ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನರೇಂದ್ರಮೋದಿಯವರನ್ನು PM Narendra Modi `ಭಯೋತ್ಪಾದಕ’ ಎಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ಸನ್ನು ದೇಶದ ಜನತೆ ಕ್ಷಮಿಸುವುದಿಲ್ಲ. ಅವರಿಂದ ತಕ್ಕಪಾಠ ಕಲಿಸದೇ ಬಿಡುವುದಿಲ್ಲ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ MLA Channabasappa ಗುಡುಗಿದರು.
ಅವರು ಇಂದು ಬಿಜೆಪಿ ಯುವಮೋರ್ಚಾ ಶಿವಮೊಗ್ಗ ನಗರ ಘಟಕವು ಮಲ್ಲಿಕಾರ್ಜುನ್ ಖರ್ಗೆ ಅವರ ಪ್ರಚೋದನಕಾರಿ ಹೇಳಿಕೆ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆ ಮತ್ತು ಪ್ರತಿಕೃತಿ ದಹನದಲ್ಲಿ ಮಾತನಾಡಿ, ಮೊದಲಿನಿಂದಲೂ ಕಾಂಗ್ರೆಸ್ ದೇಶಕ್ಕೆ ಅಪಮಾನ ಮಾಡುತ್ತಲೇ ಬಂದಿದೆ. ಭಯೋತ್ಪಾದಕರನ್ನು ಅಪ್ಪಿಕೊಳ್ಳುವ ಮನಸ್ಥಿತಿಯನ್ನು ಹೊಂದಿದೆ. ಮಲ್ಲಿಕಾರ್ಜುನ್ ಖರ್ಗೆ Mallikarjuna Kharge ಮತ್ತು ರಾಜ್ಯದಲ್ಲಿರುವ ಪ್ರಿಯಾಂಕ್ ಖರ್ಗೆ ಅವರ ರಾಜಕೀಯ ಹೇಳಿಕೆಗಳಿಂದ ಜನರು ಅವರನ್ನು ಈಗಾಗಲೇ ತಿರಸ್ಕರಿಸಿದ್ದಾರೆ. ಇದು ಹೀಗೆ ಮುಂದುವರಿದರೆ ಕಾಂಗ್ರೆಸ್ಸನ್ನು ಭೂಗತಕ್ಕೆ ತೆಗೆದುಕೊಂಡು ಹೋಗಿಬಿಡುತ್ತಾರೆ ಎಂದು ಕುಟುಕಿದರು.
ಶ್ರೀಮತಿ ಇಂದಿರಾಗಾಂಧಿ Indira Gandhi ಅವರ ಅಂಗರಕ್ಷಕರಾಗಿದ್ದ ಬಿಂದ್ರನ್‍ವಾಲೆಯೇ ಅವರನ್ನು ಹತ್ಯೆಗೈದಿದ್ದು ಕಾಂಗ್ರೆಸ್ ಇನ್ನೂ ಪಾಠ ಕಲಿತಿಲ್ಲ. ಅದನ್ನು ನೆನಪು ಮಾಡಿಕೊಂಡು ಕಾಂಗ್ರೆಸ್ ಮುನ್ನಡೆಯಬೇಕಾಗಿತ್ತು. ಪಾಕಿಸ್ತಾನದವರಿಗೆ ನರೇಂದ್ರಮೋದಿ ಭಯೋತ್ಪಾದಕತೆಯನ್ನು ಗಂಟುಮೂಟೆ ಕಟ್ಟಿ ಎಸೆದಿದ್ದು ಇನ್ನು ಮನವರಿಕೆಯಾಗಿಲ್ಲ. ಭಯೋತ್ಪಾದನೆ ನಿರ್ಮೂಲನೆಯೇ ನರೇಂದ್ರಮೋದಿಯವರ ಗುರಿಯಾಗಿದೆ. ಆದರೆ ಅವರನ್ನೇ ಭಯೋತ್ಪಾದಕರು ಎಂದು ಕರೆಯುತ್ತಿರುವ ನಿಮ್ಮನ್ನು ಮನುಷ್ಯತ್ವ ಇದ್ದವರು ಅಂತ ಹೇಳಬೇಕೇ ಎಂದು ಕಿಡಿಕಾರಿದರು.
ಮಲ್ಲಿಕಾರ್ಜುನ್ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಅವರೇ ಕಾಂಗ್ರೆಸ್‍ಗೆ ಕೊನೆ ಮೊಳೆ ಹೊಡೆಯಲು ತಯಾರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಸಂಪೂರ್ಣ ನಿರ್ನಾಮವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಗರಾಧ್ಯಕ್ಷ ಮೋಹನ್‍ರೆಡ್ಡಿ, ಪ್ರಮುಖರಾದ ಜ್ಞಾನೇಶ್ವರ, ಎಸ್.ಎಸ್. ಜ್ಯೋತಿಪ್ರಕಾಶ್, ಪ್ರಶಾಂತ ಕುಕ್ಕೆ, ರಾಹುಲ್‍ಬಿದಿರೆ, ಕೆ.ವಿ. ಅಣ್ಣಪ್ಪ, ಸುರೇಖಾ ಮುರಳೀಧರ್, ರಶ್ಮಿ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















