ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಗೋಹತ್ಯೆಯನ್ನು cow slaughter ಸಂಪೂರ್ಣವಾಗಿ ನಿಷೇಧಮಾಡುವಂತೆ ಒತ್ತಾಯಿಸಿ ಕೆ.ಆರ್.ಪುರ ಬಸ್ ನಿಲ್ದಾಣದಿಂದ ಬೆಂಗಳೂರು ಪೂರ್ವ ತಾಲ್ಲೂಕಿನ ತಹಶಿಲ್ದಾರ್ ಕಚೇರಿ ವರೆಗೆ ಹಲಸೂರಿನ ಉದಾಸೀನ್ ಮಠದ ಅಧ್ಯಕ್ಷ ಶ್ರೀಬಾಲಯೋಗಿ ಗಣೇಶ್ ದಾಸ್ ಜಿ ಹಾಗೂ ಸಮಾಜ ಸೇವಕ ಕೆ.ಹೇಮಂತ್ ನೇತೃತ್ವದಲ್ಲಿ ಕಲ್ನಡಿಗೆ ಜಾಥ ನಡೆಸಿ ತಹಶಿಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಲಸೂರಿನ ಉದಾಸೀನ್ ಮಠದ ಅಧ್ಯಕ್ಷ ಶ್ರೀಬಾಲಯೋಗಿ ಗಣೇಶ್ ದಾಸ್ ಜಿ ಅವರು ಸನಾತನ ಧರ್ಮದಲ್ಲಿ ಗೋಮಾತೆಗೆ ಎರಡನೇ ತಾಯಿಯ ಪೂಜನೀಯ ಸ್ಥಾನಮಾನ ನೀಡಲಾಗಿದೆ.ಗೋ ಮಾತೆಯನ್ನು ನಾವು ಪೂಜಿಸುತ್ತೇವೆ. ಸರ್ಕಾರಕ್ಕೆ ಅಷ್ಟೇ ಅಲ್ಲ, ನಾವು ಸಮಾಜದಲ್ಲಿ ಸಹ ಕಳಕಳಿ ಮೂಡಿಸಬೇಕಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಗೋಹತ್ಯೆ ನಿಷೇಧವಿದ್ದರು ಅಕ್ರಮವಾಗಿ ಗೋಹತ್ಯೆ ನಡೆಯುತ್ತಿದೆ, ಎಲ್ಲಾ ಗ್ರಾಮಗಳಲ್ಲೂ ಗೋ ಮಾಂಸ ಮಾರಾಟ ಮಾಡುತ್ತಿದ್ದಾರೆ.ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗೋಹತ್ಯೆ ನಿಷೇಧ ಕಾನೂನಿನ ಬಗ್ಗೆ ಅವರಿಗೆ ಅರಿವು ಮೂಡಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಸಮಾಜ ಸೇವಕ ಕೆ.ಹೇಮಂತ್ ಅವರು ಮಾತನಾಡಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೋಹತ್ಯೆ ಕಾನೂನು ಬಗ್ಗೆ ಕ್ರಮ ಕೈಗೊಂಡಿತ್ತು,ಈಗಿರುವ ಕಾಂಗ್ರೆಸ್ ಸರ್ಕಾರವು ಸಹ ಇದನ್ನು ಮುಂದುವರೆಸಿಕೊಂಡು ಹೋಗುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದರು.ಬೆಂಗಳೂರು ಪೂರ್ವ ತಾಲ್ಲೂಕು ತಹಶಿಲ್ದಾರ್ ಗೋಹತ್ಯೆ ನಿಷೇಧ ಸೇರಿದಂತೆ ಗೋಮಾತೆಗೆ ರಾಷ್ಟ್ರೀಯ ಮಟ್ಟದಲ್ಲಿ ಗೌರವ ದೊರಕಿಸಿ ಕೋಡುವಂತೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತೇಜಕುಮಾರ್ ,ಮುಕುಂದ್ , ನರಸಿಂಹಪ್ರಸಾದ್ , ಗಿರೀಶ್ ಬಾಬು, ಸುರೇಶ್, ನವೀನ್ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















