No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
  • Advertise With Us
  • Grievances
  • About Us
  • Contact Us
Friday, October 16, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಎನ್’ಎಫ್’ಪಿಆರ್’ಸಿ ಕಾರ್ಯಾಗಾರ: ವಿಕಸಿತ ಭಾರತ ಗುರಿಗೆ ಆರೋಗ್ಯ, ಶಿಕ್ಷಣ ಮತ್ತು ಆಡಳಿತ ಸುಧಾರಣೆಗೆ ಒತ್ತು

ನೇಷನ್ ಫಸ್ಟ್ ಪಾಲಿಸಿ ರಿಸರ್ಚ್ ಅಂಡ್ ಚೇಂಜ್ ಫೌಂಡೇಶನ್ ವತಿಯಿಂದ ಜನಪ್ರತಿನಿಧಿಗಳಿಗೆ ಮಹತ್ವದ ಕಾರ್ಯಾಗಾರ ಯಶಸ್ವಿ

kalpa News by kalpa News
May 27, 2026
in Special Articles
1
ಎನ್’ಎಫ್’ಪಿಆರ್’ಸಿ ಕಾರ್ಯಾಗಾರ: ವಿಕಸಿತ ಭಾರತ ಗುರಿಗೆ ಆರೋಗ್ಯ, ಶಿಕ್ಷಣ ಮತ್ತು ಆಡಳಿತ ಸುಧಾರಣೆಗೆ ಒತ್ತು
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  | ನವದೆಹಲಿ |

ಎನ್’ಎಫ್’ಪಿಆರ್’ಸಿ NFPRC ವತಿಯಿಂದ ರಾಷ್ಟ್ರಮಟ್ಟದ ಕಾರ್ಯಾಗಾರ ನಡೆದಿದ್ದು, ವಿಕಸಿತ ಭಾರತದ ಗುರಿಗಾಗಿ ಆರೋಗ್ಯ, ಶಿಕ್ಷಣ ಮತ್ತು ಆಡಳಿತ ಸುಧಾರಣೆಗೆ ಒತ್ತು ನೀಡುವುದು ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯೋನ್ಮುಖವಾಗಬೇಕು ಎಂಬ ಸಂಕಲ್ಪವನ್ನು  ಕೈಗೊಳ್ಳಲಾಯಿತು.

ನೇಷನ್ ಫಸ್ಟ್ ಪಾಲಿಸಿ ರಿಸರ್ಚ್ ಅಂಡ್ ಚೇಂಜ್ ಫೌಂಡೇಶನ್ Nation First Policy Research and Change Foundation ವತಿಯಿಂದ ರಾಷ್ಟ್ರ ರಾಜಧಾನಿ ನವದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್ ಗುಲ್ಮೊಹರ್ ಹಾಲ್’ನಲ್ಲಿ ಸಂಸದರು ಮತ್ತು ಶಾಸಕರಿಗಾಗಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಾಗಾರದಲ್ಲಿ ಈ ಸಂಕಲ್ಪ ಮಾಡಲಾಯಿತು.
ದೇಶದ ವಿವಿಧ ಭಾಗಗಳಿಂದ ಲೋಕಸಭೆ, ರಾಜ್ಯಸಭೆ ಮತ್ತು ವಿಧಾನಸಭೆಗಳ ಸಾರ್ವಜನಿಕ ಪ್ರತಿನಿಧಿಗಳು ಹಾಗೂ ನೀತಿ ತಜ್ಞರು ಭಾಗವಹಿಸಿ ಆರೋಗ್ಯ ಪರಿವರ್ತನೆ, ಶಿಕ್ಷಣ ಸುಧಾರಣೆ ಮತ್ತು ಶಾಸಕರ ಸಂವಹನ ತಂತ್ರಗಳ ಕುರಿತು ಚರ್ಚಿಸಿದರು.

ಈ ಕಾರ್ಯಾಗಾರವು ಎನ್’ಎಫ್’ಪಿಆರ್’ಸಿ ನಡೆಸಿದ ಹಿಂದಿನ ಕಾರ್ಯಕ್ರಮಗಳ ಯಶಸ್ಸಿನ ಹೆಜ್ಜೆಗಳನ್ನು ಮುಂದುವರೆಸಲು ಇಚ್ಛೆ ವ್ಯಕ್ತಪಡಿಸಲಾಯಿತು.

ಶಾಸಕರು ಮತ್ತು ನೀತಿ ತಜ್ಞರ ನಡುವೆ ನೇರ ಸಂವಾದ ನಡೆಸಿ ಆಡಳಿತದ ಪರಿಣಾಮಕಾರಿತ್ವ ಹೆಚ್ಚಿಸುವುದು, ಸಾಂಸ್ಥಿಕ ವ್ಯವಸ್ಥೆಗಳನ್ನು ಬಲಪಡಿಸುವುದು ಮತ್ತು ಕ್ಷೇತ್ರ ಮಟ್ಟದ ಫಲಿತಾಂಶಗಳನ್ನು ಸುಧಾರಿಸುವುದು ಎಂಬ ಉದ್ದೇಶವನ್ನು ಹೊಂದಿತ್ತು.

ಡೇಟಾ ಆಧಾರಿತ ಆಡಳಿತದ ಮಹತ್ವ

ಎನ್’ಎಫ್’ಪಿಆರ್’ಸಿ ಅಧ್ಯಕ್ಷರಾದ ತರುಣ್ ಚುಗ್ ಅವರ ಮಾತನಾಡಿ, ವಿಕಸಿತ ಭಾರತ2047 ಗುರಿ ಸಾಧಿಸಲು ಪರಿಣಾಮಕಾರಿ ಅನುಷ್ಠಾನ, ಸಂಸ್ಥಾತ್ಮಕ ಸಮನ್ವಯ ಮತ್ತು ಜನಕೇಂದ್ರಿತ ಆಡಳಿತ ಅವಶ್ಯಕವಾಗಿದೆ.  ಇದರೊಟ್ಟಿಗೆ, ಸಮನ್ವಯಿತ ಆಡಳಿತ (convergence-driven governance) ಮತ್ತು ಡೇಟಾ ಆಧಾರಿತ ನೀತಿ ರೂಪಿಕರಣವು ಸಮಗ್ರ ಅಭಿವೃದ್ಧಿಗೆ ಪ್ರಮುಖ ಎಂದು ಅಭಿಪ್ರಾಯಪಟ್ಟರು.

ಆಯುಷ್ಮಾನ್ ಭಾರತ: ಆರೋಗ್ಯ ವ್ಯವಸ್ಥೆಯ ಬಲವರ್ಧನೆ

ಲೋಕಸಭಾ ಸದಸ್ಯ ಡಾ.ಸಿ.ಎನ್. ಮಂಜುನಾಥ್ Dr. C N Manjunath ಅವರು “Ayushman Bharat: Redesigning India’s Healthcare Foundations” ವಿಷಯದ ಕುರಿತಾಗಿ ಮಾತನಾಡಿ, ಆಯುಷ್ಮಾನ್ ಭಾರತ ಯೋಜನೆಯ ಮೂಲಕ ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಆಗುತ್ತಿದೆ ಎಂದು ತಿಳಿಸಿದರು.

PM-JAY ಮತ್ತು Health & Wellness Centres  ಮೂಲಕ ಆರ್ಥಿಕ ಭದ್ರತೆ ಹಾಗೂ ಪ್ರಾಥಮಿಕ ಆರೋಗ್ಯ ಸೇವೆಗಳ ಪ್ರವೇಶವನ್ನು ವಿಸ್ತರಿಸಲಾಗುತ್ತಿದೆ ಎಂದರು.

ಜಿಲ್ಲಾ ಮಟ್ಟದ ಅನುಷ್ಠಾನ, ಕ್ಲೇನ್’ಗಳ ನಿರ್ವಹಣೆ, ಆರೋಗ್ಯ ಸೇವೆಗಳ ಪ್ರವೇಶ ಮತ್ತು ಮತ್ತು Ayushman Bharat Digital Mission (ABDM)  ಮೂಲಕ ಡಿಜಿಟಲ್ ಮೂಲಸೌಕರ್ಯದ ಪಾತ್ರದ ಕುರಿತು ಚರ್ಚೆಗಳು ನಡೆದವು. ಕೊನೆಯ ಮೈಲು (last-mile)  ಸೇವಾ ವಿತರಣೆ ಬಲಪಡಿಸುವ ಅಗತ್ಯವನ್ನೂ ಅವರು ಒತ್ತಿಹೇಳಿದರು.
ಎನ್’ಇಪಿ 2020 ಮೂಲಕ ಶಿಕ್ಷಣ ಪರಿವರ್ತನೆ

ಸೆಂಟ್ರಲ್ ಸ್ಕ್ವೇರ್ ಫೌಂಡೇಶನ್ ಹಿರಿಯ ನಿರ್ದೇಶಕರಾದ  ಸೌರಭ್ ಚೋಪ್ರಾ ಅವರು  “Strengthening India’s Education Framework”  ಎಂಬ ವಿಷಯದ ಕುರಿತಾಗಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ 2020 ಜಾರಿಗೆ ಬಂದ ನಂತರ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳು ಕಂಡುಬರುತ್ತಿವೆ ಎಂದು ಹೇಳಿದರು.

ತಾಯಿಭಾಷಾ ಆಧಾರಿತ ಬೋಧನೆ, ವೃತ್ತಿಪರ ಶಿಕ್ಷಣದ ಏಕೀಕರಣ, ಮತ್ತು ಸಾಮರ್ಥ್ಯ ಆಧಾರಿತ ಕಲಿಕೆ ವಿಧಾನಗಳು ವಿದ್ಯಾರ್ಥಿಗಳನ್ನು ಭವಿಷ್ಯಕ್ಕೆ ಸಿದ್ಧಗೊಳಿಸುತ್ತಿವೆ ಎಂದು ಅವರು ತಿಳಿಸಿದರು.

ಡಿಜಿಟಲ್ ಸಂವಹನ: ಶಾಸಕರಿಗೆ ಹೊಸ ಅವಕಾಶಗಳು

ಜಿನೀವಾದಲ್ಲಿನ WTOನಲ್ಲಿರುವ ಭಾರತದ ಶಾಶ್ವತ ಮಿಷನ್ ಕೌನ್ಸಿಲರ್ ಹಾಗೂ’ಹೌ ಇಂಡಿಯಾ ಬ್ರೇವ್ಡ್ ದಿ ಕೋವಿಡ್-19 ಪ್ಯಾಂಡೆಮಿಕ್’ ಪುಸ್ತಕದ ಲೇಖಕರಾದ ಆಶಿಶ್ ಚಂದೋರ್ಕರ್ ಅವರು ಮಾತನಾಡಿ, ಕೋವಿಡ್ – 19 ಸಾಂಕ್ರಾಮಿಕ ರೋಗದ ತುರ್ತು ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಅತ್ಯಂತ ಗಮನಾರ್ಹ ಹಾಗೂ ಮಾದರಿಯಾದ ಸಂಕಲ್ಪದೊಂದಿಗೆ ಎದುರಿಸಿದ ರೀತಿಯ, ಕೈಗೊಂಡ ಸಮನ್ವಯತೆ ಹಾಗೂ ಸಹಾನುಭೂತಿಯ ಕುರಿತಾಗಿ ಉಲ್ಲೇಖಿಸಿದರು.

ಭಾರತದ ಪ್ರತಿಕ್ರಿಯೆ ನಿರ್ಣಾಯಕ ಆಡಳಿತ, ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆ, ಕೋವಿನ್’ನಂತಹ ಡಿಜಿಟಲ್ ವೇದಿಕೆಗಳ ಪರಿಣಾಮಕಾರಿ ಬಳಕೆ ಹಾಗೂ ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನಗಳಲ್ಲಿ ಒಂದರ ಸಮನ್ವಯದಿಂದ ರೂಪುಗೊಂಡಿತ್ತು ಎಂದು ಅವರು ತಿಳಿಸಿದರು.

Also read: ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ? ನಾಳೆ ರಾಜೀನಾಮೆ?

ಸಾಂಕ್ರಾಮಿಕದಂತಹ ಸಂಕಷ್ಟದ ಸಮಯದಲ್ಲಿ, ಬಲವಾದ ನಾಯಕತ್ವ, ತಂತ್ರಜ್ಞಾನ ಬಳಕೆ ಮತ್ತು ಒಗ್ಗಟ್ಟಿನ ರಾಷ್ಟ್ರೀಯ ಪ್ರಯತ್ನಗಳ ಮೂಲಕ ದೇಶವು ಅತ್ಯಂತ ಕಠಿಣ ಸವಾಲುಗಳನ್ನು ಸಹ ಯಶಸ್ವಿಯಾಗಿ ಎದುರಿಸಬಹುದು ಎಂಬುದಕ್ಕೆ ಭಾರತದ ಅನುಭವವೇ ಒಂದು ಸ್ಪಷ್ಟ ಉದಾಹರಣೆ ಎಂದು ಸಂದೇಶದಲ್ಲಿ ಒತ್ತಿ ಹೇಳಿದರು.

ಎನ್’ಎಫ್’ಪಿಆರ್’ಸಿ ಬಗ್ಗೆ

ನೇಷನ್ ಫಸ್ಟ್ ಪಾಲಿಸಿ ರಿಸರ್ಚ್ ಅಂಡ್ ಚೇಂಜ್ ಫೌಂಡೇಶನ್ ದೆಹಲಿ ಆಧಾರಿತ ಸಾರ್ವಜನಿಕ ನೀತಿ ಚಿಂತನಾ ಸಂಸ್ಥೆಯಾಗಿದ್ದು, ಸಂಶೋಧನೆ, ಶಾಸಕರಿಗೆ ಬೆಂಬಲ ಮತ್ತು ನೀತಿ ಆವಿಷ್ಕಾರಗಳ ಮೂಲಕ ಭಾರತದ ಆಡಳಿತವನ್ನು ಬಲಪಡಿಸುವ ಕಾರ್ಯ ಮಾಡುತ್ತಿದೆ. CLPG ಮತ್ತು CAIG  ಕೇಂದ್ರಗಳ ಮೂಲಕ ಇದು ವಿವಿಧ ಕ್ಷೇತ್ರಗಳಲ್ಲಿ ನೀತಿ ರೂಪಿಕರಣ ಮತ್ತು ಪರಿಣಾಮ ವಿಶ್ಲೇಷಣೆ ನಡೆಸುತ್ತದೆ.

ಲೋಕಸಭಾ ಸದಸ್ಯ ಸಾಂಬಿತ್ ಪಾತ್ರಾ ಅವರು ಮಾತನಾಡಿ, ಜನಪ್ರತಿನಿಧಿಗಳು ಮಾಧ್ಯಮದೊಂದಿಗೆ ವಿಶ್ವಾಸ ಅಥವಾ ಉತ್ತಮ ಬಾಂಧವ್ಯ ಹೊಂದುವ ವಿಷಯದಡಿ ಸಾಮರ್ಥ್ಯವರ್ಧನಾ ಅಧಿವೇಶನ ನಡೆಸಿದರು.

ವೇಗವಾಗಿ ಬದಲಾಗುತ್ತಿರುವ ಡಿಜಿಟಲ್ ಮಾಧ್ಯಮ ಪರಿಸರದಲ್ಲಿ, ಸಾರ್ವಜನಿಕ ನಂಬಿಕೆ ನಿರ್ಮಾಣ ಮತ್ತು ಕ್ಷೇತ್ರ ಮಟ್ಟದ ಸಂಪರ್ಕವನ್ನು ಬಲಪಡಿಸಲು ಕಾರ್ಯತಂತ್ರದ ಸಂವಹನದ ಅಗತ್ಯತೆಯ ಮೇಲೆ ಕೇಂದ್ರೀಕರಿಸಿತು.
ಸಾಮಾಜಿಕ ಮಾಧ್ಯಮ ನಿರ್ವಹಣೆಗೆ ಪ್ರಾಯೋಗಿಕ ವಿಧಾನಗಳು, ಪರಿಣಾಮಕಾರಿ ನಿರೂಪಣೆ ನಿರ್ಮಾಣ, ತಪ್ಪು ಮಾಹಿತಿಗೆ ಪ್ರತಿಕ್ರಿಯಿಸುವ ಕ್ರಮಗಳು, ಮಾಧ್ಯಮ ಮೇಲ್ವಿಚಾರಣಾ ಸಾಧನಗಳ ಬಳಕೆ ಹಾಗೂ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಅನುಸರಿಸಬೇಕಾದ ಸಂವಹನ ತಂತ್ರಗಳ ಕುರಿತು ವಿವರವಾದ ಚರ್ಚೆಗಳು ನಡೆದವು.

ಪ್ರಮುಖವಾಗಿ, ಪ್ರಾದೇಶಿಕ ಮತ್ತು ಸ್ಥಳೀಯ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅಗತ್ಯ, ಸಾರ್ವಜನಿಕ ಸಂವಹನದಲ್ಲಿ ನೈತಿಕ ಮಾನದಂಡಗಳನ್ನು ಕಾಪಾಡಿಕೊಳ್ಳುವ ಮಹತ್ವ, ಹಾಗೂ ಸರ್ಕಾರಿ ಯೋಜನೆಗಳು ಮತ್ತು ಆಡಳಿತದ ಫಲಿತಾಂಶಗಳ ಬಗ್ಗೆ ಜನರಲ್ಲಿ ಅರಿವು ಹೆಚ್ಚಿಸಲು ಡಿಜಿಟಲ್ ವೇದಿಕೆಗಳ ಬಳಕೆಯ ಪ್ರಾಮುಖ್ಯತೆಯ ಕುರಿತಾಗಿ ತಿಳಿಸಲಾಯಿತು.

ಸಹಕಾರ, ಸಂವಾದ ಮತ್ತು ಮುಂದಿನ ದಾರಿ

ಎನ್’ಎಫ್’ಪಿಆರ್’ಸಿ ಸಂಸ್ಥಾಪಕ ಮಂಡಳಿ ಸದಸ್ಯರಾದ ಅಭಿನವ್ ಪ್ರಕಾಶ್ ಅವರು ಮಾತನಾಡಿ, ಎನ್’ಎಫ್’ಪಿಆರ್’ಸಿ ಸಂಸ್ಥೆ ಮುಂದಿನ ದಿನಗಳಲ್ಲಿ ಸಹ ಇಂತಹ ಕಾರ್ಯಾಗಾರಗಳು ಮತ್ತು ಸಂವಾದಗಳನ್ನು ಮುಂದುವರೆಸುವುದಾಗಿ ತಿಳಿಸಿದರು.

ಈ ಕಾರ್ಯಾಗಾರದಲ್ಲಿ ನೀತಿ ಸಂಶೋಧನೆ ಮತ್ತು ಅನುಷ್ಠಾನವನ್ನು ಒಟ್ಟುಗೂಡಿಸುವ ಮೂಲಕ ಆಡಳಿತದ ಪರಿಣಾಮಕಾರಿತ್ವವನ್ನು ಹೆಚ್ಚಿಸುವುದು, ಡಿಜಿಟಲ್ ಆಡಳಿತ ವ್ಯವಸ್ಥೆಯನ್ನು ಸುಧಾರಿಸುವುದು ಮತ್ತು ನಾಗರಿಕರ ಸಂಪರ್ಕವನ್ನು ಬಲಪಡಿಸುವುದು ಎಂಬ ವಿಷಯಗಳಿಗೆ ಒತ್ತು ನೀಡಲಾಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news    

https://kalpa.news/wp-content/uploads/2024/04/VID-20240426-WA0008.mp4

               

Tags: Ayushman BharatAyushman Bharat Digital Mission (ABDM)Dr C N ManjunathKannada NewsKannada News LiveKannada News OnlineKannada News WebsiteKannada WebsiteLatest News KannadaNation First Policy Research and Change FoundationNew DelhiNews in KannadaNews KannadaNFPRCPM-JAYಎನ್'ಎಫ್'ಪಿಆರ್'ಸಿನವದೆಹಲಿನೇಷನ್ ಫಸ್ಟ್ ಪಾಲಿಸಿ ರಿಸರ್ಚ್ ಅಂಡ್ ಚೇಂಜ್ ಫೌಂಡೇಶನ್
Share199Tweet125Send
Aniruddha Vasishta S R

Aniruddha Vasishta S R

Editor-in-Chief

Previous Post

ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ? ನಾಳೆ ರಾಜೀನಾಮೆ?

Next Post

ಬಾಲಕನ ಕೈಚಳಕ, ರಸ್ತೆಗೆ ಬಂದ ಬೊಲೇರೊ ಪಿಕಪ್ ವಾಹನ, ಆಗಿದ್ದೇನು?

kalpa News

kalpa News

Next Post
ಬಾಲಕನ ಕೈಚಳಕ, ರಸ್ತೆಗೆ ಬಂದ ಬೊಲೇರೊ ಪಿಕಪ್ ವಾಹನ, ಆಗಿದ್ದೇನು?

ಬಾಲಕನ ಕೈಚಳಕ, ರಸ್ತೆಗೆ ಬಂದ ಬೊಲೇರೊ ಪಿಕಪ್ ವಾಹನ, ಆಗಿದ್ದೇನು?

Comments 1

  1. Pingback: ಬಾಲಕನ ಕೈಚಳಕ, ರಸ್ತೆಗೆ ಬಂದ ಬೊಲೇರೊ ಪಿಕಪ್ ವಾಹನ, ಆಗಿದ್ದೇನು? » kalpa.news

Leave a Reply Cancel reply

Your email address will not be published. Required fields are marked *

No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL