ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೇಸಿಗೆ ರಜೆಯ ಅವಧಿಯಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೈಲ್ವೆಯು #SouthWesternRailway ಎಸ್’ಎಂವಿಟಿ ಬೆಂಗಳೂರು- ಬೆಳಗಾವಿ- ಎಸ್’ಎಂವಿಟಿ ಬೆಂಗಳೂರು ನಡುವೆ ವಿಶೇಷ ಎಕ್ಸ್’ಪ್ರೆಸ್ ರೈಲನ್ನು ಓಡಿಸಲು ನಿರ್ಧರಿಸಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ನೀಡಿದ್ದು, ವಿಶೇಷ ರೈಲು ಸಂಚಾರದ ವಿವರಗಳು ಹೀಗಿವೆ.
Also Read>> ಶೀಘ್ರ ಬೆಂಗಳೂರು-ಮಂಗಳೂರು ವಂದೇ ಭಾರತ್, ಹುಬ್ಬಳ್ಳಿಗೆ 1, ಮುಂಬೈಗೆ 2 ಹೊಸ ರೈಲು
06503 ಸಂಖ್ಯೆಯ ವಿಶೇಷ ಎಕ್ಸ್’ಪ್ರೆಸ್ 2026ರ ಏಪ್ರಿಲ್ 30ರಂದು (ಗುರುವಾರ) ಸಂಜೆ 7.00ಕ್ಕೆ ಎಸ್’ಎಂವಿಟಿ ಬೆಂಗಳೂರಿನಿಂದ ಹೊರಟು, ಮರು ದಿನ ಶುಕ್ರವಾರ ಬೆಳಗ್ಗೆ 7.35ಕ್ಕೆ ಬೆಳಗಾವಿ #Belgaum ರೈಲು ನಿಲ್ದಾಣವನ್ನು ತಲುಪಲಿದೆ (ಒಂದು ಟ್ರಿಪ್).
ಇದೇ ರೀತಿ, ರೈಲು ಸಂಖ್ಯೆ 06504 ವಿಶೇಷ ಎಕ್ಸ್’ಪ್ರೆಸ್ 2026ರ ಮೇ 3ರಂದು (ಭಾನುವಾರ) ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಟು, ಮರು ದಿನ ಸೋಮವಾರ ಬೆಳಗ್ಗೆ 5.00ಕ್ಕೆ ಎಸ್’ಎಂವಿಟಿ ಬೆಂಗಳೂರಿಗೆ #Bengaluru ತಲುಪಲಿದೆ (ಒಂದು ಟ್ರಿಪ್).
Also Read>> ಒಳಮೀಸಲಾತಿ ಪ್ರಕಟಣೆ ಸರ್ಕಾರದಿಂದ ದಲಿತರಿಗೆ ಆಗುತ್ತಿರುವ ಮೋಸ: ಕೆ.ಎಸ್. ಈಶ್ವರಪ್ಪ ಗುಡುಗು
ಈ ವಿಶೇಷ ರೈಲು ತನ್ನ ಸಂಚಾರದಲ್ಲಿ (ಎರಡು ದಿಕ್ಕುಗಳಲ್ಲಿ) ಚಿಕ್ಕಬಾಣಾವರ, ತುಮಕೂರು, ಸಂಪಿಗೆ ರೋಡ್, ಅರಸಿಕೇರಿ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಕರ್ಜಗಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಹಾಗೂ ಖಾನಾಪುರ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.
ರೈಲು ಒಟ್ಟು 19 ಬೋಗಿಗಳನ್ನು ಹೊಂದಿದ್ದು, ಅವುಗಳಲ್ಲಿ 2 ಎಸಿ 2-ಟೈರ್, 4 ಎಸಿ 3-ಟೈರ್, 7 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಹಾಗೂ 2 ಎಸ್’ಎಲ್‌ಆರಡಿ ಬೋಗಿಗಳು ಸೇರಿವೆ. ಪ್ರಯಾಣಿಕರು ಈ ವಿಶೇಷ ರೈಲಿನ ಸದುಪಯೋಗವನ್ನು ಪಡೆದುಕೊಳ್ಳುಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















