ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತಾಯಿಯೊಂದಿಗೆ ನಗುತ್ತಾ ಆರಾಮವಾಗಿ ಮಾತನಾಡುತ್ತಿದ್ದ ವೇಳೆಯೇ ಬ್ರೈನ್ ಸ್ಟ್ರೋಕ್ #BrainStroke ಆಗಿ 25 ವರ್ಷದ ಯುವತಿಯೊಬ್ಬರು ಮೃತಪಟ್ಟಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.
ಮೃತ ಟೆಕ್ಕಿ ಯುವತಿಯನ್ನು ಹಾಸನ ಜಿಲ್ಲೆಯ ಶ್ವೇತಾ(25) ಎಂದು ಗುರುತಿಸಲಾಗಿದೆ.
Also Read>> ಶಿವಮೊಗ್ಗ ಗ್ರಾಮಾಂತರ | ಭಾರೀ ಮಳೆಗೆ ಅಪಾರ ಹಾನಿ | ಸ್ಥಳಕ್ಕೆ ಎಂಎಲ್‌ಸಿ ಡಾ.ಸರ್ಜಿ ಭೇಟಿ
ಮೊನ್ನೆ ಶನಿವಾರ ಕೆಲಸ ಮುಗಿಸಿ ಮನೆಗೆ ಬಂದ ಶ್ವೇತಾ ತಾಯಿಯ ಜೊತೆ ನಗುನಗುತ್ತಾ ಮಾತನಾಡುತ್ತಿರುವಾಗಲೇ ಏಕಾಏಕಿ ಕುಸಿದು ಬಿದ್ದು ಮಾತನಾಡಲಾರದ ಸ್ಥಿತಿ ತಲುಪಿದ್ದರು. ತಕ್ಷಣವೇ ಬೆಂಗಳೂರಿಗೆ ಕರೆತರುವಾಗಲೇ ಶ್ವೇತಾ ಕೋಮಾಗೆ #Coma ಜಾರಿದ್ದರು.
ದುಃಖದ ಮಧ್ಯೆಯೇ ಬ್ರೈನ್ ನಿಷ್ಕ್ರಿಯಗೊಂಡಿದ್ದರಿಂದ ಪೋಷಕರು ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರು.
ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೇ ಶ್ವೇತಾ ಮೃತಪಟ್ಟ ಹಿನ್ನೆಲೆಯಲ್ಲಿ ಅಂಗಾಂಗ ದಾನ ನಡೆಸಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಸದ್ಯ ಶ್ವೇತಾ ಮೃತದೇಹವನ್ನು ಹಾಸನಕ್ಕೆ ಶಿಫ್ಟ್ ಮಾಡಲಾಗಿದೆ. ಹಾಸನದಲ್ಲಿ ಸರಣಿ ಹೃದಯಘಾತಕ್ಕೆ ಯುವಜನತೆ ಬಲಿಯಾಗಿ ಆತಂಕ ಸೃಷ್ಟಿಯಾಗಿತ್ತು.
ಈಗ ಶ್ವೇತಾ ಪ್ರಕರಣವೂ ಆತಂಕಕ್ಕೆ ಕಾರಣವಾಗಿದೆ. ಯಾವುದೇ ಅನಾರೋಗ್ಯ ಸಮಸ್ಯೆ ಅಥವಾ ಸಣ್ಣ ಗುಣಲಕ್ಷಣಗಳು ಇಲ್ಲದೇ ಆರೋಗ್ಯವಾಗಿದ್ದ ಶ್ವೇತಾ ಏಕಾಏಕಿ ಬ್ರೈನ್ ಸ್ಟ್ರೋಕ್’ನಿಂದ ಸಾವನ್ನಪ್ಪಿರುವುದು ಆತಂಕ ಮೂಡಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















