ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿರಾಣಿ ಸಮೂಹ ಸಂಸ್ಥೆಯ ವಿಜಯ ಸೌಹಾರ್ದ ಬ್ಯಾಂಕ್‌ನ Vijaya Souharda Bank 71ನೇ ಶಾಖೆ ಶಿವಮೊಗ್ಗ ನಗರದಲ್ಲಿ ಆರಂಭಗೊಂಡಿದೆ ಎಂದು ಸಂಸ್ಥೆಯ ಮಾಲೀಕ ಹಾಗೂ ಮಾಜಿ ಸಚಿವ ಹೆಸರಾಂತ ಉದ್ಯಮಿ ಮುರುಗೇಶ್ ನಿರಾಣಿ Murugesh Nirani ತಿಳಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯಾದಾದ್ಯಂತ ನಮ್ಮ ಸಮೂಹ ಸಂಸ್ಥೆಯ ಶಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು, ವಿಶಾಲ ಸೌಹಾರ್ದ ಬ್ಯಾಂಕ್ 25 ಶಾಖೆಗಳು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದರು.
19 ವರ್ಷಗಳ ಹಿಂದೆ ಸ್ಥಾಪಿತವಾದ ನಮ್ಮ ಸೌಹಾರ್ದ ಬ್ಯಾಂಕ್ 48 ಸಾವಿರ ಕೋಟಿ ವಹಿವಾಟನ್ನು ನಡೆಸುತ್ತಿದೆ, ಕಳೆದ ವರ್ಷ 46 ಸಾವಿರ ಕೋಟಿ ವಹಿವಾಟು ನಡೆಸಿತ್ತು ಎಂದ ಅವರು, ವರ್ಷದಿಂದ ವರ್ಷಕ್ಕೆ ನಮ್ಮ ವಹಿವಾಟು ಏರಿಕೆಯ ಹಾದಿಯಲ್ಲಿಯೇ ಸಾಗುತ್ತಿದೆ. ಕಳೆದ ವರ್ಷ 60 ಕೋಟಿ ಲಾಭವನ್ನು ಗಳಿಸಿದೆ. ಎನ್‌ಪಿಎ ಶೇ.1ಕ್ಕಿಂತ ಕಡಿಮೆ ಇದೆ ಎಂದು ತಿಳಿಸಿದರು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇರುವಂತಹ ಎಲ್ಲಾ ಸೌಲಭ್ಯಗಳು ನಮ್ಮ ಬ್ಯಾಂಕಿನಲ್ಲೇ ಲಭ್ಯವಿದೆ. ಆದರೆ ಗ್ರಾಹಕರಿಗೆ ಯಾವುದೇ ಸೇವಾಶುಲ್ಕ ವಿಧಿಸುವುದಿಲ್ಲ ಎಂದ ಅವರು, ಜನಸ್ನೇಹಿಯಾಗಿ ನಮ್ಮ ಬ್ಯಾಂಕ್ ಇಲ್ಲಿಯವರೆಗೂ ಹಾಗೂ ಮುಂದೆಯೂ ಸಹ ಕಾರ್ಯ ನಿರ್ವಹಿಸಿಕೊಂಡು ಹೋಗಲಿದೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್, ಇತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















