ಕಲ್ಪ ಮೀಡಿಯಾ ಹೌಸ್ | ಮೈಸೂರು |
ನಗರದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಶ್ರೀ ವೆಂಕಟಾಚಲಧಾಮದ 15ನೇ ಸಂವತ್ಸರೋತ್ಸವ (ವಾರ್ಷಿಕೋತ್ಸವ) ಜೂನ್ 5 ರಂದು ನೆರವೇರಲಿದೆ.
ಈ ಸಂದರ್ಭ ಉಡುಪಿ ಭಂಡಾರಕೇರಿ ಮಠದ #BhandarakeriMatha ಪೀಠಾಧಿಪತಿ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.
ಬೆಳಗ್ಗೆ 7ಕ್ಕೆ ಪಂಚಾಶತ್ ಕಲಶಾರಾಧನೆ, ಬೆಳಗ್ಗೆ 10ಕ್ಕೆ ವೆಂಕಟೇಶ ದೇವರ ಮೂಲ ಮೂರ್ತಿಗೆ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿಯವರಿಂದ ಬ್ರಹ್ಮ ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ರಾಯರ ವೃಂದಾವನಕ್ಕೆ ವಿಶೇಷ ಅಲಂಕಾರ, ವೆಂಕಟೇಶ ದೇವರಿಗೆ ಚಿನ್ನದ ಕಿರೀಟ ಸಹಿತ ಅಲಂಕಾರ, ಸಂಸ್ಥಾನ ಪೂಜೆ, ಮಹಾ ಮಂಗಳಾರತಿ ನೆರವೇರಲಿದೆ. ಸಂಜೆ 7ಕ್ಕೆ ರಂಗಪೂಜೆ ಮತ್ತು ರಥೋತ್ಸವ ಸಂಪನ್ನಗೊಳ್ಳಲಿದೆ.
Also Read>> ಬೀದಿ ದೀಪಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ | ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ಶಾಸಕ ಚನ್ನಬಸಪ್ಪ ಎಚ್ಚರಿಕೆ
ಪದ್ಮ ಪುರಾಣೋಕ್ತವಾಗಿ ಕೆತ್ತನೆಗೊಂಡ ಕಲ್ಯಾಣಕಾರಕ ಶ್ರೀ ವೆಂಕಟೇಶನ ಸನ್ನಿಧಾನ, ಕಲಿಯುಗದ ಕಾಮಧೇನುವಾದ ಶ್ರೀ ಗುರು ರಾಘವೇಂದ್ರರ ವೃಂದಾವನ ಕ್ಷೇತ್ರಗಳ ಸಂಗಮ ಶ್ರೀ ವೆಂಕಟಾಚಲಧಾಮದಲ್ಲಿದೆ. ದೇವ-ಗುರು ವೃಂದಾವನ ಸನ್ನಿಧಿಯು ಭಾಗವತ ಆಶ್ರಮವೆಂದೇ ಖ್ಯಾತವಾಗಿದೆ. ವಾರ್ಷಿಕೋತ್ಸವದಲ್ಲಿ ಭಕ್ತರು ಭಾಗವಹಿಸಲು ಶ್ರೀಮಠ ವಿನಂತಿಸಿದೆ.
2011ರ ಮೇ 24 ರಂದು ಪೇಜಾವರ ಶ್ರೀ ವಿಶ್ವೇಶ ತೀರ್ಥರು ಮತ್ತು ಶ್ರೀ ವಿಶ್ವ ಪ್ರಸನ್ನ ತೀರ್ಥರು ಭಾಗವತಾಶ್ರಮದ ನೂತನ ಕಟ್ಟಡ ‘ಶ್ರೀವೆಂಕಟಾಚಲ ಧಾಮ’ವನ್ನು ಲೋಕಾರ್ಪಣೆಗೊಳಿಸಿದ್ದರು. ಧಾಮದಲ್ಲಿ ಪ್ರತಿನಿತ್ಯ ವೆಂಕಟೇಶ ದೇವರಿಗೆ, ರಾಯರ ವೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ ಸೇವೆ, ತಂತ್ರಸಾರೋಕ್ತ ಪೂಜೆ, ಮಹಾ ನೈವೇದ್ಯವಾಗುತ್ತದೆ.
ಪ್ರತಿ ಗುರುವಾರ ಸಂಜೆ ರಥೋತ್ಸವ, ದೀಪೋತ್ಸವ, ರಂಗಪೂಜೆ ವಿಜೃಂಭಿಸುತ್ತದೆ. ವಿವಾಹ, ಸಂತಾನ, ವಿದ್ಯಾಪ್ರಾಪ್ತಿ, ಉದ್ಯೋಗ, ಇತ್ಯಾದಿಗೆ ಭಕ್ತರು ವೆಂಕಟೇಶನಲ್ಲಿ ಮೊರೆ ಇಡುತ್ತಾರೆ. ಇಷ್ಟಾರ್ಥ ನೆರವೇರಿದನಂತರ ಅಭಿಷೇಕ, ಪುಷ್ಪಾಲಂಕಾರ ಮತ್ತು ಕಲ್ಯಾಣೋತ್ಸವ ಸೇವೆ ಸಮರ್ಪಿಸುತ್ತಾರೆ.
ವಿದ್ವಾಂಸರಿಗೆ ಪ್ರಶಸ್ತಿ
ಶ್ರೀ ಭಂಡಾರಕೇರಿ ಮಠವು ಭಾರತೀಯ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯ ರಕ್ಷಣೆಗೆ ಪೂರಕ ಚಟುವಟಿಕೆಗಳನ್ನು ಮಾಡುತ್ತಿದೆ. ಪ್ರತಿ ವರ್ಷವೂ ಶ್ರೀ ವಿದ್ಯಾಮಾನ್ಯತೀರ್ಥರ ಆರಾಧನೆ ಸಂದರ್ಭ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.
Also Read>> ನೂತನ ಸಂಪಟಕ್ಕೆ13 ಜನ ಸೇರ್ಪಡೆ | ಉಪಮುಖ್ಯಮಂತ್ರಿಯಾಗಿ ಪರಮೇಶ್ವರ್ ಪ್ರಮಾಣ ವಚನ ಸ್ವೀಕಾರ
ವೇದ ವಿದ್ಯೆ ಪೋಷಣೆ ಮಾಡುವ ದೇಶದ ಒಂದು ಸಂಸ್ಥೆಗೆ ಮತ್ತು ನಾಲ್ವರು ಶಾಸ್ತ್ರಾಧ್ಯಯನ ವಿದ್ವಾಂಸರಿಗೆ 1 ಲಕ್ಷ ರೂ. ನಗದು ಪುರಸ್ಕಾರ ಸಹಿತ ವಿದ್ವತ್ ಸನ್ಮಾನ ಮಾಡಲಾಗುತ್ತಿದೆ. ಪ್ರತಿ ವರ್ಷವೂ ಕನ್ನಡದಲ್ಲಿ ಗ್ರಂಥ ಪ್ರಕಟಣೆಗೆ ಆದ್ಯತೆ ನೀಡಲಾಗಿದೆ.
ಪಾಠ- ಪ್ರವಚನ ಇತ್ಯಾದಿ ಜ್ಞಾನ ಯಜ್ಞವನ್ನು ನಿರಂತರವಾಗಿ ಮಾಡುತ್ತಿದೆ ಎಂದು ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
ಯಶ್ ಫ್ಯಾನ್ಸ್ ಅಸೋಸಿಯೆಷನ್ ಅಧ್ಯಕ್ಷ ಸುನಿಲ್ ಆರೋಗ್ಯ ವಿಚಾರಿಸಿದ ರಾಕಿಂಗ್ ಸ್ಟಾರ್




















