No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Saturday, October 3, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Rail Dairy (ರೈಲ್ವೆ ಸುದ್ದಿಗಳು)

ನೈಋತ್ಯ ರೈಲ್ವೆ ಪ್ರಯಾಣಿಕರ ಸುರಕ್ಷತಾ ಅಭಿಯಾನ | 67 ಮಕ್ಕಳ ರಕ್ಷಣೆ | 100 ಲಕ್ಷಕ್ಕೂ ಹೆಚ್ಚು ಮೌಲ್ಯದ ಆಸ್ತಿ ವಶ

kalpa News by kalpa News
May 9, 2026
in Rail Dairy (ರೈಲ್ವೆ ಸುದ್ದಿಗಳು)
0
ನೈಋತ್ಯ ರೈಲ್ವೆ ಪ್ರಯಾಣಿಕರ ಸುರಕ್ಷತಾ ಅಭಿಯಾನ | 67 ಮಕ್ಕಳ ರಕ್ಷಣೆ | 100 ಲಕ್ಷಕ್ಕೂ ಹೆಚ್ಚು ಮೌಲ್ಯದ ಆಸ್ತಿ ವಶ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  | ಹುಬ್ಬಳ್ಳಿ |

  • ಏಪ್ರಿಲ್ 2026 ರಲ್ಲಿ ‘ನನ್ಹೆ ಫರಿಸ್ತೇ’ ಕಾರ್ಯಾಚರಣೆಯ ಅಡಿಯಲ್ಲಿ ನೈಋತ್ಯ ರೈಲ್ವೆಯು 12 ಹುಡುಗಿಯರು ಸೇರಿದಂತೆ 67 ಮಕ್ಕಳನ್ನು ರಕ್ಷಿಸಿದೆ.
  • ₹36.62 ಲಕ್ಷ ಮೌಲ್ಯದ ಪ್ರಯಾಣಿಕರ ಕಳೆದುಹೋದ ವಸ್ತುಗಳನ್ನು ತ್ವರಿತವಾಗಿ ವಶಪಡಿಸಿಕೊಂಡು ಹಿಂದಿರುಗಿಸಲಾಗಿದೆ
  • ಏಪ್ರಿಲ್ 2026 ರಲ್ಲಿ 04 ವ್ಯಕ್ತಿಗಳನ್ನು ಬಂಧಿಸಿ ರೂ. 61.6 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಕೊಳ್ಳಲಾಗಿದೆ
  • “ಉಪಲಬ್ದ್” ಕಾರ್ಯಾಚರಣೆಯ ಅಡಿಯಲ್ಲಿ ರೂ. 2.43 ಲಕ್ಷ ಮೌಲ್ಯದ ಟಿಕೆಟ್‌ಗಳನ್ನು ವಶಪಡಿಸಿಕೊಂಡಿದೆ.

ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) Railway Defense Force ರೈಲ್ವೆ ಆಸ್ತಿ, ಪ್ರಯಾಣಿಕರ ಪ್ರದೇಶಗಳು ಮತ್ತು ಪ್ರಯಾಣಿಕರ ಕಲ್ಯಾಣವನ್ನು ಕಾಪಾಡುವ ತನ್ನ ದೃಢ ಬದ್ಧತೆಯನ್ನು ನಿರಂತರವಾಗಿ ಮುಂದುವರಿಸಿಕೊಂಡಿದೆ. ಪ್ರಯಾಣಿಕರಿಗೆ ಸುರಕ್ಷಿತ, ಭದ್ರತೆ ಹಾಗೂ ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸಲು ಈ ಪಡೆ ದಿನದ 24 ಗಂಟೆಗಳೂ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ.

ಏಪ್ರಿಲ್ 2026ರಲ್ಲಿ, ಆರ್‌ಪಿಎಫ್ ಪ್ರಯಾಣಿಕರ ಸುರಕ್ಷತೆ, ಭದ್ರತೆ ಮತ್ತು ಸೌಕರ್ಯಗಳನ್ನು ಖಚಿತಪಡಿಸುವ ಕಾರ್ಯವನ್ನು ಮುಂದುವರಿಸಿಕೊಂಡು, ಭಾರತೀಯ ರೈಲ್ವೆ ತನ್ನ ಗ್ರಾಹಕರಿಗೆ ವಿಶ್ವಾಸಾರ್ಹ ಸರಕು ಸಾಗಣೆ ಸೇವೆಗಳನ್ನು ಒದಗಿಸಲು ಸಹಕಾರ ನೀಡಿದೆ.
ಏಪ್ರಿಲ್ 2026ರಲ್ಲಿ ಆರ್‌ಪಿಎಫ್ ವಿವಿಧ ಕಾರ್ಯಾಚರಣೆಗಳ ಅಡಿಯಲ್ಲಿ ಈ ಕೆಳ ಕಂಡಂತೆ ಹಲವಾರು ಶ್ಲಾಘನೀಯ ಸಾಧನೆಗಳನ್ನು ದಾಖಲಿಸಿದೆ:

“ನನ್ಹೆ ಫರಿಷ್ಠೇ” ಕಾರ್ಯಾಚರಣೆ (ಕಳೆದುಹೋದ ಮಕ್ಕಳ ರಕ್ಷಣೆ): ಈ ಕಾರ್ಯಾಚರಣೆಯಡಿಯಲ್ಲಿ ಆರೈಕೆ ಮತ್ತು ರಕ್ಷಣೆಯ ಅಗತ್ಯವಿದ್ದ 67 ಮಕ್ಕಳು (55 ಹುಡುಗರು ಮತ್ತು 12 ಹುಡುಗಿಯರು) ಅವರ ಕುಟುಂಬಗಳೊಂದಿಗೆ ಮರುಸೇರಿಸುವಲ್ಲಿ ಆರ್‌ಪಿಎಫ್ ಪ್ರಮುಖ ಪಾತ್ರ ವಹಿಸಿದೆ. ವಿವಿಧ ಕಾರಣಗಳಿಂದ ಕುಟುಂಬಗಳಿಂದ ಬೇರ್ಪಟ್ಟಿದ್ದ ಈ ಮಕ್ಕಳನ್ನು ರಕ್ಷಿಸಿ, ಎನ್‌ಜಿಒ/ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

Also read: Pure Gold Within the Uniform: Jayakara Airody, The Great Voice of Humanity

ಆಪರೇಷನ್ ಡಿಗ್ನಿಟಿ: ಈ ಕಾರ್ಯಾಚರಣೆಯಡಿಯಲ್ಲಿ ಆರೈಕೆ ಮತ್ತು ರಕ್ಷಣೆಯ ಅಗತ್ಯವಿದ್ದ ಮೂರು ವೃದ್ಧರನ್ನು ( 1 ಗಂಡು 2 ಹೆಣ್ಣು ) ರಕ್ಷಿಸಿ, ಸಮರ್ಪಕ ಪರಿಶೀಲನೆಯ ನಂತರ ಅವರ ಕುಟುಂಬಗಳು ಅಥವಾ ಎನ್‌ಜಿಒಗಳಿಗೆ ಹಸ್ತಾಂತರಿಸಲಾಗಿದೆ.

ಮಹಿಳಾ ಪ್ರಯಾಣಿಕರ ಸಬಲೀಕರಣ – “ಮೇರಿ ಸಹೇಲಿ” ಉಪಕ್ರಮ: ಈ ಮಹಿಳಾ ಕೇಂದ್ರಿತ ಉಪಕ್ರಮದಡಿಯಲ್ಲಿ, ಆರ್‌ಪಿಎಫ್ ಸಿಬ್ಬಂದಿ ಒಂಟಿಯಾಗಿ ಅಥವಾ ಸಹಾಯವಿಲ್ಲದೆ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸಿದ್ದಾರೆ. ನೈಜ-ಸಮಯ ಮೇಲ್ವಿಚಾರಣೆ ಮತ್ತು ಸಹಾಯಕ್ಕಾಗಿ ಅವರ ಆಸನ ಮತ್ತು ಬರ್ತ್ ವಿವರಗಳನ್ನು ನಿಲ್ದಾಣದ ಆರ್‌ಪಿಎಫ್ ತಂಡಗಳೊಂದಿಗೆ ಹಂಚಿಕೊಳ್ಳಲಾಗಿದೆ. ಮೊದಲಿನ ನಿಲ್ದಾಣದಿಂದ ಕೊನೆಯ ನಿಲ್ದಾಣದವರೆಗೆ ಪ್ರತಿಕ್ರಿಯೆಯನ್ನು ಸಂಗ್ರಹಿಸಲಾಗುತ್ತಿದ್ದು, ಪ್ರಸ್ತುತ 32 ರೈಲುಗಳು ಈ ಉಪಕ್ರಮದ ವ್ಯಾಪ್ತಿಗೆ ಒಳಪಟ್ಟಿವೆ.
ಟೌಟ್‌ಗಳ ವಿರುದ್ಧ ಕ್ರಮ (“ಉಪಲಬ್ದ್” ಕಾರ್ಯಾಚರಣೆ): ನಿಜವಾದ ಪ್ರಯಾಣಿಕರಿಗೆ ರೈಲು ಟಿಕೆಟ್‌ಗಳ ನ್ಯಾಯಯುತ ಲಭ್ಯತೆಯನ್ನು ಖಚಿತಪಡಿಸಲು ಹಾಗೂ ಕಾಳ ಸಂತೆಯಲ್ಲಿ ಟಿಕೆಟ್ ಗಳ ಮಾರಾಟ ತಡೆಯಲು ಕರ್ನಾಟಕ ಮತ್ತು ಗೋವಾ ರಾಜ್ಯಗಳಾದ್ಯಂತ ವಿವಿಧ ಪ್ರವಾಸ ಏಜೆನ್ಸಿಗಳು ಮತ್ತು ಸ್ಥಳಗಳಲ್ಲಿ ತೀವ್ರ ತಪಾಸಣೆ ನಡೆಸಲಾಗಿದೆ. ಈ ಕಾರ್ಯಾಚರಣೆಗಳ ವೇಳೆ ರೈಲ್ವೆ ಕಾಯ್ದೆಯ ಸೆಕ್ಷನ್ 143ರಡಿ 17 ಪ್ರಕರಣಗಳಲ್ಲಿ 17 ಟೌಟ್‌ಗಳನ್ನು ಬಂದಿಸಿ, ₹81,553 ಮೌಲ್ಯದ 22 ಲೈವ್ ಟಿಕೆಟ್‌ಗಳು ಹಾಗೂ ₹1,61,752 ಮೌಲ್ಯದ 82 ಬಳಸಿದ ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಿಷಿದ್ಧ ವಸ್ತುಗಳ ಪತ್ತೆ (ಆಪರೇಷನ್ ಸತ್ರಾಕ್ ಮತ್ತು ನಾರ್ಕೊ):

  1. ಆಪರೇಷನ್ ಸತ್ರಾಕ್ ಅಡಿಯಲ್ಲಿ, 06 ಮದ್ಯ ಪ್ರಕರಣಗಳನ್ನು ಪತ್ತೆಹಚ್ಚಿ ₹18,440 ಮೌಲ್ಯದ 77 ಬಾಟಲಿಗಳನ್ನು (46 ಲೀಟರ್) ವಶಪಡಿಸಿಕೊಂಡು ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಗಿದೆ.
  2. ಆಪರೇಷನ್ ನಾರ್ಕೊ ಅಡಿಯಲ್ಲಿ, 05 ಪ್ರಕರಣಗಳನ್ನು ಪತ್ತೆಹಚ್ಚಿ ₹61.42 ಲಕ್ಷ ಮೌಲ್ಯದ 98.99 ಕೆಜಿ ಗಾಂಜಾವನ್ನು ವಶಪಡಿಸಿಕೊಂಡು 04 ಅಪರಾಧಿಗಳನ್ನು ಬಂಧಿಸಿ ಮುಂದಿನ ಕ್ರಮಕ್ಕಾಗಿ ಜಿಆರ್‌ಪಿ/ಅಬಕಾರಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

ಪ್ರಯಾಣಿಕರ ಕಳವಳಗಳಿಗೆ ತ್ವರಿತ ಪ್ರತಿಕ್ರಿಯೆ: 65 ಸಂದರ್ಭಗಳಲ್ಲಿ, ಆರ್‌ಪಿಎಫ್ ಸಿಬ್ಬಂದಿ ಪ್ರಯಾಣಿಕರು ಕಳೆದುಕೊಂಡ ಅಥವಾ ಬಿಟ್ಟುಹೋದ ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ಗಳು, ಆಭರಣಗಳು ಸೇರಿದಂತೆ ₹36.62 ಲಕ್ಷ ಮೌಲ್ಯದ ಇತರ ವೈಯಕ್ತಿಕ ವಸ್ತುಗಳನ್ನು ವಶಪಡಿಸಿಕೊಂಡು ಅವುಗಳ ವಾರಸುದಾರರಿಗೆ ಹಿಂತಿರುಗಿಸಲಾಗಿದೆ.
ರೈಲು ಎಸ್ಕಾರ್ಟಿಂಗ್ ಮತ್ತು ಮೊಬೈಲ್ ಗಸ್ತು: ವಲಯದಾದ್ಯಂತ ಪ್ರತಿದಿನ ಸರಾಸರಿ 36–40 ಎಕ್ಸ್‌ಪ್ರೆಸ್ ಮತ್ತು ವಿಶೇಷ ರೈಲುಗಳಿಗೆ 125–130 ಆರ್‌ಪಿಎಫ್ ಸಿಬ್ಬಂದಿ ಬೆಂಗಾವಲು ನೀಡುತ್ತಿದ್ದು, ನಿರಂತರ ಜಾಗರೂಕತೆ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುತ್ತಿದ್ದಾರೆ.

ರೈಲ್ವೆ ಆಸ್ತಿ (ಕಾನೂನುಬಾಹಿರ ಸ್ವಾಧೀನ) ಕಾಯ್ದೆ, 1966: ಆರ್‌ಪಿಎಫ್ 14 ಪ್ರಕರಣಗಳನ್ನು ದಾಖಲಿಸಿ 07 ಅಪರಾಧಿಗಳನ್ನು ಬಂಧಿಸಿದೆ. ₹2,45,789 ಮೌಲ್ಯದ ಒಟ್ಟು ಕದ್ದ ಆಸ್ತಿಯಲ್ಲಿ ₹1,70,339 ಮೌಲ್ಯದ ಕದ್ದ ರೈಲ್ವೆ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.

ಸಂರಕ್ಷಾ (ಕಲ್ಲು ತೂರುವ ವಿರುದ್ಧ ಕ್ರಮ):- ಕಾರ್ಯಾಚರಣೆಯಡಿ, ರೈಲ್ವೆ ಆಕ್ಟ್ 153 ಅಡಿಯಲ್ಲಿ ಒಟ್ಟು 09 ಪ್ರಕರಣಗಳು ದಾಖಲಾಗಿದ್ದು, 04 ಅಪರಾಧಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಪ್ರಧಾನ ವ್ಯವಸ್ಥಾಪಕರಾದ ಶ್ರೀ ಪಿ. ಅನಂತ್ ಅವರು ದಣಿವರಿಯದೆ ಸೇವೆ ಸಲ್ಲಿಸಿದ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಗೆ ಮೆಚ್ಚುಗೆ ವಕ್ತಪಡಿಸಿ, ಪ್ರತಿಯೊಬ್ಬ ಪ್ರಯಾಣಿಕರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಕಾಪಾಡುವುದು ಎಲ್ಲರ ಹಂಚಿಕೆಯ ಜವಾಬ್ದಾರಿಯಾಗಿದೆ ಎಂದು ಪುನರುಚ್ಚರಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

https://kalpa.news/wp-content/uploads/2024/04/VID-20240426-WA0008.mp4

Tags: HubballiKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews KannadaRailway Defense Forceರೈಲ್ವೆ ರಕ್ಷಣಾ ಪಡೆಹುಬ್ಬಳ್ಳಿ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

Pure Gold Within the Uniform: Jayakara Airody, The Great Voice of Humanity

Next Post

ಭಾರತೀಯ ವೃತ್ತಿಪರರು ಉದ್ಯೋಗ ವಂಚನೆಗಳ ಬಗ್ಗೆ ಹೆಚ್ಚು ಜಾಗರೂಕರಾಗಿದ್ದಾರೆ, ಆದರೆ ಒತ್ತಡದ ಕಾರಣ ಅಪಾಯ ಸಾಧ್ಯತೆ

kalpa News

kalpa News

Next Post
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್

ಭಾರತೀಯ ವೃತ್ತಿಪರರು ಉದ್ಯೋಗ ವಂಚನೆಗಳ ಬಗ್ಗೆ ಹೆಚ್ಚು ಜಾಗರೂಕರಾಗಿದ್ದಾರೆ, ಆದರೆ ಒತ್ತಡದ ಕಾರಣ ಅಪಾಯ ಸಾಧ್ಯತೆ

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL