ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಎಸ್.ಆರ್. ನಾಗಪ್ಪಶೆಟ್ಟಿ ಸ್ಮಾರಕ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜಿನ (ಎಸ್.ಆರ್.ಎನ್.ಎಂ) ಬಿಸಿಎ ಮತ್ತು ಬಿಎಸ್ಸಿ ವಿಭಾಗದ ವಿದ್ಯಾರ್ಥಿಗಳು, ಕುವೆಂಪು ವಿಶ್ವವಿದ್ಯಾಲಯದ Kuvempu University 2024ನೇ ಸಾಲಿನಲ್ಲಿ ವಿವಿಧ ರ‍್ಯಾಂಕ್‌ಗಳನ್ನು ಪಡೆದಿದ್ದು, ಎರಡು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ಬಿಸಿಎ ವಿಭಾಗದಲ್ಲಿ ಮಾನಸ ಟಿ.ಸಿ (ಪ್ರಥಮ) ರ‍್ಯಾಂಕ್ ಪಡೆದಿದ್ದು, ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಬಿಎಸ್ಸಿ ವಿಭಾಗದಲ್ಲಿ ರಶ್ಮಿ ಆರ್.ಎ (ದ್ವಿತೀಯ) ರ‍್ಯಾಂಕ್ ಜೊತೆಯಲ್ಲಿ ಎಲೆಕ್ಟ್ರಾನಿಕ್ಸ್ ಚಿನ್ನದ ಪದಕ ಪಡೆದಿದ್ದಾರೆ. ಬಿಎಸ್ಸಿ ವಿಭಾಗದಲ್ಲಿ ಹೇಮಾ ಜೆ. ಗೋರ್ಪಡೆ ಹಾಗೂ ಪ್ರೀತಿ ಎಸ್.ಎ (ತೃತೀಯ), ಅನು ಸೋಮಶೇಖರ್ (ನಾಲ್ಕನೇ), ತೇಜಶ್ರೀ.ಎನ್.ಆರ್ (ಆರನೇ) ಹಾಗೂ ಸ್ನೇಹ ಕೆ.ಎಂ (ಹತ್ತನೇ) ರ‍್ಯಾಂಕ್ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಎಲ್. ಅರವಿಂದ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಎನ್.ಇ.ಎಸ್ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






















