ಕಲ್ಪ ಮೀಡಿಯಾ ಹೌಸ್ | ಅರಸೀಕೆರೆ |
ರೈಲ್ವೆ ಇಲಾಖೆಯ ರಕ್ಷಣಾ ಪಡೆ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ವಿವಿಧ ಬ್ರಾಂಡ್’ಗಳ ಒಟ್ಟು 12 ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದೆ.
ರೈಲ್ವೆ ಆವರಣ ಹಾಗೂ ರೈಲುಗಳಲ್ಲಿ ಅಕ್ರಮವಾಗಿ ನಿಷೇಧಿತ ವಸ್ತುಗಳ ಸಾಗಾಣಿಕೆಯನ್ನು ತಡೆಯುವ ಉದ್ದೇಶದಿಂದ ಕೈಗೊಳ್ಳಲಾಗುತ್ತಿರುವ ಆಪರೇಷನ್ ಸತರ್ಕ ಅಭಿಯಾನದ ಅಂಗವಾಗಿ, ಮೇ 18ರಂದು ಅರಸೀಕೆರೆ ವ್ಯಾಪ್ತಿಯಲ್ಲಿ ತಪಾಸಣಾ ಕಾರ್ಯಾಚರಣೆ ನಡೆಸಲಾಯಿತು.
Also Read>> Marriott Bonvoy Expands ICC Partnership to Include Women’s T20 World Cup 2026
ಈ ವೇಳೆ ವಿವಿಧ ಬ್ರಾಂಡ್ ಗಳ ಒಟ್ಟು 12 ಮದ್ಯದ ಬಾಟಲಿಗಳು ಪತ್ತೆಯಾಗಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು ರೂ. 5,123 ಎಂದು ಅಂದಾಜಿಸಲಾಗಿದೆ.
ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ, ರಾಕೇಶ್ ಕುಮಾರ್, ಪಿಸಿ/ಅರಸೀಕೆರೆ ಅವರ ನೇತೃತ್ವದಲ್ಲಿ ಅರಸೀಕೆರೆ ರೈಲ್ವೆ ರಕ್ಷಣಾ ಪಡೆ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳ ಸಂಯುಕ್ತ ತಂಡವು ರೈಲು ಸಂಖ್ಯೆ 17310 ವಾಸ್ಕೋ ಡ ಗಾಮಾ – ಯಶವಂತಪುರ ಎಕ್ಸ್’ಪ್ರೆಸ್ ರೈಲಿನಲ್ಲಿ ಅಚ್ಚರಿ ತಪಾಸಣೆ ನಡೆಸಿತು.
ತಪಾಸಣೆ ವೇಳೆ ಬೆಳಿಗ್ಗೆ ಸುಮಾರು 09:10 ಗಂಟೆಗೆ ಬಾಣಾವರ ಮತ್ತು ಅರಸೀಕೆರೆ ರೈಲು ನಿಲ್ದಾಣಗಳ ಮಧ್ಯೆ ಸಾಮಾನ್ಯ ಬೋಗಿಯ ಬಳಿ ಮಾಲೀಕರಿಲ್ಲದ ಒಂದು ಪ್ಲಾಸ್ಟಿಕ್ ಚೀಲ ಪತ್ತೆಯಾಗಿದೆ.
ಬೋಗಿಯ ಪ್ರಯಾಣಿಕರನ್ನು ವಿಚಾರಿಸಿದಾಗ ಯಾರೂ ಸಹ ಆ ಚೀಲ ತಮ್ಮದೆಂದು ಒಪ್ಪಿಕೊಳ್ಳಲಿಲ್ಲ. ಅನುಮಾನಾಸ್ಪದವಾಗಿ ಕಂಡುಬAದ ಹಿನ್ನೆಲೆಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಚೀಲವನ್ನು ವಶಪಡಿಸಿಕೊಂಡು ಪರಿಶೀಲಿಸಲಾಗಿದೆ.
Also Read>> ಮೈಸೂರು | ಅಧಿಕ ಮಾಸೋತ್ಸವ | ಮೇ 20ರಂದು ಕೌಸಲ್ಯಾ – ಅಪ್ರಮೇಯ ಗಾಯನ
ಪರಿಶೀಲನೆ ವೇಳೆ ವಿವಿಧ ಬ್ರಾಂಡ್ ಗಳ ಒಟ್ಟು 12 ಮದ್ಯದ ಬಾಟಲಿಗಳು ಪತ್ತೆಯಾಗಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು ರೂ. 5,123 ಎಂದು ಅಂದಾಜಿಸಲಾಗಿದೆ.
ವಶಪಡಿಸಿಕೊಂಡ ಮದ್ಯದ ಬಾಟಲಿಗಳ ಛಾಯಾಚಿತ್ರಗಳನ್ನು ತೆಗೆದು, ಅಗತ್ಯ ಕಾನೂನು ಕ್ರಮಗಳನ್ನು ಪೂರ್ಣಗೊಳಿಸಿದ ನಂತರ ಮುಂದಿನ ಕ್ರಮಕ್ಕಾಗಿ ಅರಸೀಕೆರೆ ಅಬಕಾರಿ ನಿರೀಕ್ಷಕರಿಗೆ ಹಸ್ತಾಂತರಿಸಲಾಯಿತು.
ಈ ಸಂಬಂಧ ಅರಸೀಕೆರೆ ಅಬಕಾರಿ ಇಲಾಖೆ, ಕರ್ನಾಟಕ ಅಬಕಾರಿ ಕಾಯ್ದೆ, 1965ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ.
ಈ ತಂಡದಲ್ಲಿ ಜಿ. ಶಿವಮೂರ್ತಿ, ಎಎಸ್‌ಐ/ಆರ್’ಪಿಎಫ್/ಅರಸೀಕೆರೆ ಹಾಗೂ ಆರ್’ಪಿಎಫ್ ಸಿಬ್ಬಂದಿ, ಜೊತೆಗೆ ನಂಜುಂಡಸ್ವಾಮಿ, ಎಸ್’ಐ/ಅಬಕಾರಿ/ಅರಸೀಕೆರೆ ಮತ್ತು ಅಬಕಾರಿ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.
Also Read>> ಬೆಂಗಳೂರಿಗೆ ಬರಲಿದೆ ಬುಲೆಟ್ ಟ್ರೈನ್ | ಎಲ್ಲೆಲ್ಲಿಗೆ? ಬಿಡುಗಡೆಯಾಯ್ತು ನಕ್ಷೆ
ಅಜ್ಜಂಪುರ ಮತ್ತು ಅರಸೀಕೆರೆ ರೈಲು ನಿಲ್ದಾಣಗಳ ಮಧ್ಯೆ ಅಕ್ರಮ ವಸ್ತುಗಳ ಸಾಗಾಣಿಕೆಯನ್ನು ತಡೆಯುವ ಉದ್ದೇಶದಿಂದ ಈ ತಪಾಸಣೆ ಕೈಗೊಳ್ಳಲಾಯಿತು.
ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆ ನಿರಂತರವಾಗಿ ಜಾಗೃತ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ರೈಲ್ವೆ ಆವರಣ ಮತ್ತು ರೈಲುಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಮುಂದುವರೆಸುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















