ಕಲ್ಪ ಮೀಡಿಯಾ ಹೌಸ್ | ವಿಶಾಖಪಟ್ಟಣಂ |
ಅನಿರೀಕ್ಷಿತ ಹಾಗೂ ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಮನೆಗೆ ಭೇಟಿ ನೀಡಿ ಮಹತ್ವದ ಚರ್ಚೆ ನಡೆಸಿದ್ದಾರೆ.
ರಾಜಕೀಯವಾಗಿ ಪ್ರಧಾನಿಯವರ ಈ ಭೇಟಿ ಅನಿರೀಕ್ಷಿತವಾಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.
Also Read>> ನೈಋತ್ಯ ರೈಲ್ವೆ ಮೈಸೂರು ವಿಭಾಗ ಪ್ರಶಸ್ತಿ | ಚಿಕ್ಕಜಾಜೂರು ನಿಲ್ದಾಣ ಬೆಸ್ಟ್ | ಶಿವಮೊಗ್ಗ ರೈಲ್ವೆ ಕಾಲೋನಿ ಅತ್ಯುತ್ತಮ
ಮೊದಲು ಪ್ರಧಾನಿಯವರು ಚಂದ್ರಬಾಬು ನಾಯ್ಡು ಅವರ ನಿವಾಸಕ್ಕೆ ಭೇಟಿ ನೀಡಿದರು. ಸಿಎಂ ನಾಯ್ಡು ಅವರು ಕುಟುಂಬ ಸಹಿತವಾಗಿ ಪ್ರಧಾನಿಯವರನ್ನು ಸ್ವಾಗತಿಸಿದರು.
ರಾಜ್ಯದ ಅಭಿವೃದ್ಧಿ, ಮೂಲಸೌಕರ್ಯ ವಿಸ್ತರಣೆ, ಕೈಗಾರಿಕಾ ಹೂಡಿಕೆಗಳು #IndustrialInvestment ಮತ್ತು ಕಲ್ಯಾಣ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಿದರು ಎಂದು ಹೇಳಲಾಗಿದೆ.
ಅಲ್ಲದೇ, ಆಂಧ್ರ ಪ್ರದೇಶಕ್ಕೆ #AndraPradesh ಕೇಂದ್ರದ ನೆರವನ್ನು ವೇಗಗೊಳಿಸುವ ಬಗ್ಗೆ ಚರ್ಚೆ ನಡೆದಿದ್ದು, ಬಂದರುಗಳು, ಹೆದ್ದಾರಿಗಳು, ರೈಲು ಸಂಪರ್ಕ ಮತ್ತು ಅಮರಾವತಿಯನ್ನು ರಾಜ್ಯ ರಾಜಧಾನಿಯಾಗಿ ಅಭಿವೃದ್ಧಿಪಡಿಸುವ ಯೋಜನೆಗಳ ಕುರಿತು ಮಾತುಕತೆ ನಡೆದಿದೆ ಎನ್ನಲಾಗಿದೆ.
ನಂತರ ಪ್ರಧಾನಿಯವರು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ #PawanKalyan ಅವರ ನಿವಾಸಕ್ಕೆ ತೆರಳಿದರು.
ಮೊದಲ ದಿನವೇ ಡಿಎಂಕೆಗೆ ಸಿಎಂ ವಿಜಯ್ ಶಾಕ್ | ಹಿಂದಿನ ಅವಧಿಯ ಶ್ವೇತ ಪತ್ರ ಹೊರಡಿಸುತ್ತೇನೆ!
ಯುವಜನರ ಅಭಿವೃದ್ಧಿ, ಉದ್ಯೋಗಾವಕಾಶಗಳು ಮತ್ತು ಗ್ರಾಮೀಣ ಆಡಳಿತ ಬಲಪಡಿಸುವ ವಿಷಯಗಳ ಕುರಿತು ಚರ್ಚೆ ನಡೆಸಿದರು ಎಂದು ತಿಳಿದುಬಂದಿದೆ.
ಜನಸೇನಾ ಪಕ್ಷದ ಬೆಂಬಲಿಗರು ಪ್ರಧಾನಮಂತ್ರಿಯನ್ನು ಸ್ವಾಗತಿಸಲು ದೊಡ್ಡ ಸಂಖ್ಯೆಯಲ್ಲಿ ನಿವಾಸದ ಹೊರಭಾಗದಲ್ಲಿ ಸೇರಿದ್ದರು.
ಭೇಟಿ ವೇಳೆ ರಾಜ್ಯದಲ್ಲಿ ಎನ್’ಡಿಎ ಮೈತ್ರಿಯನ್ನು ಬಲಪಡಿಸುವಲ್ಲಿ ಹಾಗೂ ಜನಬೆಂಬಲ ಒಗ್ಗೂಡಿಸುವಲ್ಲಿ ಪವನ್ ಕಲ್ಯಾಣ್ ವಹಿಸಿರುವ ಪಾತ್ರವನ್ನು ಮೋದಿ ಪ್ರಶಂಸಿಸಿದ್ದಾರೆ ಎಂದು ಹೇಳಲಾಗಿದೆ.
ಪವನ್ ಕಲ್ಯಾಣ್ ಅವರ ನಿವಾಸದಲ್ಲಿ ಪ್ರಧಾನಿಯವರಿಗೆ ಸಾಂಪ್ರದಾಯಿಕವಾಗಿ ಸ್ವಾಗತ ಕೋರಲಾಯಿತು. ಡಿಸಿಎಂ ಕುಟುಂಬಸ್ಥರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















