ಕಲ್ಪ ಮೀಡಿಯಾ ಹೌಸ್ | ಕುಶಾಲನಗರ(ಕೊಡಗು) |
ಆನೆಗೆ ಸ್ನಾನ ಮಾಡಿಸುವ ವೇಳೆ ಎರಡು ಆನೆಗಳು #Elephant ಕಿತ್ತಾಡಿದ ಪರಿಣಾಮ ಬಿದ್ದ ಆನೆಯ ಅಡಿಗೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ದುಬಾರೆ ಸಾಕಾನೆ ಶಿಬಿರದಲ್ಲಿ ಇಂದು ನಡೆದಿದೆ.
ಮೃತ ಮಹಿಳೆಯನ್ನು ಚೆನ್ನೈ ಮೂಲದ ಜಿನ್ನು(33) ಎಂದು ಗುರುತಿಸಲಾಗಿದೆ. ಆಕೆಯ ಪತಿ ಜೋಯಲ್ ಎನ್ನುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Also Read>> ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಎನ್’ಎಸ್’ಜಿ ಯೋಧರಿಂದ ಮಾಕ್ ಡ್ರಿಲ್ | ಏನೆಲ್ಲಾ ನಡೆಯಿತು?
ತಮಿಳುನಾಡಿನ ಚೆನ್ನೈ ಮೂಲದ ಪಲ್ಲಾವರಂನ ಜೋಯಲ್ ಹಾಗೂ ಜಿನ್ನು ಅವರು ಕೊಡಗು ಪ್ರವಾಸಕ್ಕೆಂದು ಆಗಮಿಸಿದ್ದರು.
ಇಂದು ಮುಂಜಾನೆ ದುಬಾರೆ ಸಾಕಾನೆ ಶಿಬಿರಕ್ಕೆ #DubareElephantCamp ಭೇಟಿ ನೀಡಿದ್ದರು. ಅರಣ್ಯ ಇಲಾಖೆ ಶುಲ್ಕ ಪಾವತಿಸಿ ಸಾಕಾನೆಗಳಿಗೆ ಸ್ನಾನ ಮಾಡಿಸಲು ಮುಂದಾಗಿದ್ದರು.
ಜೋಯಲ್ ದಂಪತಿ ಸಾಕಾನೆಗಳೊಂದಿಗೆ ಫೋಟೋ ಸಹ ತೆಗೆಸಿಕೊಂಡಿದ್ದರು. ಬಳಿಕ ಸಾಕಾನೆಗಳಿಗೆ ಸ್ನಾನ ಮಾಡಿಸಿ ನೀರು ಕುಡಿಸಲು ಮಾವುತರು ಹಾಗೂ ಕಾವಾಡಿಗಳು ತೆರಳಿದ ಸಂದರ್ಭದಲ್ಲಿ, ಕೆಲ ಪ್ರವಾಸಿಗರು ಸಾಕಾನೆಗಳಿಗೆ ಸ್ನಾನ ಮಾಡಿಸಲು ಮುಂದಾಗಿದ್ದಾರೆ.
ಆನೆಗೆ ಸ್ನಾನ ಮಾಡಿಸುವ ವೇಳೆ ಮಾರ್ತಾಂಡ ಹಾಗೂ ಕಂಜನ್ ಆನೆಗಳು ಕಾದಾಡಿಕೊಂಡಿವೆ. ಈ ವೇಳೆ ಮಾರ್ತಾಂಡ ಸಾಕಾನೆ ಮಹಿಳೆಯ ಮೈಮೇಲೆ ಬಿದ್ದಿದೆ. ಇನ್ನೊಂದು ಆನೆ ಕೆಳಕ್ಕೆ ಬಿದ್ದ ಆನೆಯ ಮೇಲೆ ದಾಳಿ ನಡೆಸಿದೆ. ಪರಿಣಾಮವಾಗಿ ಕೆಳಕ್ಕೆ ಬಿದ್ದ ಆನೆ ಪ್ರತಿರೋಧ ವ್ಯಕ್ತಪಡಿಸುವ ವೇಳೆ ಮಹಿಳೆಯ ಮೇಲೆ ಕಾಲಿನಿಂದ ಅಪ್ಪಳಿಸಿದೆ.
Also Read>> Amazon India to deploy 1,000 Eicher electric trucks for Amazon Now operations
ಆನೆಗಳು ಮೈಮೇಲಿ ಬಿದ್ದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಆಕೆಯ ಪತಿಗೆ ಗಂಭೀರವಾಗಿ ಗಾಯಗಳಾಗಿವೆ.
ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















