ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಯಾವುದೇ ಕಾರಣಕ್ಕೂ ಖಾಸಗಿ ಅವರಿಗೆ ನೀಡಬಾರದು ಎಂದು ರಾಷ್ಟ್ರಭಕ್ತನ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.
ಅವರು ಇಂದು ರಾಷ್ಟ್ರಭಕ್ತರ ಬಳಗ ಅನುಮತಿ ಪಡೆದ ವಿದ್ಯುತ್ ಗುತ್ತಿದಾರರ ಸಂಘ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಪಿಂಚಣಿದಾರರ ಸಂಘ, ಜಿಲ್ಲಾ ಕೈಗಾರಿಕಾ ಸಂಘ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದರು.
Also read: ಶಾಲಾ – ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆಗಾಗಿ ಸಂಚಾರಿ ನಿಯಮ ಪಾಲಿಸಿ: ಪೊಲೀಸ್ ಉಪಾಧೀಕ್ಷಕ ಸಂಜೀವ್ ಕುಮಾರ್
ವಿದ್ಯುತ್ ಕ್ಷೇತ್ರವು ಲಾಭದಾಯಕ ವಿಭಾಗವಲ್ಲ, ಅದೊಂದು ಸೇವೆ. ಖಾಸಗೀಕರಣ ಮಾಡುವ ಹಿನ್ನೆಲೆಯಲ್ಲಿ ಕೆಲವರ ಹಿತಾಸಕ್ತಿಯಂತು ಇದ್ದೇ ಇದೆ. ಸಚಿವ ಕೆ.ಜೆ.ಜಾರ್ಜ್ ಅವರಿಗೂ ದಿ ಟಾಟಾ ಪವರ್ ಕಂಪನಿಗೂ ಯಾವ ಸಂಬಂಧವಿದೆ ಎಂದು ಬಹಿರಂಗಗೊಳ್ಳಬೇಕು ಎಂದು ಅವರು ವಿದ್ಯುತ್ ಕ್ಷೇತ್ರಕ್ಕೆ ಖಾಸಗಿಯವರು ಬಂದರೆ ಸರ್ಕಾರದ ಜುಟ್ಟೆ ಅವರ ಕೈಯಲ್ಲಿರುತ್ತದೆ. ಸರ್ಕಾರವನ್ನೇ ಖಾಸಗಿ ಅವರಿಗೆ ಗುತ್ತಿಗೆ ಇಡಲು ರಾಜ್ಯ ಸರ್ಕಾರ ಹೊರಟಿದೆ. ಖಾಸಗೀಕರಣಗೊಂಡರೆ ಸರ್ಕಾರ ನಿಯಂತ್ರಣ ತಪ್ಪಿ ಮನ ಬಂದಂತೆ ವಿದ್ಯುತ್ ದರ ಹೆಚ್ಚಾಗಿ ಬಡ ಮತ್ತು ಮಧ್ಯಮ ವರ್ಗದವರಿಗೆ ಆರ್ಥಿಕ ಹೊರೆಯಾಗುತ್ತದೆ. ಆದರಿಂದ ಈ ಯೋಚನೆಯನ್ನೇ ಸರ್ಕಾರ ಕೈಬಿಡಬೇಕು ಎಂದರು.
ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ವಿಶ್ವೇಶ್ವರಯ್ಯ ಮಾತನಾಡಿ, ಖಾಸಗಿ ಕಂಪನಿಗಳು ಲಾಭಕ್ಕಾಗಿ ಗಮನ ಕೊಡುತ್ತವೆ. ಕಲ್ಯಾಣ ಕಾರ್ಯಕ್ರಮಗಳು ಮತ್ತೇ ಹಿಂದೆ ಉಳಿಯುತ್ತವೆ. ವಿಶೇಷವಾಗಿ ಸಣ್ಣ ಕೈಗಾರಿಕೆಗಳಿಗೆ ಆತಂಕ ಉಂಟಾಗುತ್ತದೆ. ಆದರಿಂದ ಯಾವುದೇ ಕಾರಣಕ್ಕೂ ಖಾಸಗೀಕರಣವಾಗಬಾರದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಇ.ವಿಶ್ವಾಸ್, ಶ್ರೀಧರ್, ಮೋಹನ್ ಕುಮಾರ್, ಕುಬೇರಪ್ಪ, ಶ್ರೀಧರ್ ವಾಸ್ತವ್, ಕುಮಾರ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


Comments 1