ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದೇಶದ ರೈಲ್ವೆ ಸಂಪರ್ಕದಲ್ಲಿ ಇತಿಹಾಸ ಸೃಷ್ಠಿಸಲಿರುವ ಬುಲೆಟ್ ರೈಲು Bullet train ನಮ್ಮ ಬೆಂಗಳೂರಿಗೆ ಬರುವುದು ಖಚಿತಗೊಂಡಿದ್ದು, ಈ ಕುರಿತಂತೆ ಕೇಂದ್ರ ಸರ್ಕಾರ ನಕ್ಷೆ ಬಿಡುಗಡೆ ಮಾಡಿದೆ.
ಜಪಾನ್, ಚೀನಾ, ಜರ್ಮನಿಗಳಂತಹ ರಾಷ್ಟçಗಳಲ್ಲಿ ಜನಪ್ರಿಯಗೊಂಡಿರುವ ಬುಲೆಟ್ ರೈಲು ಭಾರತದಲ್ಲಿ ಮೊದಲ ಹಂತದಲ್ಲಿ ಅಹಮದಾಬಾದ್’ನಿಂದ ಮುಂಬೈ ನಡುವೆ ಸಂಚರಿಸಲಿದೆ. ಅಂದುಕೊಂಡಂತೆ ಆದರೆ 2027ರ ಆಗಸ್ಟ್’ನಲ್ಲಿ ಆರಂಭಗೊಳ್ಳಲಿದೆ.
ಮುಂದಿನ ಹಂತದ ನಕ್ಷೆಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಬೆಂಗಳೂರಿನಿಂದ ಹೈದರಾಬಾದ್, ಚೆನ್ನೈಗೆ ಸಂಪರ್ಕಿಸುವ ಬುಲೆಟ್ ರೈಲು ಯೋಜನೆಯ ರೂಪಿಸಲಾಗಿದೆ.
ದಕ್ಷಿಣ ಭಾರತದ ಮೊದಲ ಬುಲೆಟ್ ರೈಲು ಯೋಜನೆಗೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭ ಆಗಲಿದೆ.
ಕಾರಿಡಾರ್-1
ಈ ಹೈಸ್ಪೀಡ್ ರೈಲು ಯೋಜನೆಗಳು ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡಿಗೆ ಸಂಪರ್ಕಿಸುತ್ತದೆ.
ಪ್ರಮುಖವಾಗಿ, ಬೆಂಗಳೂರಿನಿಂದ ಹೈದರಾಬಾದ್, ಚೆನ್ನೈಗೆ ಬುಲೆಟ್ ರೈಲು ಓಡಾಡಲಿದೆ. ಈ ಕಾರಿಡಾರ್ 607 ಕಿಮೀ ಉದ್ದವಿದ್ದು, 101 ಕಿಮೀ ಮಾರ್ಗವು ಕರ್ನಾಟಕದ ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಮೂಲಕ ಹಾದುಹೋಗಲಿದೆ.
ಬೆಂಗಳೂರಿನಿಂದ ಹೈದರಾಬಾದ್ ಪ್ರಯಾಣಿಸಲು 8 ರಿಂದ 12 ಘಂಟೆಗಳ ಸಮಯ ಬೇಕಾಗುತ್ತದೆ. ಆದರೆ, ಬುಲೆಟ್ ರೈಲಿಗೆ ಕೇವಲ ಎರಡು ಗಂಟೆ ಸಾಕಾಗಲಿದೆ.
Also read: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ | ರಸಾಯನಶಾಸ್ತ್ರ ತರಗತಿ ಸಂಸ್ಥಾಪಕ ಶಿವರಾಜ್ ಸಿಬಿಐನಿಂದ ಬಂಧನ
ಕಾರಿಡಾರ್-2
ಎರಡನೇ ಕಾರಿಡಾರ್ ಮೈಸೂರು, ಬೆಂಗಳೂರು, ಚೆನ್ನೈ ನಗರವನ್ನು ಸಂಪರ್ಕಿಸಲಿದೆ.
ಇದು 430 ಕಿಮೀ ಉದ್ದವಿದ್ದು, ಹಾಲಿ ಬೆಂಗಳೂರಿನಿಂದ ಚೆನ್ನೈಗೆ 5-7 ಗಂಟೆಗಳು ಬೇಕಾಗುತ್ತದೆ. ಆದರೆ, ಹೈಸ್ಪೀಡ್ ರೈಲು ಆರಂಭವಾದರೆ ಕೇವಲ 1 ಗಂಟೆ 15 ನಿಮಿಷ ತಗಲುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










Comments 3