ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೇಂದ್ರ ಸಬಲೀಕರಣ ಸಮಿತಿ (CEC) ಸದಸ್ಯರಾದ ಸುನಿಲ್ ಲಮಾಯ್ ಅವರನ್ನು ಇಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗ ಹಾಗೂ ‘ಪರಿಸರಕ್ಕಾಗಿ ನಾವು’ ಸಂಘಟನೆಗಳ ಪ್ರತಿನಿಧಿಗಳು ಭೇಟಿ ಮಾಡಿ ಶರಾವತಿ ಪಂಪ್ಡ್ ಸ್ಟೋರೇಜ್ (PSP) ಯೋಜನೆ ಕುರಿತು ಚರ್ಚೆ ನಡೆಸಿದರು.
ಸಭೆಯಲ್ಲಿ ವಿವಿಧ ಪ್ರಮುಖ ವಿಚಾರಗಳು ಪ್ರಸ್ತಾಪಿಸಲಾಯಿತು:
CEC ಸದಸ್ಯರು, ಶರಾವತಿ PSP ಯೋಜನಾ Sharavathi PSP project ಪ್ರದೇಶಕ್ಕೆ ಭೇಟಿ ನೀಡಲು ಅಥವಾ ಸಭೆ ನಡೆಸಲು ಸುಪ್ರೀಂ ಕೋರ್ಟ್ Supreme Court ಯಾವುದೇ ನಿರ್ದೇಶನ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕೆ.ಎಸ್. ಈಶ್ವರಪ್ಪ K S Eshwarappa ಅವರು, ಯೋಜನೆ ವಿರುದ್ಧ ಸುಮಾರು 75 ಸಾವಿರ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿದಾಗ, CEC ಸದಸ್ಯರು ಆಷ್ಟು ಪ್ರಮಾಣದ ಆಕ್ಷೇಪಣೆಗಳು ತಮ್ಮ ಗಮನಕ್ಕೆ ಬಂದಿಲ್ಲವೆಂದು ಹೇಳಿದರು. ಈ ಬಗ್ಗೆ ಸಭೆಯಲ್ಲಿ ಉಪಸ್ಥಿತರಿದ್ದ KPC ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅವರು ಮೌನ ವಹಿಸಿದರು.
Also read: ಫಿಟ್ಸ್ ಕಾಯಿಲೆಯಿಂದ ನೊಂದ ವ್ಯಕ್ತಿ ಕೆರೆಯಲ್ಲಿ ಆತ್ಮಹತ್ಯೆ
ಕೆ.ಇ. ಕಾಂತೇಶ್ K E Kantesh ಅವರು ಯೋಜನೆಯ DPR (ವಿಸ್ತೃತ ಯೋಜನಾ ವರದಿ) ಅನ್ನು ಮಾಹಿತಿ ಹಕ್ಕಿನಡಿ ನೀಡಿಲ್ಲವೆಂದು ಆರೋಪಿಸಿದ ಹಿನ್ನೆಲೆಯಲ್ಲಿ, CEC ಸದಸ್ಯರು ಈ ವಿಷಯದಲ್ಲಿ KPC ಅಧಿಕಾರಿಗಳಿಂದ ತಪ್ಪು ನಡೆದಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರದ ಅನುಮತಿ ಪಡೆಯದೇ ಶರಾವತಿ PSP ಯೋಜನೆಗೆ ಸುಮಾರು ₹10,000 ಕೋಟಿ ಮೊತ್ತದ ಟೆಂಡರ್ ಕರೆದಿರುವ ಬಗ್ಗೆ ಈಶ್ವರಪ್ಪ ಅವರು ಉಲ್ಲೇಖಿಸಿದಾಗ, CEC ಸದಸ್ಯರು ಇದನ್ನು ಕಾನೂನು ಉಲ್ಲಂಘನೆಯಾಗಿ ಪರಿಗಣಿಸಬಹುದು ಎಂದು ಹೇಳಿದರು.
CEC ಸದಸ್ಯರು ಈ ಎಲ್ಲಾ ವಿಚಾರಗಳನ್ನು ಸಮಗ್ರವಾಗಿ ಪರಿಶೀಲಿಸಿ, ಅಗತ್ಯವಿದ್ದಲ್ಲಿ ಸುಪ್ರೀಂ ಕೋರ್ಟ್ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಶ್ರೀಕಾಂತ್, ಶೇಖರ್ ಗೌಳೆರ್, ಜನಾರ್ಧನ್ ಪೈ, ಸುಬ್ಬಣ್ಣ, ಮಹಾದೇವ ಸ್ವಾಮಿ, ಅಶೋಕ್ ಕುಮಾರ್, ವಿ. ರಾಜು, ದಿಲೀಪ್ ನಾಡಿಗ, ರವೀಂದ್ರ, ಎ.ಕೆ. ಚಂದ್ರಪ್ಪ, ಹರ್ಷ, ಪರಿಸರ ರಮೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















