ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವರ್ಡ್ ಬ್ಲಡ್ ಡೋನರ್ ಡೇ ಪ್ರಯುಕ್ತ ಜೆಸಿಐ ಶಿವಮೊಗ್ಗ ರಾಯಲ್ಸ್ ಘಟಕದ ವತಿಯಿಂದ ಸಂಜೀವಿನಿ ಬ್ಲಡ್ ಬ್ಯಾಂಕ್‍ನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದಂತ ಗಾನವಿ ಸುದರ್ಶನ್‍ರವರು ರಕ್ತದಾನವು ಜೀವ ಉಳಿಸುವ ಮಹಾದಾನವಾಗಿದೆ. ಒಬ್ಬ ವ್ಯಕ್ತಿಯ ರಕ್ತದಾನದಿಂದ ಹಲವಾರು ರೋಗಿಗಳ ಜೀವವನ್ನು ಉಳಿಸಬಹುದು. ಅಪಘಾತಗಳು, ಶಸ್ತ್ರಚಿಕಿತ್ಸೆಗಳು, ಪ್ರಸವ ಸಮಯದ ತುರ್ತು ಪರಿಸ್ಥಿತಿಗಳು ಹಾಗೂ ರಕ್ತದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ರಕ್ತದ ಅವಶ್ಯಕತೆ ಇರುತ್ತದೆ.

Also read: ಸಹಶಿಕ್ಷಕರು, ಅಡುಗೆ ಕೆಲಸದವರೊಂದಿಗೆ ಜಗಳ | ಮುಖ್ಯ ಶಿಕ್ಷಕ ಆತ್ಮಹತ್ಯೆ
ಆರೋಗ್ಯವಂತ ವ್ಯಕ್ತಿಯು ನಿಯಮಿತವಾಗಿ ರಕ್ತದಾನ ಮಾಡಬಹುದು. ರಕ್ತದಾನವು ದಾನಿಯ ಆರೋಗ್ಯಕ್ಕೆ ಯಾವುದೇ ಹಾನಿ ಉಂಟುಮಾಡುವುದಿಲ್ಲ. ಬದಲಾಗಿ, ಹೊಸ ರಕ್ತಕಣಗಳ ಉತ್ಪತ್ತಿಗೆ ಸಹಾಯ ಮಾಡುತ್ತದೆ. ರಕ್ತದಾನ ಮಾಡಿ ಸಮಾಜದ ಸೇವೆಯಲ್ಲಿ ಭಾಗಿಯಾಗಬೇಕು ತಿಳಿಸಿದರು. ಘಟಕದ ಸದಸ್ಯರು ರಕ್ತದಾನ ಮಾಡಿ ಸಾಮಾಜಿಕ ಜವಾಬ್ದಾರಿಯನ್ನು ಮೆರೆದರು.
ಕಾರ್ಯಕ್ರಮದಲ್ಲಿ ಸ್ಮಿತಾ ಮೋಹನ್, ಶಿಲ್ಪ ಸತೀಶ್ ಶ್ವೇತಾ, ನೇತ್ರಾವತಿ, ಚೈತ್ರ, ಕಿರಣ್ ಇನ್ನಿತರರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















