ಕಲ್ಪ ಮೀಡಿಯಾ ಹೌಸ್ | ಗದಗ |
ಯುವಜನರು ಜಾಗೃತರಾದರೆ ಮಾತ್ರ ನಮ್ಮ ಸಮಾಜ ಮತ್ತು ದೇಶ ಉನ್ನತಿಯ ಹಾದಿಯಲ್ಲಿ ಸಾಗುತ್ತದೆ ಎಂದು ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಗಜೇಂದ್ರಗಡ #Gajendragada ಜಿಲ್ಲೆ ಸೂಡಿ ಗ್ರಾಮದ ಮಾನವ ಧರ್ಮ ಮಂಟಪದಲ್ಲಿ ಹಮ್ಮಿಕೊಂಡಿದ್ದ 50ನೇ ವರ್ಷದ ರಥೋತ್ಸವ ಸಮಾರಂಭದಲ್ಲಿ ಯುವ ಜಾಗೃತಿ ಮತ್ತು ಸಂರಕ್ಷಣಾ ಸಮಾವೇಶದ ಸಾನಿಧ್ಯ ವಹಿಸಿ ಅವರು ಅನುಗ್ರಹ ಸಂದೇಶ ನೀಡಿದರು.
Also Read>> ಬೆಂಗಳೂರು | ಪ್ರಧಾನಿ ಮೋದಿ ತೆರಳುವ ಮಾರ್ಗ ಸಮೀಪ ಜಿಲೆಟಿನ್ ಕಡ್ಡಿಗಳು ಪತ್ತೆ | ಶಂಕಿತ ವಶಕ್ಕೆ
ಯುವಜನರ ಮಾತು ಭಾಷೆ, ಆಹಾರ, ವಿಹಾರ ಮತ್ತು ವ್ಯಕ್ತಿತ್ವಗಳು ಭಾರತೀಯ ಸನಾತನ ಸಂಸ್ಕೃತಿಗಳ ಪ್ರತೀಕವಾಗಿರಬೇಕು. ಹಾಗಿದ್ದಾಗ ಮಾತ್ರ ಭಾರತ ಮತ್ತೆ ವಿಶ್ವಗುರುವಾಗಲು ಸಾಧ್ಯ ಎಂದರು.
ಧರ್ಮದ ಮಾರ್ಗವನ್ನು ಎಂದಿಗೂ ಬಿಡಬಾರದು. ನಮ್ಮ ವ್ಯಕ್ತಿತ್ವವನ್ನು ಇತರರಿಗೆ ಮಾರಿಕೊಳ್ಳಬಾರದು. ಮಠ ಮತ್ತು ಪೀಠಗಳು ನೂರಾರು ವರ್ಷಗಳಿಂದ ಯುವಜನರನ್ನು ಸನ್ಮಾರ್ಗಕ್ಕೆ ತರುವ ಕಾರ್ಯಗಳನ್ನು ಮಾಡುತ್ತ ಇವೆ. ಇದನ್ನು ಅರ್ಥ ಮಾಡಿಕೊಂಡು ಸಂಸ್ಕೃತಿಯ ಮಾರ್ಗದಲ್ಲಿ ಸಾಗಬೇಕು ಎಂದರು.
Also Read>> ದಳಪತಿ ಯುಗಾರಂಭ | ತಮಿಳುನಾಡು ಸಿಎಂ ಆಗಿ ವಿಜಯ್ ಪ್ರಮಾಣ ವಚನ | ತ್ರಿಶಾ ಮಿಂಚಿಂಗ್
ವಿಶೇಷ ಉಪನ್ಯಾಸ ನೀಡಿದ ಶಿವಮೊಗ್ಗದ ಪ್ರವಚನಕಾರ ಜಿ.ಎಸ್. ನಟೇಶ ಅವರು ಮಾತನಾಡಿ, ಯಾವುದೇ ಸರ್ಕಾರ ಮಾಡದ ಪರಿವರ್ತನಾ ಕಾರ್ಯಗಳನ್ನು ಸನ್ನಿಧಿಗಳು, ಮಠ ಮತ್ತು ಪೀಠಗಳು ಸಾವಿರಾರು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಮಕ್ಕಳಿಗೆ ಸಂಸ್ಕಾರ ಕೊಡುವುದು ಶಾಲೆಯಿಂದ ಅಲ್ಲ, ತಾಯಿಯ ಗರ್ಭದಿಂದಲೇ ಈ ಪ್ರಕ್ರಿಯೆ ಆರಂಭವಾಗಬೇಕು. ಅದಕ್ಕಾಗಿ ವೇದ ಪುರಾಣಗಳು ಮಾತೃದೇವೋಭವ ಎಂದು ಹೇಳಿವೆ ಎಂದರು.
ಹಿರಿಯರ ಸೇವೆಯಿಂದ ಯುವಜನರಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರಗಳು ಮೂಡುತ್ತವೆ. ಈ ನಿಟ್ಟಿನಲ್ಲಿ ಯುವಜನರು ಮತ್ತು ಹಿರಿಯ ನಾಗರಿಕರು ಸಮಾಜದ ಬಹುದೊಡ್ಡ ಆಸ್ತಿ ಎಂದರು.
ಸಕಲೇಶಪುರ ತಾಲೂಕು ತೆಕ್ಕಲಗೂಡು ಬೃಹನ್ ಮಠದ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಗುರುವಿನ ಶಕ್ತಿ ಬಹಳ ದೊಡ್ಡದು. ಗುರುವಿನಿಂದ ಸಂಸ್ಕಾರ ಪಡೆಯುವ ಮೀಟಿನಲ್ಲಿ ಯುವಜನರು ಸ್ವಯಂ ಪ್ರೇರಿತರಾಗ ಬೇಕು ಎಂದರು.
ಕಾರ್ಯಕ್ರಮದಲ್ಲಿ ಯಲಬುರ್ಗಾ ಶ್ರೀಧರ ಮುರುಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ, ಬದಾಮಿಯ ನವಗ್ರಹ ಹಿರೇಮಠದ ಶಿವ ಪೂಜಾ ಶಿವಾಚಾರ್ಯ ಸ್ವಾಮೀಜಿ, ಮುದ್ರಣ ಉದ್ಯಮಿ ಗೌರವದೇವಿ ಶಾಬಾದಿಮಠ, ಧಾರವಾಡ ವಿವಿ ಪಿ ಎಚ್ ಡಿ ಪರಿಸ್ಕೃತರಾದ ಶ್ರೀ ಶಾಂತಲಿಂಗ ಮಹಾಸ್ವಾಮಿಗಳು, ಲೇಖಕರಾದ ರಘುರಾಮ, ಸಹಕಾರ ಬ್ಯಾಂಕ್ ನಿವೃತ್ತ ಪ್ರಧಾನ ವ್ಯವಸ್ಥಾಪಕ ಟಿಪಿ. ಮುನೊಳಿ ಇತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















