ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಇಲ್ಲಿನ ಕುಮದ್ವತಿ ರೆಸೆಡೆನ್ಷಿಯಲ್ ಸೆಂಟ್ರಲ್ ಸ್ಕೂಲಿನಲ್ಲಿ ಎನ್’ಇಪಿ 2020ರ ಮಾರ್ಗಸೂಚಿಗಳ ಅನುಸಾರ ಮೂರು ದಿನಗಳ ಕಾಲ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಆಯೋಜಿಸಲಾಗಿದ್ದ ಕಂಪ್ಯೂಟರ್ ಕೌಶಲ್ಯ ವೃದ್ಧಿ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.
ಮೇ 18ರಿಂದ 20ರವರೆಗೆ ಮೂರು ದಿನಗಳ ಕಾಲ ನಡೆದ ಎನ್’ಇಪಿ 2020ರ ಮಾರ್ಗಸೂಚಿಗಳ ಅನುಸಾರ ಈ ಕಂಪ್ಯೂಟರ್ ತರಬೇತಿ ಕೌಶಲ್ಯ ವೃದ್ಧಿ ಕಾರ್ಯಾಗಾರ ನಡೆಯಿತು.
ಶಾಲೆಯ ಕಂಪ್ಯೂಟರ್ ಪ್ರಯೋಗಾಲಯದಲ್ಲಿ ನಡೆದ ಈ ಕಾರ್ಯಾಗಾರವನ್ನು ಸಂಪನ್ಮೂಲ ವ್ಯಕ್ತಿಗಳಾದ ಡಾ. ಯದುಕುಮಾರ್, ಡಾ. ಕಿರಣ್ ಕುಮಾರ್ ಮತ್ತು ಡಾ. ಎಚ್. ರವಿ ಅವರು ಕಾರ್ಯಾಗಾರವನ್ನು ನಡೆಸಿಕೊಟ್ಟರು. ಎಲ್ಲಾ ಸಿಬ್ಬಂದಿ ವರ್ಗದವರು ಉತ್ಸಾಹದಿಂದ ಪಾಲ್ಗೊಂಡರು.
Also read: ಜೂನ್ 1 | ಶಿವಮೊಗ್ಗದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಯೋಜನೆಗೆ ಚಾಲನೆ | ಎಲ್ಲಿಯವರೆಗೂ ಶಿಕ್ಷಣ ಸಿಗಲಿದೆ?
ಮೊದಲ ದಿನ ಎಂಎಸ್ ಎಕ್ಸ್’ಎಲ್ ಮೂಲ ಸೂತ್ರಗಳು, ಡೇಟಾ ಸಾರ್ಟಿಂಗ್ ಮತ್ತು ಅಂಕಪಟ್ಟಿ ತಯಾರಿಕೆ ಕುರಿತು ತರಬೇತಿ ನೀಡಲಾಯಿತು. ಎರಡನೇ ದಿನ ಚಾರ್ಚ್’ಗಳು, ಕಂಡೀಷನಲ್ ಫಾರ್ಮ್ಯಾಟಿಂಗ್ ಮತ್ತು ಫಲಿತಾಂಶ ವಿಶ್ಲೇಷಣೆ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಯಿತು. ಮೂರನೇ ದಿನ ಡಿಜಿಟಲ್ ಬೋಧನಾ ಉಪಕರಣಗಳು ಮತ್ತು ಗೂಗಲ್ ವರ್ಕ್ ಸ್ಪೇಸ್ ಬಳಕೆ ಕುರಿತು ಮಾಹಿತಿ ನೀಡಲಾಯಿತು.
ಪ್ರಾಂಶುಪಾಲರಾದ ಎಚ್.ಡಿ. ಪ್ರಶಾಂತ, ಆನ್’ಲೈನ್ ಹಾಜರಾತಿ, ಅಂಕಗಳ ನಮೂದು ಮತ್ತು ಇ-ಕಂಟೆಂಟ್ ತಯಾರಿಕೆಗೆ ಶಿಕ್ಷಕರ ಡಿಜಿಟಲ್ ಸಾಮರ್ಥ್ಯವನ್ನು ಹೆಚ್ಚಿಸುವುದು ಈ ಕಾರ್ಯಾಗಾರದ ಉದ್ದೇಶ ಎಂದು ತಿಳಿಸಿದರು.
ಆಡಳಿತ ಮಂಡಳಿಯ ಪ್ರತಿನಿಧಿಗಳಾದ ಡಾ. ಜಿ.ಎಸ್. ಶಿವಕುಮಾರ್ ಮತ್ತು ಕೆ. ಕುಬೇರಪ್ಪ ಅವರು ಕಾರ್ಯಕ್ರಮವನ್ನು ಶ್ಲಾಘಿಸಿದರು. ಸಂಯೋಜಕ ಆರ್. ಪ್ರಭು ಕಾರ್ಯಕ್ರಮ ನಿರ್ವಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















