No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Tuesday, September 29, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ

kalpa News by kalpa News
May 15, 2026
in Special Articles
0
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  | ಬೆಂಗಳೂರು |

ತಂತ್ರಜ್ಞಾನ ಆಧಾರಿತ ಆದಾಯ, ಉತ್ತಮ ಸಂಪರ್ಕ ವ್ಯವಸ್ಥೆ ಮತ್ತು ವಿಶಾಲವಾದ ಸ್ಥಳಗಳ ಆಯ್ಕೆಯು ಯುವ ಖರೀದಿದಾರರು ಮನೆ ಖರೀದಿಸಲು ಸಹಾಯ ಮಾಡುತ್ತಿವೆ.

ಸಿಲಿಕಾನ್ ಸಿಟಿಯ Silicon City ಯುವ ಪೀಳಿಗೆಯಲ್ಲಿ ಸ್ವಂತ ಮನೆಯ ಕನಸು ಮೊದಲಿನಿಗಿಂತಲೂ ವೇಗವಾಗಿ ನನಸಾಗುತ್ತಿದೆ. ನಗರದಲ್ಲಿ ಹೆಚ್ಚುತ್ತಿರುವ ಉದ್ಯೋಗ ಭದ್ರತೆ ಮತ್ತು ಆತ್ಮವಿಶ್ವಾಸದಿಂದಾಗಿ ಜೆನ್ ಜೀ ಮತ್ತು ಯುವ ಮಿಲೇನಿಯಲ್‌ ಗಳು Gen Z and the Young Millennials ಬಹಳ ಬೇಗ ಮನೆ ಖರೀದಿಸಲು ಮುಂದಾಗುತ್ತಿದ್ದಾರೆ ಎಂದು ಕೋಟಕ್ ಮಹೀಂದ್ರಾ ಬ್ಯಾಂಕ್ Kotak Mahindra Bank ವರದಿ ಮಾಡಿದೆ.

ಕೋಟಕ್ ಮಹೀಂದ್ರಾ ಬ್ಯಾಂಕ್ ಪ್ರಕಾರ, ಉದ್ಯೋಗ ಭದ್ರತೆ, ಸುಧಾರಿತ ಮೂಲಸೌಕರ್ಯ ಮತ್ತು ಸರಳ ಸಾಲ ಪ್ರಕ್ರಿಯೆಗಳು ಬೆಂಗಳೂರಿನಲ್ಲಿ ಮೊದಲ ಬಾರಿಗೆ ಮನೆ ಖರೀದಿಸುವವರು ಶೀಘ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತಿವೆ. ಈ ಹಿಂದೆ ಬಾಡಿಗೆ ಮನೆಯಲ್ಲಿದ್ದ ಜೆನ್ ಜೀ ಮತ್ತು ಯುವ ಮಿಲೇನಿಯಲ್ಸ್‌ ಈಗ ಮೊದಲಿನಿಗಿಂತಲೂ ಬೇಗನೆ ಸ್ವಂತ ಮನೆ ಹೊಂದುವತ್ತ ಹೆಜ್ಜೆ ಹಾಕುತ್ತಿರುವುದನ್ನು ಬ್ಯಾಂಕ್ ಗಮನಿಸಿದೆ.
ಈ ಕುರಿತು ಮಾತನಾಡಿರುವ ಕೋಟಕ್ ಮಹೀಂದ್ರಾ ಬ್ಯಾಂಕ್‌ ನ ಹೋಮ್ ಲೋನ್ ವಿಭಾಗದ ಮುಖ್ಯಸ್ಥ ನಕುಲ್ ಸಕ್ಸೇನಾ ಅವರು , “ದೇಶಾದ್ಯಂತ ಕಡಿಮೆ ವಯಸ್ಸಿನವರು ಮನೆ ಖರೀದಿ ಮಾಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಬೆಂಗಳೂರಿನಲ್ಲಿಯೂ ಸಹ, ಮೊದಲ ಬಾರಿಗೆ ಮನೆ ಖರೀದಿಸುವ ಅನೇಕರು ಸೂಕ್ತ ಸಮಯಕ್ಕಾಗಿ ಕಾಯುವ ಬದಲು ಮುಂಚಿತವಾಗಿಯೇ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಅವರು ತಮ್ಮ ಬಜೆಟ್, ಇಷ್ಟದ ಸ್ಥಳಗಳು ಮತ್ತು ಮನೆಯಲ್ಲಿ ಅವರಿಗೆ ಏನು ಮುಖ್ಯ ಎಂಬ ಬಗ್ಗೆ ಸ್ಪಷ್ಟತೆ ಹೊಂದಿದ್ದಾರೆ” ಎಂದು ಹೇಳಿದರು.

ಬೆಂಗಳೂರಿನಲ್ಲಿ ಆತ್ಮವಿಶ್ವಾಸ ಹೆಚ್ಚಲು ಕಾರಣಗಳೇನು?

ಬೆಂಗಳೂರಿನ ಬಲಿಷ್ಠ ಉದ್ಯೋಗ ಮಾರುಕಟ್ಟೆಯು ಈ ಬದಲಾವಣೆಗೆ ನಿರಂತರ ಬೆಂಬಲ ನೀಡುತ್ತಿದೆ. ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿಗಳು) ಮತ್ತು ಸ್ಟಾರ್ಟ್‌ ಅಪ್‌ ಗಳ ಬೆಳವಣಿಗೆಯು ವೃತ್ತಿಜೀವನದ ಆರಂಭಿಕ ಹಂತದಲ್ಲೇ ಸ್ಥಿರವಾದ ಆದಾಯವನ್ನು ಗಳಿಸಲು ವೃತ್ತಿಪರರಿಗೆ ಸಹಾಯ ಮಾಡುತ್ತಿದೆ. ಇದು ಅನೇಕ ಯುವ ಖರೀದಿದಾರರಿಗೆ ಸ್ವಂತ ಮನೆ ಹೊಂದುವ ಯೋಜನೆಯನ್ನು ಸುಲಭಗೊಳಿಸುತ್ತಿದೆ.

Also read: ಕ್ರೈಸ್ತ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಮರಳಿದ ಭದ್ರಾವತಿಯ ಯುವತಿ

ಜೊತೆಗೆ, ಪ್ರಗತಿಯಲ್ಲಿರುವ ಮೂಲಸೌಕರ್ಯ ಕಾಮಗಾರಿಗಳು, ಅದರಲ್ಲೂ ವಿಶೇಷವಾಗಿ ಮೆಟ್ರೋ ವಿಸ್ತರಣೆ ಮತ್ತು ರಸ್ತೆ ಸಂಪರ್ಕ ಯೋಜನೆಗಳು ಮನೆ ಖರೀದಿದಾರರು ಈ ನಗರವನ್ನು ನೋಡುವ ದೃಷ್ಟಿಕೋನವನ್ನೇ ಬದಲಿಸುತ್ತಿವೆ. ಈ ಹಿಂದೆ ಸುದೀರ್ಘ ಪ್ರಯಾಣ, ದೂರವೆಂದು ಅನಿಸುತ್ತಿದ್ದ ಪ್ರದೇಶಗಳು ಈಗ ಬೇಗನೆ ತಲುಪಬಹುದಾದಂತೆ ಆಗಿವೆ.

ಈ ಕುರಿತು ಸಕ್ಸೇನಾ ಅವರು, “ಉತ್ತರ ಮತ್ತು ಪೂರ್ವ ಬೆಂಗಳೂರಿನಲ್ಲಿ ಮನೆ ಖರೀದಿಗೆ ಹೆಚ್ಚಿನ ಆಸಕ್ತಿ ಕಂಡುಬರುತ್ತಿದೆ. ಇಲ್ಲಿ ಖರೀದಿದಾರರು ವಿಶಾಲವಾದ ಜಾಗವನ್ನು ಪಡೆಯಬಹುದು ಮತ್ತು ಕೆಲಸದ ಸ್ಥಳದೊಂದಿಗೆ ಉತ್ತಮ ಸಂಪರ್ಕವನ್ನೂ ಹೊಂದಿರಬಹುದು ಎಂದು ಭಾವಿಸುತ್ತಾರೆ. ಸಂಪರ್ಕ ವ್ಯವಸ್ಥೆ ಸುಧಾರಿಸುತ್ತಿದ್ದಂತೆ, ಜನರು ಕೇವಲ ಸುಸ್ಥಾಪಿತ ಪ್ರದೇಶಗಳ ಮೇಲೆ ಗಮನ ಹರಿಸುವ ಬದಲು ಹೊಸ ಸ್ಥಳಗಳಲ್ಲಿ ಮನೆ ಖರೀದಿಸಲು ಹೆಚ್ಚು ಮುಕ್ತ ಮನಸ್ಸನ್ನು ಹೊಂದಿದ್ದಾರೆ” ಎಂದು ಹೇಳುತ್ತಾರೆ.
ಬಾಡಿಗೆ ಮತ್ತು ಇಎಂಐ ಕುರಿತಾದ ಬದಲಾಗುತ್ತಿರುವ ಮನೋಭಾವ

ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನ ಹಲವು ಭಾಗಗಳಲ್ಲಿ, ವಿಶೇಷವಾಗಿ ಪ್ರಮುಖ ಉದ್ಯೋಗ ಕೇಂದ್ರಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಾಡಿಗೆ ದರಗಳು ಗಣನೀಯವಾಗಿ ಏರಿಕೆಯಾಗಿವೆ. ಇದರಿಂದಾಗಿ ಅನೇಕ ಕುಟುಂಬಗಳಿಗೆ ಮನೆ ಖರೀದಿಸುವ ನಿರ್ಧಾರವು ಕೇವಲ ಆರ್ಥಿಕ ಶಕ್ತಿಯ ವಿಷಯವಷ್ಟೇ ಅಲ್ಲದೆ, ದೀರ್ಘಕಾಲದ ಭದ್ರತೆಯ ಪ್ರಶ್ನೆಯೂ ಆಗಿದೆ.

ಹೆಚ್ಚಿನ ಬೇಡಿಕೆಯಿರುವ ಪ್ರದೇಶಗಳಲ್ಲಿ ಸತತವಾಗಿ ಏರುತ್ತಿರುವ ಬಾಡಿಗೆಗೆ ಹೋಲಿಸಿದರೆ, ಸ್ವಂತ ಮನೆ ಹೊಂದುವುದು ಜೀವನದಲ್ಲಿ ಹೆಚ್ಚಿನ ನಿಶ್ಚಿತತೆಯನ್ನು ನೀಡುತ್ತದೆ. ಇದರ ಪರಿಣಾಮವಾಗಿ, ಮೊದಲ ಬಾರಿಗೆ ಮನೆ ಖರೀದಿಸುವವರು ಅನಿರ್ದಿಷ್ಟ ಕಾಲ ಕಾಯುವ ಬದಲು, ಶೀಘ್ರವಾಗಿ ಮನೆ ಖರೀದಿಸುವ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ.
ಖರೀದಿದಾರರು ವಾಸ್ತವವಾಗಿ ಏನನ್ನು ನಿರೀಕ್ಷಿಸುತ್ತಾರೆ

ಗೃಹ ಸಾಲದ ಗ್ರಾಹಕರೊಂದಿಗೆ ಕೋಟಕ್ ಬ್ಯಾಂಕ್ ನಡೆಸಿದ ಸಂವಾದಗಳ ಪ್ರಕಾರ, ಆಧುನಿಕ ಸೌಲಭ್ಯಗಳು ಮತ್ತು ಸಮುದಾಯ ಜೀವನವು ಖರೀದಿದಾರರನ್ನು (ವಿಶೇಷವಾಗಿ ಬಾಡಿಗೆ ಮನೆಯಿಂದ ಸ್ವಂತ ಮನೆಗೆ ಬದಲಾಗುವವರನ್ನು) ಆಕರ್ಷಿಸುತ್ತವೆಯಾದರೂ, ಅಂತಿಮ ನಿರ್ಧಾರವು ಈ ಕೆಳಗಿನ ಕೆಲವು ಮೂಲಭೂತ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ:

  • ಜಮೀನು ಮತ್ತು ಆಸ್ತಿಗೆ ಸಂಬಂಧಿಸಿದ ಎಲ್ಲಾ ಕಾನೂನು ಅಂಶಗಳ ಕೂಲಂಕಷ ಪರಿಶೀಲನೆ.
  • ನಿಗದಿತ ಸಮಯಕ್ಕೆ ಸರಿಯಾಗಿ ಮನೆಯನ್ನು ಹಸ್ತಾಂತರಿಸುವುದು.
  • ಕಟ್ಟಡದ ಗುಣಮಟ್ಟ ಉತ್ತಮವಾಗಿರುವುದು.
  • ನೈಸರ್ಗಿಕ ಬೆಳಕು ಮತ್ತು ಗಾಳಿಯ ಸಂಚಾರವಿರುವ ಮನೆಗಳು.

ಈ ಕುರಿತು ಸಕ್ಸೇನಾ ಅವರು, “ಈ ಅಂಶಗಳೇ ಖರೀದಿದಾರರಿಗೆ ನೆಮ್ಮದಿ ನೀಡುತ್ತವೆ. ಸೌಲಭ್ಯಗಳು ಮುಖ್ಯ, ಆದರೆ ಜನರು ತಮ್ಮ ನಿರ್ಧಾರದಲ್ಲಿ ಸ್ಪಷ್ಟತೆ ಮತ್ತು ವಿಶ್ವಾಸವನ್ನು ಬಯಸುತ್ತಾರೆ. ಕಾಲಾನಂತರದಲ್ಲಿ ಆ ಮನೆ ತಮ್ಮ ಕುಟುಂಬಕ್ಕೆ ಎಷ್ಟು ಪೂರಕವಾಗಿರಲಿದೆ ಎಂಬುದರ ಮೇಲೆ ಅಂತಿಮ ನಿರ್ಧಾರ ನಿಂತಿರುತ್ತದೆ” ಎನ್ನುತ್ತಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

https://kalpa.news/wp-content/uploads/2024/04/VID-20240426-WA0008.mp4

Tags: BENGALURUKannada NewsKannada News LiveKannada News OnlineKannada News WebsiteKannada WebsiteKotak Mahindra BankLatest News KannadaNews in KannadaNews KannadaSilicon Cityಕೋಟಕ್ ಮಹೀಂದ್ರಾ ಬ್ಯಾಂಕ್ಬೆಂಗಳೂರುಸಿಲಿಕಾನ್ ಸಿಟಿ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಕ್ರೈಸ್ತ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಮರಳಿದ ಭದ್ರಾವತಿಯ ಯುವತಿ

Next Post

ಮೇ 18ರಂದು ಮೈಸೂರು ರೈಲು ವಸ್ತು ಸಂಗ್ರಹಾಲಯಕ್ಕೆ ಉಚಿತ ಪ್ರವೇಶ | ಸದುಪಯೋಗಮಾಡಿಕೊಳ್ಳಿ

kalpa News

kalpa News

Next Post
ಮೇ 18ರಂದು ಮೈಸೂರು ರೈಲು ವಸ್ತು ಸಂಗ್ರಹಾಲಯಕ್ಕೆ ಉಚಿತ ಪ್ರವೇಶ | ಸದುಪಯೋಗಮಾಡಿಕೊಳ್ಳಿ

ಮೇ 18ರಂದು ಮೈಸೂರು ರೈಲು ವಸ್ತು ಸಂಗ್ರಹಾಲಯಕ್ಕೆ ಉಚಿತ ಪ್ರವೇಶ | ಸದುಪಯೋಗಮಾಡಿಕೊಳ್ಳಿ

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL