ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮನೆಗೆ ನುಗ್ಗಿ ನಗದು ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ವಿನೋಬನಗರ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತ ಆರೋಪಿಗಳಿಂದ 5,13,000 ನಗದನ್ನು ವಶಪಡಿಸಿಕೊಂಡಿದ್ದಾರೆ.
ಟಿಪ್ಪುನಗರದ ಮೊಹಮದ್ ಸಲೀಮ್ ಹಾಗೂ ಮೊಹಮದ್ ರಜಾಕ್ ಬಂಧಿತ ಆರೋಪಿಗಳು.
ಪ್ರಕರಣದ ವಿವರ
ನಗರದ ಕಾಶೀಪುರ ಲಕ್ಕಪ್ಪ ಲೇಔಟ್‌ನ ಸೋಮಶೇಖರ್ ಎಂಬುವರ ಮನೆಯಲ್ಲಿ ಮೇ 26ರಂದು ಕಳ್ಳತನವಾಗಿತ್ತು. ಮನೆಯಲ್ಲಿದ್ದ 7 ಲಕ್ಷ ನಗದು ದೋಚಿ ಕಳ್ಳರು ಪರಾರಿಯಾಗಿದ್ದರು. ಪ್ರಕರಣ ಸಂಬಂಧ ವಿನೋಬನಗರದಲ್ಲಿ ಪ್ರಕರಣ ದಾಖಲಾಗಿತ್ತು.
ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ ಎ.ಜಿ. ಕೆಎಸ್‌ಪಿಎಸ್ ಹಾಗೂ ಶಿವಮೊಗ್ಗ ಉಪ ವಿಭಾಗ-ಬಿ ಪೊಲೀಸ್ ಉಪಾಧೀಕ್ಷಕ ಸಂಜೀವ್ ಕುಮಾರ್ ಟಿ.ಡಿ. ಅವರ ಮಾರ್ಗದರ್ಶನದಲ್ಲಿ ವಿನೋಬನಗರ ಪೊಲೀಸ್ ಠಾಣೆ ವತಿಯಿಂದ ವಿಶೇಷ ತಂಡವನ್ನು ರಚಿಸಲಾಗಿತ್ತು.
ವಿನೋಬನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಂತೋಷ ಕುಮಾರ್ ಡಿ.ಕೆ. ಅವರ ಉಸ್ತುವಾರಿಯಲ್ಲಿ ಪೊಲೀಸ್ ಉಪ ನಿರೀಕ್ಷಕ ತಿರುಮಲೇಶ್ ಜಿ. ನೇತೃತ್ವದಲ್ಲಿ ಈ ತಂಡ ಕಾರ್ಯನಿರ್ವಹಿಸಿದ್ದರು. ತಂಡದಲ್ಲಿ ಸಿಬ್ಬಂದಿಗಳಾದ ರಾಜು ಕೆ.ಆರ್. (ಸಿಪಿಸಿ), ಚಂದ್ರನಾಯ್ಕ ಬಿ. (ಸಿಪಿಸಿ), ಮಲ್ಲಪ್ಪ ಎಸ್.ಜಿ. (ಸಿಪಿಸಿ), ಅರುಣಕುಮಾರ್ ಎನ್.ಕೆ. (ಸಿಪಿಸಿ) ಹಾಗೂ ಮನುಶಂಕರ್ (ಸಿಪಿಸಿ) ಇತರ ಸಿಬ್ಬಂದಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















