ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ತಾಲೂಕಿನ ನೆಲವಾಗಿಲು ಕ್ರಾಸ್ ಸಮೀಪ ಟೆಂಪೋ ಟ್ರಾವೆಲರ್ (ಟಿಟಿ) ವಾಹನ ಪಲ್ಟಿಯಾಗಿ ಹಲವರಿಗೆ ಗಾಯಗಳಾದ ಘಟನೆ ನಡೆದಿದೆ.
ಆಷಾಢ ಮಾಸದ ಅಂಗವಾಗಿ ಹುಚ್ಚರಾಯ ಸ್ವಾಮಿ ದೇವರ ದರ್ಶನಕ್ಕಾಗಿ ಹಾವೇರಿ ಜಿಲ್ಲೆಯ ಹರಳಹಳ್ಳಿ ನಿವಾಸಿಗಳು ಟಿಟಿ ವಾಹನವನ್ನು ಬಾಡಿಗೆಗೆ ಪಡೆದು ಶಿಕಾರಿಪುರಕ್ಕೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಟಿಟಿ ಚಾಲಕ ನಾಗರಾಜ ಬಾರಕಿ ಅತಿವೇಗದಲ್ಲಿ ವಾಹನ ಚಲಾಯಿಸುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಕಾರನ್ನು ತಪ್ಪಿಸಲು ಯತ್ನಿಸಿದ ಸಂದರ್ಭದಲ್ಲಿ ವಾಹನ ಸ್ಕಿಡ್ ಆಗಿ ರಸ್ತೆಗೆ ಪಲ್ಟಿಯಾಗಿದೆ.
ಅಪಘಾತದಲ್ಲಿ ಪಾರವ್ವ, ಪುಷ್ಪ ಹಾಗೂ ಮಲ್ಲೇಶಪ್ಪ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Also read: ಜೂನ್ 22ರವರೆಗೆ ಭಾರತದಲ್ಲಿ ಟೆಲಿಗ್ರಾಂ ನಿರ್ಬಂಧ | ಕಾರಣವೇನು?
ಇನ್ನೂ ಲಲಿತಾ, ಅವರ ಪತಿ ಶಿವಪ್ಪ, ಮಗ ಸಂದೀಪ್, ರತ್ನಮ್ಮ, ಹೊನ್ನಮ್ಮ, ಮಂಜುನಾಥ್ ಗೌಡ ಹಾಗೂ ಮಲ್ಲನಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, 108 ಆಂಬುಲೆನ್ಸ್ ಮೂಲಕ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಈ ಕುರಿತು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















