ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೇಶದಲ್ಲಿ ಮತ್ತೊಮ್ಮೆ ಶನಿವಾರ (ಮೇ 23) ಪೆಟ್ರೋಲ್ – ಡೀಸಲ್ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕಳೆದ ಹತ್ತು ದಿನಗಳಲ್ಲಿ ಇದು ಮೂರನೇ ಬಾರಿ ತೈಲ ಬೆಲೆಯಲ್ಲಿ ಏರಿಕೆ ಕಂಡಿದ್ದು, ಜನರ ತಲೆನೋವಿಗೆ ಕಾರಣವಾಗಿದೆ.
ಪೆಟ್ರೋಲ್ ಬೆಲೆ ಲೀಟರ್‌ಗೆ 87 ಪೈಸೆ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 9 ಪೈಸೆ ಹೆಚ್ಚಳವಾಗಿದೆ.
ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ನಿರಂತರ ಒತ್ತಡದ ನಡುವೆಯೂ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಈ ತಿಂಗಳಲ್ಲಿ ಚಿಲ್ಲರೆ ಇಂಧನ ದರಗಳಲ್ಲಿ ಮೂರನೇ ಏರಿಕೆಯನ್ನು ದಾಖಲಿಸಿವೆ.
Also read: ಶಿವಮೊಗ್ಗದಲ್ಲಿ ಕ್ರಿಕೆಟ್ ಬೆಟ್ಟಿಂಗ್, ಆರು ಮಂದಿ ಬಂಧನ!
ಶಿವಮೊಗ್ಗದಲ್ಲಿ ಪೆಟ್ರೋಲ್ ಬೆಲೆ ನಿನ್ನೆ ಲೀಟರ್‌ಗೆ 108.06 ಇದ್ದ ದರವು ಇಂದು 108.99 ಗೆ ಏರಿಕೆಯಾಗಿದೆ. ಡೀಸೆಲ್ ಬೆಲೆ ನಿನ್ನೆ ಲೀಟರ್‌ಗೆ 95.12 ಇದ್ದ ದರವು ಇಂದು 97.07 ತಲುಪಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















