ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪುದುಚೇರಿಯಲ್ಲಿ ಮೇ 16 ಮತ್ತು 17 ರಂದು ನಡೆದ 15 ವರ್ಷದೊಳಗಿನ ದಕ್ಷಿಣ ಭಾರತ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ Wrestling Championship ಶಿವಮೊಗ್ಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕ್ರೀಡಾಶಾಲೆಯ ಇಬ್ಬರು ಕ್ರೀಡಾಪಟುಗಳು ಚಿನ್ನದ ಪದಕಗಳನ್ನು ಗೆದ್ದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಅನಿಲ್‌ಕುಮಾರ್ ಸೌಧಿ ಫ್ರೀಸ್ಟೈಲ್ 41 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡರೆ, ಮನೋಜ್ ಭಜಂತ್ರಿ ಗ್ರೀಕೋ ರೋಮನ್ 52 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
Also read: ಟಿಎಂಸಿ ಒಳಕಳಹ ತೀವ್ರ: ದೆಹಲಿಯಲ್ಲಿ ಸಂಸದರು ಗುಪ್ತ ಸಭೆ | ಸುಖೇಂದು ಶೇಖರ್ ರಾಯ್ ರಾಜೀನಾಮೆ
ಇಬ್ಬರೂ ಕ್ರೀಡಾಪಟುಗಳು ಇಲಾಖೆಯ ಕ್ರೀಡಾ ವಸತಿ ನಿಲಯದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಖ್ಯಾ ನಾಯ್ಕ್, ಕುಸ್ತಿ ತರಬೇತುದಾರರಾದ ರಾಜಪ್ಪ ಎಂ. ಫಲ್ಕೆ ಮತ್ತು ಸಂಜಯ್ ಈ. ಸೇರಿದಂತೆ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















