ಕಲ್ಪ ಮೀಡಿಯಾ ಹೌಸ್ | ಕನಕಗಿರಿ |
ಫಿಟ್ಸ್ ಕಾಯಿಲೆಯಿಂದ ಮಾನಸಿಕವಾಗಿ ನೊಂದಿದ್ದ ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ Suicide ಮಾಡಿಕೊಂಡ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
ಪಟ್ಟಣದ 12ನೇ ವಾರ್ಡ್ ನಿವಾಸಿ ಅಮರೇಶ ಈಶಪ್ಪ ಗುಗಳಶೆಟ್ಟಿ (52) ಕಳೆದ 5–6 ವರ್ಷಗಳಿಂದ ಫಿಟ್ಸ್ ರೋಗದಿಂದ ಬಳಲುತ್ತಿದ್ದರು. ಭಾನುವಾರ ಬೆಳಿಗ್ಗೆ 8 ಗಂಟೆಯಿಂದ 11.30 ಗಂಟೆಯೊಳಗೆ ಲಕ್ಷ್ಮೀದೇವಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪತ್ನಿ ಕವಿತಾ ಅವರು ಕನಕಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Also read: ಶಿವಮೊಗ್ಗದಲ್ಲಿ ಕ್ರೀಡಾಪಟುಗಳ ಸಾಧನೆ | ದಕ್ಷಿಣ ಭಾರತ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಇಬ್ಬರಿಗೆ ಚಿನ್ನ
ಈ ಸಂಬಂಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಮುತ್ತಪ್ಪ ಎಚ್ ಅವರು ತನಿಖೆ ಕೈಗೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















