ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಕುವೆಂಪು ರಸ್ತೆಯ ನಂಬಾಳ್ ಏಟ್ರಿಯಂನಲ್ಲಿ ಕಾರ್ಯನಿರ್ವಹಿಸುತ್ತಿರುವ ನಾರಾಯಣ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್ ತನ್ನ ಸೇವೆಗಳನ್ನು ವಿಸ್ತರಿಸಿದೆ. ಇದುವರೆಗೆ ನೆಲ ಮಹಡಿಯಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದ ಕ್ಲಿನಿಕ್, ಇನ್ನು ಮುಂದೆ ಮೊದಲ ಮಹಡಿಯಲ್ಲಿಯೂ ಸೇವೆ ನೀಡಲಿದೆ.
ಈ ನೂತನ ಸೇವೆಗಳನ್ನು ಜೂನ್ 15 ರಂದು ಬೆಳಿಗ್ಗೆ 9 ಗಂಟೆಗೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಲಿದ್ದಾರೆ.
Also Read>> ಹಿರಿಯರ ಮಾರ್ಗದರ್ಶನದಿಂದಲೇ ಸುಸಂಸ್ಕೃತ ಸಮಾಜ ನಿರ್ಮಾಣ | ಸತ್ಯಾತ್ಮ ತೀರ್ಥಶ್ರೀ
ನಾರಾಯಣ ಹೆಲ್ತ್ ನ ಕರ್ನಾಟಕ ಕ್ಲಸ್ಟರ್ ಹಾಗೂ ಕಾರ್ಪೊರೇಟ್ ಗ್ರೋಥ್ ಇನಿಶಿಟಿವ್ ನ ನಿರ್ದೇಶಕರಾದ ಡಾ. ವಿಜಯ ಸಿಂಗ್, ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಲಿಟಿ ಆಸ್ಪತ್ರೆ ಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಉತ್ತಮ ಶರ್ಮ ಅವರು ಉಪಸ್ಥಿತರಿರುವರು.
ವಿಸ್ತರಿತ ಸೇವೆಗಳ ಭಾಗವಾಗಿ ಮೆಡಿಕಲ್ ಆಂಕೋಲಜಿ ವಿಭಾಗದಲ್ಲಿ ಕೀಮೋಥೆರಪಿ ಹಾಗೂ ಗ್ಯಾಸ್ಟ್ರೋಎಂಟರಾಲಜಿ ವಿಭಾಗದಲ್ಲಿ ಎಂಡೋಸ್ಕೋಪಿ ಸೌಲಭ್ಯಗಳು ಲಭ್ಯವಾಗಲಿವೆ.
Also Read>> ಪೊಲೀಸರ ಕಠಿಣ ಕ್ರಮ | ಶಿವಮೊಗ್ಗದಲ್ಲಿ ರೌಡಿಶೀಟರ್ ಕಾಲಿಗೆ ಗುಂಡೇಟು
ಇದಲ್ಲದೆ ಹೃದ್ರೋಗ, ಸ್ತ್ರೀರೋಗ ಮತ್ತು ಪ್ರಸೂತಿ, ನರರೋಗ, ಸಾಮಾನ್ಯ ವೈದ್ಯಕೀಯ ಹಾಗೂ ಇತರೆ ವಿಶೇಷ ವಿಭಾಗಗಳ ತಜ್ಞ ವೈದ್ಯರು ಸಮಾಲೋಚನೆಗಾಗಿ ಲಭ್ಯವಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕ: 9916953533
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















