ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಬದ್ಧವಾಗಿದ್ದು, ಸ್ಥಳೀಯವಾಗಿಯೂ ಅದಕ್ಕೆ ಬೇಕಾದ ಮೂಲಭೂತ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ಹೇಳಿದರು.
ಜಿಲ್ಲೆಯ ಆನಂದಪುರಂ ಹಾಗೂ ಶಿಕಾರಿಪುರ ನಡುವಣ ಬೈರಾಪುರ ಬಳಿಯ ಅಂಬ್ಲಿಗೊಳ ಜಲಾಶಯದ ಸನಿಹದಲ್ಲಿಯೇ ನೂತವಾಗಿ ನಿರ್ಮಾಣಗೊಂಡ ಲಾರ್ಡ್ ಸಹ್ಯಾದ್ರಿ ರೆಸಾರ್ಟ್ ಅನ್ನು ಶುಕ್ರವಾರ ಬೆಳಗ್ಗೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಶಿವಮೊಗ್ಗದಂತಹ 2ನೇ ಹಂತದ ನಗರದಲ್ಲೂ ಕೂಡ ಇಷ್ಟು ದೊಡ್ಡ ಮಟ್ಟದ ಬಂಡವಾಳ ಹೂಡಿಕೆ ಮಾಡಿ ಒಳ್ಳೆಯ ರೆಸಾರ್ಟ್ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಅಂಬ್ಲಿಗೊಳ ಜಲಾಶಯದ ಸನಿಹದಲ್ಲಿಯೇ ಈ ರೆಸಾರ್ಟ್ ಇರುವುದು ಇದಕ್ಕೆ ವರವಾಗಿದೆ. ಈ ಭಾಗದ ಪ್ರವಾಸೋದ್ಯಮದ ಅಭಿವೃದ್ದಿಗೆ ಇಂಬು ನೀಡಿದಂತಾಗಿದೆ. ಅಂಬ್ಲಿಗೊಳ ಜಲಾಶಯದಲ್ಲಿ ಬೊಟಿಂಗ್ ವ್ಯವಸ್ಥೆಗೆ ಪ್ರಯತ್ನ ನಡೆಸಲಾಗುವುದು. ಈನಿಟ್ಟಿನಲ್ಲಿ ಉದ್ಯಮಿಗಳು ಕೂಡ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ರೈತ ನಾಯಕ ಬಿ. ಎಸ್. ಯಡಿಯೂರಪ್ಪ ಅವರನ್ನು ಬೆಳೆಸಿದ ಶಿಕಾರಿಪುರ ತಾಲೂಕಿಗೆ ಹೊಂದಿಕೊಂಡಂತಿರುವ ಈ ಜಾಗದಲ್ಲಿ ರೆಸಾರ್ಟ್ ನಿರ್ಮಾಣವಾಗಿದ್ದರೂ, ಭೌಗೋಳಿಕವಾಗಿ ಸಾಗರ ತಾಲೂಕು ವ್ಯಾಪ್ತಿಯಲ್ಲಿ ಈ ರೆಸಾರ್ಟ್ ಇದೆ. ಆದರೆ ಸಾಗರ- ಶಿಕಾರಿಪುರ ನಡುವೆ ಇರುವ ಕಾರಣಕ್ಕೆ ಈಭಾಗದ ಪ್ರವಾಸಿ ತಾಣಗಳಿಗೆ ಬರುವ ಜನರಿಗೆ ಹೆಚ್ಚು ಅನುಕೂಲಕರವಾಗಿದೆ.ಈ ರೀತಿಯ ಬೆಳವಣಿಗೆ ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿ ಗೆ ಅನುಕೂಲವಾಗಲಿದೆ ಎಂದರು.
ಪ್ರವಾಸೋದ್ಯಮದ ದೃಷ್ಡಿಯಲ್ಲಿ ಅಂಬ್ಲಿಗೊಳ ಜಲಾಶಯದಲ್ಲಿ ಬೊಂಟಿಂಗ್ ವ್ಯವಸ್ಥೆ ಮಾಡಿದರೆ ಈ ರೆಸಾರ್ಟ್ ಗೂ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಜಲಾಶಯದಲ್ಲಿ ನ ನೀರಿನ ನಿರ್ವಹಣೆ, ಮೂಲಭೂತ ಸೌಕರ್ಯ ಎಲ್ಲವಕ್ಕೂ ಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಮೋಹಕ ಪರಿಸರ, ಅದ್ಬುತ ಅನುಭವ
ಆನಂದಪುರಂ ಹಾಗೂ ಶಿಕಾರಿಪುರ ನಡುವಣ ಬೈರಾಪುರ ಬಳಿ ಮುಖ್ಯರಸ್ತೆಗೆ ಹೊಂದಿಕೊಂಡಂತೆಯೇ ಇರುವ ಲಾರ್ಡ್ ಸಹ್ಯಾದ್ರಿ ರೆಸಾರ್ಟ್ ಹಚ್ವ ಹಸಿರಿನ ಪರಿಸರದ ನಡುವೆ ನಿರ್ಮಾಣವಾಗಿದ್ದು, ನೋಡುಗರಿಗೆ ಒಂದು ಕ್ಷಣ ಮೋಹಕ ಹುಟ್ಟಿಸುತ್ತದೆ. ಸುತ್ತ ಹಚ್ಚ ಹಸಿರಿನ ತೋಟಗಳು, ಪಕ್ಕದಲ್ಲಿಯೇ ಅಂಬ್ಲಿಗೋಳ ಜಲಾಶಯದ ಬಳಿಯೇ ಇರುವ ರೆಸಾರ್ಟ್, ವೀಕೆಂಡ್ ಸಮಯದಲ್ಲಿ ವಿಶ್ರಾಂತಿ ಗೆ ಹೇಳಿಮಾಡಿಸಿದಂತಿದೆ. ಸುಮಾರು 14 ಎಕರೆ ಪ್ರದೇಶದಲ್ಲಿ “ಗಿಡ ಮರಗಳ ನಡುವೆ 50ಕ್ಕೂ ಹೆಚ್ಚು ವಿಲ್ಲಾಗಳು, ಮತ್ತನೆಯ ಲಾನ್ ಅದ್ಬೂತ ಅನುಭವ ನೀಡುತ್ತದೆ.
ಈ ಸಂದರ್ಭದಲ್ಲಿ ಲಾರ್ಡ್ ಸಹ್ಯಾದ್ರಿ ರೆಸಾರ್ಟ್ ನ ವ್ಯವಸ್ಥಾಪಕ ನಿರ್ದೇಶಕ ಪುಷ್ಪೇಂದ್ರ ಬನ್ಸಾಲ್, ಸಹ್ಯಾದ್ರಿ ಡ್ರಿಮ್ ಲ್ಯಾಂಡ್ ಪ್ರೆವೇಟ್ ಲಿಮಿಟೆಡ್ ನ ಬಿ. ಎಸ್. ವಿಶ್ವನಾಥ್, ಮಾಜಿ ಶಾಸಕ ಅಶೋಕ್ ನಾಯ್ಕ್, ಜಿಪಂ ಮಾಜಿ ಸದಸ್ಯ ರತ್ನಾಕರ್ ಹುನುಗೋಡು, ಲಾರ್ಡ್ ಸಹ್ಯಾದ್ರಿ ರೆಸಾರ್ಟ್ ನ ಮಾಲೀಕರಲ್ಲಿ ಒಬ್ಬರಾದ ಗಂಗಾನಾಯ್ಕ್ ಸೇರಿದಂತೆ ಹಲವರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















