ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಛಲವಿದ್ದರೆ ಜೀವನದಲ್ಲಿ ಸಾಧನೆ ಸಾಧ್ಯ. ಸಾಧನೆಗೆ ಏನೇನು ಬೇಕೋ ಅದೆಲ್ಲವೂ ನಮ್ಮೊಳಗೇ ಇದೆ. ನಾವು ಪ್ರಯತ್ನ ಪಡಬೇಕು ಎಂದು ಸದ್ಭಾವನ ಟ್ರಸ್ಟ್‌ನ ಅಧ್ಯಕ್ಷರು, ಕಾಂಗ್ರೆಸ್‌ನ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಶ್ರೀಕಾಂತ್ ಹೇಳಿದರು.
ಅವರು ಇಂದು ಬೆಳಗ್ಗೆ ಸದ್ಭಾವನ ಟ್ರಸ್ಟ್‌ನಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಬೃಂದಾ 590(98.33), ರಂಜಿತಾ ಜಿ 596(99.33), ವಶಿಷ್ಟ ಎನ್.ಎಸ್.595 (99.17), ಮಹಿನ್ ಖಾನಂ ಆಫ್ರಿದಿ 596 (99.33) ಹಾಗೂ ಸೋನಿಯಾ ಅವರ ಮನೆಗೆ ಭೇಟಿ ನೀಡಿ ಅಭಿನಂದಿಸಿ ಮಾತನಾಡಿದರು.
ಸಾಧನೆ ಮಾಡಿದವರನ್ನು ಗುರುತಿಸಿ ಶುಭಹಾರೈಸುವುದರ ಜೊತೆಗೆ ಸನ್ಮಾನಿಸಿ ಪ್ರೇರಣೆ ನೀಡಿದರೆ ಅವರು ಇನ್ನಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಉತ್ತಮವಾಗಿ ಅಧ್ಯಯನ ಮಾಡಿ ಉನ್ನತ ಹುದ್ದೆ ಅಲಂಕರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಯಮುನಾ ರಂಗೇಗೌಡ, ಶಿವಮೊಗ್ಗ ಯುವ ಕಾಂಗ್ರೆಸ್ ಮುಖಂಡ ವಿನಯ್ ತಾಂದ್ಲೆ, ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯ ಬಸವರಾಜ ಹಾಗೂ ಮಂಜುನಾಥ್ ನವುಲೆ, ಜಿಲ್ಲಾ ಅಲೆಮಾರಿ ನಿಗಮದ ಅನುಷ್ಠಾನ ಸಮಿತಿಯ ಸದಸ್ಯ ಸಂದೀಪ್, ಶಿವಕುಮಾರ್, ಅನಿಲ್ ಆಚಾರ್, ಭರತ್, ಅವಿನಾಶ್, ಕುರುವಳ್ಳಿ ನಾಗರಾಜ್ ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















