ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭದ್ರಾವತಿ ನಗರದ ಬಿ.ಹೆಚ್.ರಸ್ತೆಯ ಪದ್ಮ ನಿಲಯ ಹೋಟೆಲ್ ಪಕ್ಕದ ಓಣಿಯಲ್ಲಿ ನಿಲ್ಲಿಸಿದ್ದ ಬೊಲೇರೋ ಪಿಕಪ್ ವಾಹನವು ಓರ್ವ ಬಾಲಕನ ಕೈಚಳಕದಿಂದಾಗಿ ಮುಖ್ಯ ರಸ್ತೆಗೆ ಬಂದು ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಹತ್ತಿ ಇಳಿದು ನಿಂತಿದೆ. ಈ ಅವಘಡ ಚಾಲಕನ ಅಜಾಗರೂಕತೆಯಿಂದಾಗಿದೆ ಎನ್ನಲಾಗಿದೆ. ಅದೃಷ್ವವಶಾತ್ ರಸ್ತೆಯಲ್ಲಿ ಮತ್ತು ಅಕ್ಕಪಕ್ಕದಲ್ಲಿ ಯಾರೂ ಇಲ್ಲದಿರುವುದರಿಂದ ಅನಾಹುತ ತಪ್ಪಿರುವ ಘಟನೆ ನಡೆದಿದೆ.
ಘಟನೆಯ ವಿವರ
ಪದ್ಮ ನಿಲಯ ಹೋಟೆಲ್ ಪಕ್ಕದಲ್ಲಿ ಮನೆ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಜಾಗಾದಲ್ಲಿ ಮಧ್ಯಾಹ್ನ ೨.೩೦ ವೇಳೆಯಲ್ಲಿ ಕಾಮಗಾರಿಯ ಪರಿಕರಗಳನ್ನು ಬೊಲೇರೋ ವಾಹನಕ್ಕೆ ತುಂಬುತ್ತಿದ್ದಾಗ ಬಾಲಕನೋರ್ವ ವಾಹನದಲ್ಲಿ ಕುಳಿತು ವಾಹನದ ಕ್ಲೆಚ್ ಹಾಕಿದ್ದಾನೆ. ಅಲ್ಲಿ ಇಳಿಜಾರಾರು ಆಗಿರುವುದರಿಂದ ವಾಹನವು ಇದ್ದಕ್ಕಿದ್ದ ಹಾಗೆ ರಸ್ತೆಗೆ ಜೋರಾಗಿ ಬಂದು ಡಿವೈಡರ್‌ಗೆ ಡಿಕ್ಕಿ ಹೊಡೆದು ಹತ್ತಿ ಇಳಿದು ನಿಂತಿದೆ.
Also read: ಎನ್’ಎಫ್’ಪಿಆರ್’ಸಿ ಕಾರ್ಯಾಗಾರ: ವಿಕಸಿತ ಭಾರತ ಗುರಿಗೆ ಆರೋಗ್ಯ, ಶಿಕ್ಷಣ ಮತ್ತು ಆಡಳಿತ ಸುಧಾರಣೆಗೆ ಒತ್ತು
ಇಲ್ಲಿ ಪ್ರತಿನಿತ್ಯ ಹೋಟೆಲಿಗೆ ಬರುವ ವಾಹನಗಳು ಇದೇ ಜಾಗಾದಲ್ಲಿ ನಿಲುಗಡೆ ಆಗುತ್ತಿತ್ತು. ಅಲ್ಲದೆ ಜನರು ಸಹ ಇದೇ ಜಾಗಾದಲ್ಲಿ ನಿಲ್ಲುತ್ತಿದ್ದರು. ಅಷ್ಟೇ ಅಲ್ಲದೆ ಮುಖ್ಯ ರಸ್ತೆಯ ಇಕ್ಕೆಲಗಳ ಎರಡೂ ಬದಿಯ ರಸ್ತೆಯಲ್ಲಿ ಅಪಾರ ಸಂಖ್ಯೆಯ ವಾಹನಗಳು ಸಂಚಾರವೂ ಆಗುತ್ತಿತ್ತು. ಅದೃಷ್ಟವಶಾತ್ ಇದ್ಯಾವುದೂ ಇಲ್ಲದಿರುವುದರಿಂದ ಯಾವುದೇ ಅವಘಡಗಳು ಆಗಿಲ್ಲ. ಕೆಲಕಾಲ ರಸ್ತೆ ಸಂಚಾರಕ್ಕೆ ತೊಂದರೆಯಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















