ ಡಿಮೈನಿಂಗ್ ಸಂಸ್ಥೆಗಳಾದ Mines Advisory Group ಮತ್ತು Halo Trustಗಳ ಮುಂದೆ CSHD ಯ ಕ್ರಮ ಗಣನೆಗೆ ಬರುತ್ತಿಲ್ಲ.
ಪ್ರಶಸ್ತಿಗಳು
2005ರಲ್ಲಿ Children and the Akira Landmine museumಎಂಬ ಪುಸ್ತಕದಲ್ಲಿ ಜಪಾನಿ ಭಾಷೆಯಲ್ಲಿ ಪ್ರಕಟಿಸಲಾಗಿದೆ.
2010ರಲ್ಲಿ ಅಕಿರಾನ ಜೀವನವನ್ನಾದ್ದರಿಸಿ ‘A Perfect Soldier’ ಎಂಬ ಡಾಕ್ಯುಮೆಂಟರಿಯನ್ನು (ಕಿರುಚಿತ್ರ) ತಯಾರಿಸಲಾಗಿದೆ.
ಜುಲೈ 2010ರಲ್ಲಿ CNN Hero ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಮತ್ತು ಸೆಪ್ಟೆಂಬರ್ 2010ರಲ್ಲಿ Top 10 CNN Hero ಪ್ರಶಸ್ತಿಗೆಯನ್ನು ನೀಡಲಾಯಿತು.
12 ಆಗಸ್ಟ್ 2012ರಲ್ಲಿ ದ. ಕೊರಿಯಾದ Manhae Foundation 2012ÃÜ Manhae Foundation Grand Prize for Peace ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಫೆಬ್ರವರಿ 2013ರಲ್ಲಿ Paul P. Harris Fellowship for Peace and conflict resolutionನಿಂದ ನೀಡಲಾಯಿತು.
ಪರಿಸಮಾಪ್ತಿ
ಇಷ್ಟೆಲ್ಲಾ ಕಷ್ಟಪಟ್ಟು ಒಬ್ಬನೇ ವ್ಯಕ್ತಿ ಏನೆಲ್ಲಾ ಬದಲಾವಣೆ ತರಬಹುದು ಎಂದು ತೋರಿಸಿಕೊಟ್ಟ ಅಕಿರಾ, ತೀವ್ರತರದ ಖಾಯಿಲೆ ಹೊಂದಿರುವ ಬಗ್ಗೆ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆಗಿಂದಾಗ್ಗೆ TNT ಮತ್ತು RDX ನ ಸ್ಫೋಟದ ಹೊಗೆ ನಡುವೆ ಉಸಿರಾಡುತ್ತಿರುವ ಕಾರಣ ಹಲವು ಉಸಿರಾಟ ಸಂಬಂಧಿ ಖಾಯಿಲೆಯಿರುವ ಬಗ್ಗೆ ಶಂಕೆಯಿಂದೆ. ಏನೇ ಆದರೂ ದೇಶಕ್ಕಾಗಿ, ಸಮಾಜಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿರುವ ಅಕಿರಾ ನೂರಾರು ವರ್ಷ ಬಾಳಲಿ ಹಾರೈಸೋಣ.
Discussion about this post