No Result
View All Result
Kriti Sanon Raksha Bandhan Controversy GIVA Withdraw Advt copy
English Articles

Kriti Sanon’s Raksha Bandhan Ad Faces Backlash; GIVA Withdraws Campaign

by kalpa News
August 26, 2026
0

Kalpa Media House  |  Bangalore  | Jewellery brand GIVA has withdrawn its Raksha Bandhan advertisement featuring Bollywood actor Kriti Sanon following...

Read moreDetails
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
  • Advertise With Us
  • Grievances
  • About Us
  • Contact Us
Thursday, August 27, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಭಾರತೀಯ ವೃತ್ತಿಪರರು ಉದ್ಯೋಗ ವಂಚನೆಗಳ ಬಗ್ಗೆ ಹೆಚ್ಚು ಜಾಗರೂಕರಾಗಿದ್ದಾರೆ, ಆದರೆ ಒತ್ತಡದ ಕಾರಣ ಅಪಾಯ ಸಾಧ್ಯತೆ

ಲಿಂಕ್ಡ್‌ ಇನ್‌ ನ ನೂತನ ಸಂಶೋಧನಾ ವರದಿ ಬಿಡುಗಡೆ

kalpa News by kalpa News
May 9, 2026
in Special Articles
1
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಭಾರತ  |

  • 82% ಭಾರತೀಯ ವೃತ್ತಿಪರರು ಈಗ ಉದ್ಯೋಗದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಲು ತುಸು ಹಿಂಜರಿಯುತ್ತಾರೆ; ಆದರೆ ಜೆನ್ ಜೀಗಳು ಈ ನಿಟ್ಟಿನಲ್ಲಿ ಹೆಚ್ಚಿನ ಅಪಾಯ ಎದುರಿಸುತ್ತಿದ್ದಾರೆ. ಅವರಲ್ಲಿ ಅರ್ಧದಷ್ಟು (49%) ಮಂದಿ ತಾವು ವಂಚನೆಗೆ ಬಲಿಯಾಗುವ ಹಂತಕ್ಕೆ ತಲುಪಿದ್ದಾಗಿ ಒಪ್ಪಿಕೊಂಡಿದ್ದಾರೆ.
  • ಅರ್ಧಕ್ಕಿಂತ ಹೆಚ್ಚು (53%) ಭಾರತೀಯ ವೃತ್ತಿಪರರು ಒಂದು ವರ್ಷದ ಹಿಂದಿಗಿಂತ ಈಗ ಉದ್ಯೋಗಾವಕಾಶ ವಂಚನೆಯೇ ಎಂದು ಪ್ರಶ್ನಿಸುವ ಹಂತಕ್ಕೆ ಬಂದಿದ್ದಾರೆ.

ಭಾರತೀಯ ವೃತ್ತಿಪರರು ತಮ್ಮ ಉದ್ಯೋಗ ಹುಡುಕಾಟದ ಸಮಯದಲ್ಲಿ ಎದುರಾಗುವ ಉದ್ಯೋಗ ವಂಚನೆಗಳ ಬಗ್ಗೆ ಹೆಚ್ಚು ಜಾಗರೂಕರಾಗುತ್ತಿದ್ದಾರೆ ಎಂದು ಲಿಂಕ್ಡ್‌ ಇನ್‌ ನ Linked In ಹೊಸ ಸಂಶೋಧನಾ ವರದಿ ತಿಳಿಸಿದೆ. ಐವರಲ್ಲಿ ನಾಲ್ಕಕ್ಕಿಂತ ಹೆಚ್ಚು (82%) ಮಂದಿ ಯಾವುದೇ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಮೊದಲು ಆ ಉದ್ಯೋಗಾವಕಾಶ ಅಧಿಕೃತವಾಗಿದೆಯೇ ಎಂದು ಪರೀಕ್ಷಿಸುತ್ತಿದ್ದಾರೆ, ಅರ್ಧಕ್ಕಿಂತ ಹೆಚ್ಚು (53%) ಜನರು ಒಂದು ವರ್ಷದ ಹಿಂದಿಗಿಂತ ಈಗ ಉದ್ಯೋಗದ ಬಗ್ಗೆ ಹೆಚ್ಚಿನ ಸಂಶಯ ವ್ಯಕ್ತಪಡಿಸುತ್ತಿರುವುದಾಗಿ ಈ ವರದಿ ತಿಳಿಸಿದೆ.

ಲಿಂಕ್ಡ್‌ ಇನ್‌ ಹೊಸ ಜಾಬ್ ಸರ್ಚ್ ಸೇಫ್ಟಿ ಪಲ್ಸ್ ವರದಿ ಇದೀಗ ಬಿಡುಗಡೆಯಾಗಿದ್ದು, ಈ ವರದಿಯ ಮುಖ್ಯಾಂಶಗಳು ಮಾರುಕಟ್ಟೆಯಲ್ಲಿ ಉದ್ಯೋಗ ವಂಚನೆಗಳ ಬಗ್ಗೆ ಜಾಗೃತಿ ಬೆಳೆಯುತ್ತಿರುವುದನ್ನು ಎತ್ತಿ ತೋರಿಸಿವೆ. ಇದರೊಂದಿಗೆ ವೃತ್ತಿಜೀವನದ ಆರಂಭಿಕ ಹಂತದಲ್ಲಿರುವವರಿಗೆ ಇರುವ ಸೂಕ್ಷ್ಮ ಅಪಾಯಗಳನ್ನೂ ಈ ವರದಿ ತಿಳಿಸಿಕೊಟ್ಟಿದೆ. ಜಾಗೃತಿ ಹೆಚ್ಚುತ್ತಿದ್ದರೂ ಸಹ, ಉತ್ತಮ ಅವಕಾಶಗಳನ್ನು ಪಡೆಯಲೇಬೇಕೆಂಬ ಒತ್ತಡದಿಂದ ಕೆಲವೊಮ್ಮೆ ಜಾಗರೂಕತೆ ಕಡಿಮೆಯಾಗಬಹುದಾಗಿದೆ. ಅದರಲ್ಲೂ ಈ ಅಪಾಯ ವಿಶೇಷವಾಗಿ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ಹೆಚ್ಚು ಕಂಡುಬರುತ್ತಿದೆ.
ವೃತ್ತಿಜೀವನದ ಆರಂಭಿಕ ಹಂತದ ಒತ್ತಡದಿಂದ ಜಾಗರೂಕತೆ ಕಡಿಮೆ

ಎಲ್ಲಾ ವಯೋಮಾನದ ವೃತ್ತಿಪರರು ಕೊಂಚ ಹೆಚ್ಚು ಜಾಗರೂಕರಾಗುತ್ತಿದ್ದರೂ ಸಹ, ವೃತ್ತಿಜೀವನದ ಆರಂಭಿಕ ಹಂತದಲ್ಲಿರುವ ಉದ್ಯೋಗಾಕಾಂಕ್ಷಿಗಳು ಕೆಲವು ನಿರ್ದಿಷ್ಟ ಕ್ಷಣಗಳಲ್ಲಿ ವಂಚನೆಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ವರದಿ ಹೇಳಿದೆ. ಅರ್ಧಕ್ಕಿಂತ ಹೆಚ್ಚು (54%) ಜೆನ್ ಜೀ ಉದ್ಯೋಗಾಕಾಂಕ್ಷಿಗಳು, ಆಕರ್ಷಕ ಅವಕಾಶ ಬಂದಾಗ ಮಿಸ್ ಆಗಬಾರದು ಎಂದುಕೊಂಡು ತಾವು ಆ ಸಂದರ್ಭದಲ್ಲಿ ಎಚ್ಚರಿಕೆ ಸಂಕೇತಗಳನ್ನು ನಿರ್ಲಕ್ಷಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದು ತುರ್ತು ಸಂದರ್ಭ ಮತ್ತು ಸ್ಪರ್ಧೆಯು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಎತ್ತಿ ತೋರಿಸುತ್ತದೆ.

ಭಾರತದ ಸುಮಾರು ಅರ್ಧದಷ್ಟು (49%) ಜೆನ್ ಜೀ ವೃತ್ತಿಪರರು ತಾವು ಉದ್ಯೋಗ ವಂಚನೆಗೆ ಬಲಿಯಾಗುವ ಹಂತಕ್ಕೆ ಬಂದಿದ್ದಾಗಿ ಹೇಳಿದ್ದಾರೆ. ಇದಕ್ಕೆ ಹೋಲಿಸಿದರೆ ಜೆನ್ ಎಕ್ಸ್ ನವರಲ್ಲಿ ಈ ಪ್ರಮಾಣ 36% ರಷ್ಟಿದೆ. ಇದು ಯುವ ಉದ್ಯೋಗಾಕಾಂಕ್ಷಿಗಳು ವಂಚನೆಗೆ ಸಂಬಂಧಿಸಿದಂತೆ ಹೆಚ್ಚು ಬಲಿಯಾಗುತ್ತಿರುವುದನ್ನು ಸೂಚಿಸುತ್ತದೆ.
ಅರ್ಜಿ ಸಲ್ಲಿಸುವ ಮೊದಲೇ ವಂಚನೆಗೆ ಒಳಗಾಗುವ ಸಾಧ್ಯತೆ ಹೆಚ್ಚು

ಉದ್ಯೋಗಾಕಾಂಕ್ಷಿಗಳು ವಂಚನೆಗಳ ಬಗ್ಗೆ ಹೆಚ್ಚು ಆತಂಕ ಅನುಭವಿಸುವ ಕ್ಷಣಗಳೆಂದರೆ, ಉದ್ಯೋಗಗಳನ್ನು ಹುಡುಕುತ್ತಿರುವಾಗ (20%) ಅಥವಾ ನೇಮಕಾತಿದಾರರು ಅಥವಾ ಕಂಪನಿಗಳು ಮೊದಲ ಹಂತದಲ್ಲಿ ಸಂಪರ್ಕ ಮಾಡಿದಾಗ (18%). ಈ ಹಂತವು ವಿವರಗಳಿಗೆ ಮಾತ್ರ ಸೀಮಿತವಾಗಿರುತ್ತವೆ ಮತ್ತು ನಂಬಿಕೆ ಇನ್ನೂ ಮೂಡಿರುವುದಿಲ್ಲ.

ಈ ಹಂತದಲ್ಲಿ ಕೆಲವು ವಂಚಕರು ಅಭ್ಯರ್ಥಿಗಳ ಜೊತೆ ವಿಶ್ವಾಸಾರ್ಹ ವೇದಿಕೆಗಳಿಂದ ಆಚೆಗೆ ಸಂವಹನ ನಡೆಸಲು ಪ್ರಯತ್ನಿಸುವ ಮೂಲಕ ಈ ಆರಂಭಿಕ ಹಂತದ ಲಾಭ ಪಡೆಯುತ್ತಾರೆ ಎಂದು ಲಿಂಕ್ಡ್‌ ಇನ್ ಡೇಟಾ ತೋರಿಸುತ್ತದೆ. ವರದಿಯಾದ ವಂಚನೆಯ ಪ್ರಯತ್ನಗಳಲ್ಲಿ ಶೇ. 90% ರಷ್ಟು ಪ್ರಯತ್ನಗಳು ಬಳಕೆದಾರರನ್ನು ವೈಯಕ್ತಿಕ ಮೆಸೇಜಿಂಗ್ ಆ್ಯಪ್‌ ಗಳಿಗೆ ವರ್ಗಾಯಿಸಿರುವುದು ಕಂಡು ಬಂದಿವೆ. ಅಲ್ಲಿ ಖಾತೆಗಳನ್ನು ಪರಿಶೀಲಿಸುವುದು ಕಷ್ಟಕರವಾಗಿರುತ್ತದೆ ಮತ್ತು ಸಂಭಾಷಣೆಗಳು ಹೆಚ್ಚು ಅನೌಪಚಾರಿಕವಾಗಿರುತ್ತವೆ. ಅಲ್ಲದೆ, ಪ್ಲಾಟ್‌ ಫಾರ್ಮ್‌ ನಿಂದ ಹೊರಗೆ ನಡೆಯುವ ಅರ್ಧಕ್ಕಿಂತ ಹೆಚ್ಚಿನ ವಂಚನೆಯ ಪ್ರಯತ್ನಗಳು ಯಾವುದೇ ವಿಶ್ವಾಸಾರ್ಹತೆ ಮೂಡುವ ಮೊದಲೇ, ಅಂದರೆ ಆರಂಭಿಕ ಸಂದೇಶದಲ್ಲೇ ಸಂಭವಿಸುತ್ತವೆ.
ಉದ್ಯೋಗ ಹುಡುಕಾಟದ ಅಪಾಯಗಳನ್ನು ಕಡಿಮೆ ಮಾಡಲು ಲಿಂಕ್ಡ್‌ ಇನ್ ಪ್ರಯತ್ನ

ಉದ್ಯೋಗ ವಂಚನೆಗಳ ವಿರುದ್ಧ ಲಿಂಕ್ಡ್‌ ಇನ್ ಮೂರು ಹಂತದ ರಕ್ಷಣಾ ವ್ಯವಸ್ಥೆಯನ್ನು ಬಳಸುತ್ತದೆ, ಇದನ್ನು ಸದಸ್ಯರು ಹೆಚ್ಚು ಮಾಹಿತಿಪೂರ್ಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ:

  1. ಪತ್ತೆಹಚ್ಚುವಿಕೆ: ಸದಸ್ಯರು ನೋಡುವ ಮೊದಲೇ ನಕಲಿ ಖಾತೆಗಳು, ವಂಚನೆಯ ಸಂದೇಶಗಳು ಮತ್ತು ಮೋಸದ ಉದ್ಯೋಗ ಪೋಸ್ಟ್‌ ಗಳನ್ನು ಪೂರ್ವಭಾವಿಯಾಗಿ ತಡೆಯಲಾಗುತ್ತದೆ. ಇದರ ಪರಿಣಾಮವಾಗಿ, ಪತ್ತೆಹಚ್ಚಲಾದ ಬಹುಪಾಲು ವಂಚನೆ ಚಟುವಟಿಕೆಗಳನ್ನು ಸದಸ್ಯರ ಕಣ್ಣಿಗೆ ಬೀಳುವ ಮೊದಲೇ ನಿಲ್ಲಿಸಲಾಗುತ್ತದೆ.
  2. ಪರಿಶೀಲನೆ: ಕಂಪನಿಗಳು, ನೇಮಕಾತಿದಾರರು ಮತ್ತು ಉದ್ಯೋಗಗಳಿಗೆ ಸಂಬಂಧಿಸಿದಂತೆ ಅತ್ಯಂತ ನಿರ್ಣಾಯಕ ಕ್ಷಣಗಳಲ್ಲಿ ಸ್ಪಷ್ಟವಾದ ವಿಶ್ವಾಸಾರ್ಹ ಸಂಕೇತಗಳನ್ನು ಒದಗಿಸುವುದು. ಇದರೊಂದಿಗೆ, ಅಂತರ್ನಿರ್ಮಿತ ಭದ್ರತಾ ರಕ್ಷಣೆಯ ವ್ಯಾಪ್ತಿಯಲ್ಲೇ ಇರಲು ಲಿಂಕ್ಡ್‌ ಇನ್ ಮೂಲಕವೇ ಅರ್ಜಿ ಸಲ್ಲಿಸುವ ಮತ್ತು ಸಂವಹನ ನಡೆಸುವ ಸೌಲಭ್ಯವನ್ನು ನೀಡುವುದು.
  3. ರಕ್ಷಣೆ: ಉದ್ಯೋಗಾಕಾಂಕ್ಷಿಗಳನ್ನು ಸುರಕ್ಷಿತವಾಗಿಡಲು ಲಿಂಕ್ಡ್‌ ಇನ್ ಇತ್ತೀಚೆಗೆ ಹೊಸ ಕ್ರಮಗಳನ್ನು ಪರಿಚಯಿಸಿದೆ. ಇದರಲ್ಲಿ ಹೆಚ್ಚಿನ ಅಪಾಯವಿರುವ ಉದ್ಯೋಗದಾತರಿಗೆ ಗುರುತಿನ ಚೀಟಿ ಪರಿಶೀಲನೆಯನ್ನು ಕಡ್ಡಾಯಗೊಳಿಸುವುದು, ವಂಚನೆಯ ಸಾಧ್ಯತೆ ಇರುವ ಪೋಸ್ಟ್‌ ಗಳು ಮತ್ತು ಕಾಮೆಂಟ್‌ ಗಳ ಗೋಚರತೆಯನ್ನು ಕಡಿಮೆ ಮಾಡುವುದು ಹಾಗೂ ಸುಧಾರಿತ ಸ್ಪ್ಯಾಮ್ ಫಿಲ್ಟರಿಂಗ್ ಮತ್ತು ಪತ್ತೆಹಚ್ಚುವ ವ್ಯವಸ್ಥೆಗಳು ಸೇರಿವೆ.

ಈ ಕುರಿತು ಮಾತನಾಡಿರುವ ಲಿಂಕ್ಡ್‌ ಇನ್ ಇಂಡಿಯಾದ ಲೀಗಲ್ ಮತ್ತು ಪಬ್ಲಿಕ್ ಪಾಲಿಸಿ ಹೆಡ್ ಅದಿತಿ ಝಾ ಅವರು , “ಆನ್‌ ಲೈನ್ ಉದ್ಯೋಗ ಹುಡುಕಾಟದ ಅನುಭವದಲ್ಲಿ ಉದ್ಯೋಗ ವಂಚನೆಗಳು ಈಗ ಸಾಮಾನ್ಯ ಭಾಗವಾಗುತ್ತಿವೆ. ನಮ್ಮ ಸಂಶೋಧನೆಯು ತೋರಿಸುವಂತೆ, ವೃತ್ತಿಪರರಲ್ಲಿ ಜಾಗೃತಿ ಮೂಡುತ್ತಿದೆ. ಆದರೆ ವೇಗವಾಗಿ ಬದಲಾಗುತ್ತಿರುವ ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ, ವಿಶೇಷವಾಗಿ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ಆ ಜಾಗೃತಿಯನ್ನು ಕಾರ್ಯರೂಪಕ್ಕೆ ತರುವುದು ಸವಾಲಿನ ಕೆಲಸವಾಗಿದೆ. ಆದ್ದರಿಂದ ಸುರಕ್ಷಿತ ಉದ್ಯೋಗ ಪರಿಸರವನ್ನು ನಿರ್ಮಿಸಲು ಕೇವಲ ಜಾಗೃತಿ ಸಾಕಾಗುವುದಿಲ್ಲ; ಪ್ಲಾಟ್‌ ಫಾರ್ಮ್‌ ಗಳು, ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿಗಳ ನಡುವೆ ಬಲವಾದ ಸುರಕ್ಷತಾ ಕ್ರಮಗಳು, ವಿಶ್ವಾಸಾರ್ಹ ಸಂಕೇತಗಳು ಮತ್ತು ಪರಿಸ್ಪರ ಹೊಣೆಗಾರಿಕೆಯ ಅಗತ್ಯವಿದೆ. ಲಿಂಕ್ಡ್‌ ಇನ್‌ ನಲ್ಲಿ, ನಾವು ಈ ರಕ್ಷಣೆಗಳನ್ನು ಬಲಪಡಿಸಲು ಮತ್ತು ವೃತ್ತಿಪರರು ಹೆಚ್ಚಿನ ಆತ್ಮವಿಶ್ವಾಸ ಮತ್ತು ನಂಬಿಕೆಯೊಂದಿಗೆ ಅವಕಾಶಗಳನ್ನು ಬಳಸಿಕೊಳ್ಳುವಂತೆ ಮಾಡಲು ಗಮನ ಹರಿಸುತ್ತಿದ್ದೇವೆ” ಎಂದು ಹೇಳಿದರು.
ಉದ್ಯೋಗಾಕಾಂಕ್ಷಿಗಳಿಗೆ ಪ್ರಾಯೋಗಿಕ ಸಲಹೆಗಳು

ಲಿಂಕ್ಡ್‌ ಇನ್ ಉದ್ಯೋಗಾಕಾಂಕ್ಷಿಗಳಿಗೆ ಈ ಕೆಳಗಿನ ಸಲಹೆಗಳನ್ನು ನೀಡುತ್ತದೆ:

  • ಸಂವಹನದ ಆರಂಭಿಕ ಹಂತದಲ್ಲಿ ಎಚ್ಚರಿಕೆ ವಹಿಸಿ: ಯಾರಾದರೂ ನಿಮ್ಮನ್ನು ಸಂಪರ್ಕಿಸಿದಾಗ, ವಿಶೇಷವಾಗಿ ಉದ್ಯೋಗದ ವಿವರಗಳು ಅಸ್ಪಷ್ಟವಾಗಿದ್ದರೆ ಅಥವಾ ಪ್ರಕ್ರಿಯೆ ಮುಗಿಸಲು ಅತಿಯಾಗಿ ಅವಸರಿಸುತ್ತಿದ್ದಾರೆ ಎಂದೆನಿಸಿದರೆ, ಸ್ವಲ್ಪ ನಿಂತು ಯೋಚಿಸಿ.
  • ವಿವರಗಳನ್ನು ಪರಿಶೀಲಿಸಿ: ಕಂಪನಿ ಪೇಜ್‌ ಗಳು, ನೇಮಕಾತಿದಾರರ ಪ್ರೊಫೈಲ್‌ ಗಳು ಮತ್ತು ವೆರಿಫಿಕೇಶನ್ ಬ್ಯಾಡ್ಜ್‌ ಗಳನ್ನು ಪರಿಶೀಲಿಸುವ ಮೂಲಕ ಆ ಉದ್ಯೋಗದ ಹಿಂದೆ ಯಾರಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ವೇದಿಕೆಯಿಂದ ಹೊರಹೋಗುವ ಬಗ್ಗೆ ಜಾಗರೂಕರಾಗಿರಿ: ಸಂಭಾಷಣೆಯನ್ನು ಲಿಂಕ್ಡ್‌ ಇನ್ ಪ್ಲಾಟ್‌ ಫಾರ್ಮ್‌ ನಿಂದ ಹೊರಗೆ (ಇತರ ಮೆಸೇಜಿಂಗ್ ಆ್ಯಪ್‌ ಗಳಿಗೆ) ಅತಿ ಬೇಗನೆ ಸ್ಥಳಾಂತರಿಸಲು ಮಾಡುವ ವಿನಂತಿಗಳ ಬಗ್ಗೆ ಎಚ್ಚರದಿಂದಿರಿ.
  • ವರದಿ ಮಾಡಿ: ಅನುಮಾನಾಸ್ಪದ ಚಟುವಟಿಕೆಗಳನ್ನು ವರದಿ ಮಾಡುವ ಮೂಲಕ ಇಡೀ ಸಮುದಾಯವನ್ನು ರಕ್ಷಿಸಲು ಸಹಾಯ ಮಾಡಿ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

https://kalpa.news/wp-content/uploads/2024/04/VID-20240426-WA0008.mp4

Tags: IndiaKannada NewsKannada News LiveKannada News OnlineKannada News WebsiteKannada WebsiteLatest News KannadaLinked InNews in KannadaNews Kannadaಭಾರತ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ನೈಋತ್ಯ ರೈಲ್ವೆ ಪ್ರಯಾಣಿಕರ ಸುರಕ್ಷತಾ ಅಭಿಯಾನ | 67 ಮಕ್ಕಳ ರಕ್ಷಣೆ | 100 ಲಕ್ಷಕ್ಕೂ ಹೆಚ್ಚು ಮೌಲ್ಯದ ಆಸ್ತಿ ವಶ

Next Post

IBM and Yotta Announce Plans to Deliver Agentic AI Platform for Indian Enterprises

kalpa News

kalpa News

Next Post
IBM and Yotta Announce Plans to Deliver Agentic AI Platform for Indian Enterprises

IBM and Yotta Announce Plans to Deliver Agentic AI Platform for Indian Enterprises

Comments 1

  1. Pingback: IBM and Yotta Announce Plans to Deliver Agentic AI Platform for Indian Enterprises » kalpa.news

Leave a Reply Cancel reply

Your email address will not be published. Required fields are marked *

No Result
View All Result
Kriti Sanon Raksha Bandhan Controversy GIVA Withdraw Advt copy
English Articles

Kriti Sanon’s Raksha Bandhan Ad Faces Backlash; GIVA Withdraws Campaign

by kalpa News
August 26, 2026
0

Kalpa Media House  |  Bangalore  | Jewellery brand GIVA has withdrawn its Raksha Bandhan advertisement featuring Bollywood actor Kriti Sanon following...

Read moreDetails
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL