ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶ್ರೀಮಧ್ವಾಚಾರ್ಯರ ದ್ವೈತ ಸಿದ್ಧಾಂತವನ್ನು ಜನಸಾಮಾನ್ಯರಲ್ಲಿ ಪ್ರಸಾರಗೊಳಿಸಿ ಹರಿದಾಸ ಸಾಹಿತ್ಯ ಮತ್ತು ಭಕ್ತಿ ಪರಂಪರೆಗೆ ಅಪಾರ ಕೊಡುಗೆ ನೀಡಿದ ಮಹಾನ್ ಸಂತ ಶ್ರೀ ಶ್ರೀಪಾದರಾಜರ ಮಧ್ಯಾರಾಧನಾ ಮಹೋತ್ಸವವು ಜೂನ್ 28, 2026ರ ಭಾನುವಾರ ಬೆಂಗಳೂರು ಹೊರವಲಯದ ಯಲಹಂಕ ತಾಲೂಕಿನ ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಕಾಕೋಳಿನ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ನಡೆಯಲಿದೆ.
ಪಂಕಜಾ ಹಾಗೂ ಕೀರ್ತಿಶೇಷ ಹೊಳವನಹಳ್ಳಿ ನಾಗರಾಜಮೂರ್ತಿ ಮತ್ತು ಕುಟುಂಬದವರು ಪ್ರಧಾನ ಸೇವಾಕರ್ತರಾಗಿ, ಪಾಂಚಜನ್ಯ ಪ್ರತಿಷ್ಠಾನದ ಸಹಯೋಗದಲ್ಲಿ ಮಹೋತ್ಸವವನ್ನು ಆಯೋಜಿಸಲಾಗಿದೆ.
ಶ್ರೀಪಾದರಾಜ ಪ್ರತಿಷ್ಠಿತ ಬೃಂದಾವನಾಂತರ್ಗತ ಚತುರ್ಭುಜ ವೇಣುಗೋಪಾಲಕೃಷ್ಣ ಹಾಗೂ ಶ್ರೀ ವ್ಯಾಸರಾಜ ಪ್ರತಿಷ್ಠಾಪಿತ ಕಂಬದ ಆಂಜನೇಯ ಸನ್ನಿಧಿಯಲ್ಲಿ ಬೆಳಿಗ್ಗೆ 8.30 ಗಂಟೆಗೆ ಪಂಚಾಮೃತ ಅಭಿಷೇಕ, 9.00 ಗಂಟೆಗೆ ವೇದ ನಾಡಗೌಡ ನೇತೃತ್ವದ ವಿಜಯನಗರದ “ಧೀಮಹಿ ಭಜನಾ ಮಂಡಳಿ”ಯಿಂದ ಭಕ್ತಿಗಾಯನ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 10.00 ಗಂಟೆಗೆ “ಶ್ರೀಪಾದರಾಜರ ಮಹಿಮೆ” ವಿಷಯದ ಕುರಿತು ಪಂಡಿತ ಕಲ್ಲಾಪುರ ಪವಮಾನಾಚಾರ್ಯ ಹಾಗೂ ಪಂಡಿತ ಆಯನೂರು ಮಧುಸೂದನಾಚಾರ್ಯರು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಬೆಳಿಗ್ಗೆ 11.30 ಗಂಟೆಗೆ ಖ್ಯಾತ ಗಾಯಕಿ ಶ್ರೀಮತಿ ವಿದ್ಯಾ ದೇಶಪಾಂಡೆ ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದ್ದು, ತಬಲಾದಲ್ಲಿ ಶ್ರೀ ಗೋಪಾಲ ಗುಡಿಬಂಡೆ ಹಾಗೂ ಹಾರ್ಮೋನಿಯಂನಲ್ಲಿ ಶ್ರೀ ಶ್ರೀಪಾದ ದಾಸ್ ಸಹಕರಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









