ಕಲ್ಪ ಮೀಡಿಯಾ ಹೌಸ್ | ಚಿತ್ರದುರ್ಗ |
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರಲ್ಲಿ Second PUC Annual Examination ತುರುವನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ಪಿ. ವಾಣಿ ಗ್ರಾಮೀಣ ವಿದ್ಯಾರ್ಥಿನಿಯು ಮರು ಮೌಲ್ಯಮಾಪನದಲ್ಲಿ Re-evaluation 581 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಪಿ. ವಾಣಿ ಅವರು ಮೊದಲಿಗೆ 578 ಅಂಕಗಳನ್ನು ಪಡೆದು ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದರು. ರಾಜ್ಯಶಾಸ್ತ್ರ ವಿಷಯದಲ್ಲಿ 90 ಅಂಕಗಳು ಬಂದಿದ್ದರಿಂದ ಆ ಉತ್ತರ ಪತ್ರಿಕೆಯನ್ನು ಮರು ಮೌಲ್ಯಮಾಪನಕ್ಕೊಳಪಡಿಸಿದಾಗ 3 ಅಂಕಗಳು ಸೇರ್ಪಡೆಗೊಂಡು 93 ಅಂಕಗಳು ಬಂದಿದ್ದರಿಂದ ಒಟ್ಟು 581 ಅಂಕಗಳೊಂದಿಗೆ ಶೇ.96.83 ರಷ್ಟು ಫಲಿತಾಂಶ ದಾಖಲಿಸಿ ಕಲಾ ವಿಭಾಗದಲ್ಲಿ ಚಿತ್ರದುರ್ಗ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
Also read: ಶಿವಮೊಗ್ಗ | ರಾಘವೇಂದ್ರ ಶೇಟ್’ಗೆ ಪಿಎಚ್’ಡಿ ಪದವಿ ಪ್ರದಾನ
ತುರುವನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪಿ. ವಾಣಿಯ ಈ ಅತ್ಯುತ್ತಮ ಸಾಧನೆಗೆ ಚಳ್ಳಕೆರೆ ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಟಿ. ರಘುಮೂರ್ತಿ, ಉಪಾಧ್ಯಕ್ಷ ಟಿ. ಬಾಬುರೆಡ್ಡಿ, ಸದಸ್ಯರು, ಕಾಲೇಜಿನ ಪ್ರಾಚಾರ್ಯ ಡಾ.ಬಿ. ಕೃಷ್ಣಪ್ಪ ಹಾಗೂ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















