ಕಲ್ಪ ಮೀಡಿಯಾ ಹೌಸ್ | ಮೈಸೂರು |
ಹಿಂದಿನ ಪ್ರಕಟಣೆಗಳಿಗೆ ಸಂಬಂಧಿಸಿದಂತೆ, ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ರೈಲ್ವೆ ಮಂಡಳಿಯು ರೈಲು ಸಂಖ್ಯೆ 06281/06282 ಮೈಸೂರು – ಮದಾರ್ ಜಂಕ್ಷನ್ – ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಸೇವೆಯನ್ನು ಮುಂದುವರಿಸಲು ಅನುಮೋದಿಸಿದೆ. ಈ ರೈಲುಗಳು ಈಗಿರುವ ಸಮಯ, ನಿಲ್ದಾಣಗಳು, ದರ ವ್ಯವಸ್ಥೆ ಹಾಗೂ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲದೆ ಮುಂದುವರಿಯಲಿವೆ.
ರೈಲು ಸಂಖ್ಯೆ 06281 ಮೈಸೂರು – ಮದಾರ್ ಜಂಕ್ಷನ್ ಎಕ್ಸ್‌ಪ್ರೆಸ್ ವಿಶೇಷ ರೈಲು, ಇದು ಪ್ರಸ್ತುತ 27.06.2026ರವರೆಗೆ ಅಧಿಸೂಚಿತವಾಗಿದ್ದು, ಇದೀಗ 04.07.2026 ಮತ್ತು 11.07.2026 (ಶನಿವಾರ) ರಂದು ವಿಸ್ತರಿಸಲಾಗಿದ್ದು, ಒಟ್ಟು 2 ಹೆಚ್ಚುವರಿ ಟ್ರಿಪ್ ಸಂಚರಿಸಲಿದೆ.

Also read: ವಿದ್ಯುತ್ ವಿತರಣಾ ವ್ಯವಸ್ಥೆ ಖಾಸಗೀಕರಣ ನಿರ್ಧಾರ ಕೈಬಿಡಿ: ಮಾಜಿ ಡಿಸಿಎಂ ಈಶ್ವರಪ್ಪ
ರೈಲು ಸಂಖ್ಯೆ 06282 ಮದಾರ್ ಜಂಕ್ಷನ್ – ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲು, ಇದು 29.06.2026ರವರೆಗೆ ಅಧಿಸೂಚಿತವಾಗಿದ್ದು, ಇದೀಗ 06.07.2026 ಮತ್ತು 13.07.2026 (ಸೋಮವಾರ) ರಂದು ವಿಸ್ತರಿಸಲಾಗಿದ್ದು, ಒಟ್ಟು 2 ಹೆಚ್ಚುವರಿ ಟ್ರಿಪ್ ಸಂಚರಿಸಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















