ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆ, ಬೆಂಗಳೂರು ವಿಭಾಗವು ತನ್ನ ಸಾಮಾಜಿಕ ಕಲ್ಯಾಣ ಚಟುವಟಿಕೆಗಳ ಅಂಗವಾಗಿ ಇಂದು ವಿಜಯನಗರದಲ್ಲಿರುವ ‘ಲವಲವಿಕೆ ವೃದ್ಧಾಶ್ರಮ’ಕ್ಕೆ ಭೇಟಿ ನೀಡಿ ದಿನಸಿ ಸಾಮಗ್ರಿಗಳು ಹಾಗೂ ವೈದ್ಯಕೀಯ ಬಳಕೆಯ ವಸ್ತುಗಳನ್ನು ವಿತರಿಸಿದೆ.
ಸಂಸ್ಥೆಯ ಅಧ್ಯಕ್ಷೆ ರೀನಾ ಸಿಂಗ್ ಅವರ ನೇತೃತ್ವದಲ್ಲಿ ಉಪಾಧ್ಯಕ್ಷರುಗಳಾದ ಅಮಿತಾ ಮೋಹನ್ ಪುರಿಯಾ, ಜಯಶ್ರೀ ಕಾತರಕಿ, ಕಾರ್ಯದರ್ಶಿ ಸ್ವಾತಿ ಪ್ರಿಯಾ, ಖಜಾಂಚಿ ಭಾಗ್ಯಶ್ರೀ ಹಾಗೂ ಇತರ ಕಾರ್ಯಕಾರಿ ಸದಸ್ಯರು ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿ ವಾಸಿಸುತ್ತಿರುವ ಹಿರಿಯ ನಾಗರಿಕರೊಂದಿಗೆ ಸಂವಾದ ನಡೆಸಿ ಸಮಯ ಕಳೆದರು.
Also Read>> ಯೋಗದ ಮೂಲಕ ಇತಿಹಾಸ ನಿರ್ಮಿಸಲು ಜಾಗತಿಕ ಆಹ್ವಾನ | ಆನ್’ಲೈನ್ ಮೂಲಕ ನೀವೂ ಪಾಲ್ಗೊಳ್ಳ
ಈ ಸಂದರ್ಭದಲ್ಲಿ ವೃದ್ಧಾಶ್ರಮದ ನಿವಾಸಿಗಳ ಅಗತ್ಯಗಳನ್ನು ಮನಗಂಡು ₹75,000 ಮೌಲ್ಯದ ದಿನಸಿ ಸಾಮಗ್ರಿಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಸಂಸ್ಥೆ ಕೊಡುಗೆಯಾಗಿ ನೀಡಿತು.
ಈ ಕಾರ್ಯಕ್ರಮವು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಮತ್ತು ಸಾಮಾಜಿಕ ಸೇವೆಯತ್ತ ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಯ ಬದ್ಧತೆಯನ್ನು ಪ್ರತಿಬಿಂಬಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















