ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೋಟರಿ ಇಂಟರ್‍ನ್ಯಾಷನಲ್‍ನ 2026-27ನೇ ಸಾಲಿನ ಕ್ರಿಯೇಟಿಂಗ್ ಲಾಸ್ಟಿಂಗ್ ಇಂಫ್ಯಾಕ್ಟ್ ಎಂಬ ಧ್ಯೇಯದ ಅಂಗವಾಗಿ, ರೋಟರಿ ಕ್ಲಬ್ ಶಿವಮೊಗ್ಗವು ತನ್ನ ಸಾಪ್ತಾಹಿಕ ಸಭೆಗೆ ಶ್ರೀ ಸೋಂದಾ ವಾದಿರಾಜ ಮಠದ ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದೆ.
ಈ ವಿಶೇಷ ಕಾರ್ಯಕ್ರಮವು 2026ರ ಜುಲೈ 8ರಂದು (ಬುಧವಾರ) ರೋಟರಿ ಯೂತ್ ಸೆಂಟರ್, ಸವಳಂಗ ರಸ್ತೆ, ಶಿವಮೊಗ್ಗದಲ್ಲಿ ನಡೆಯಲಿದೆ. ಸಂಜೆ 6.30ರಿಂದ 7.00ರವರೆಗೆ ಸ್ನೇಹಮಿಲನ (ಈeಟಟoತಿshiಠಿ) ಹಾಗೂ 7.00 ಗಂಟೆಗೆ ಸಾಪ್ತಾಹಿಕ ಸಭೆ ಆರಂಭವಾಗಲಿದೆ.
ಪರಮಪೂಜ್ಯ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ಜಗದ್ಗುರು ಶ್ರೀಮಧ್ವಾಚಾರ್ಯರು ಸ್ಥಾಪಿಸಿದ ಅಷ್ಟಮಠಗಳಲ್ಲಿ ಒಂದಾದ ಶ್ರೀ ಸೋಂದಾ ವಾದಿರಾಜ ಮಠದ ಪ್ರಸ್ತುತ ಪೀಠಾಧಿಪತಿಗಳಾಗಿದ್ದಾರೆ. ಶ್ರೀ ವಾದಿರಾಜ ತೀರ್ಥರ ಮಹಾನ್ ಆಧ್ಯಾತ್ಮಿಕ ಪರಂಪರೆಯನ್ನು ಮುಂದುವರಿಸುತ್ತಿರುವ ಅವರು, ಧರ್ಮ, ಸಂಸ್ಕೃತಿ, ವೇದ ಶಿಕ್ಷಣ, ನೈತಿಕ ಮೌಲ್ಯಗಳು, ಯುವಜನರ ವ್ಯಕ್ತಿತ್ವ ವಿಕಾಸ ಮತ್ತು ಸಮಾಜಸೇವೆ ಕುರಿತ ತಮ್ಮ ಪ್ರೇರಣಾದಾಯಕ ಸಂದೇಶಗಳಿಂದ ಸಾವಿರಾರು ಭಕ್ತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
Also read: ಶಿವಮೊಗ್ಗ: ಜ್ಯೋತಿನಗರ ಬಡಾವಣೆಗೆ ಶಾಸಕರ ಭೇಟಿ: ರಸ್ತೆ, ಪಾರ್ಕ್ ಅಭಿವೃದ್ಧಿಗೆ ಆದೇಶ
ಈ ಸಂದರ್ಭದಲ್ಲಿ ಪರಮಪೂಜ್ಯರು “ಧರ್ಮ, ಮೌಲ್ಯಾಧಾರಿತ ಜೀವನ ಮತ್ತು ಸಮಾಜ ಸೇವೆಯ ಮಹತ್ವ” ಕುರಿತು ಆಶೀರ್ವಚನ ಹಾಗೂ ಉಪನ್ಯಾಸ ನೀಡಲಿದ್ದಾರೆ.
ರೋಟರಿ ಕ್ಲಬ್ ಶಿವಮೊಗ್ಗದ ಅಧ್ಯಕ್ಷರಾದ ರೋಟೇರಿಯನ್ ಎನ್. ಗೋಪಿನಾಥ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ರೋಟರಿ ಸದಸ್ಯರು, ಇನ್ನರ್ ವೀಲ್ ಸದಸ್ಯೆಯರು, ರೋಟರಾಕ್ಟ್, ಇಂಟರಾಕ್ಟ್ ಸದಸ್ಯರು ಹಾಗೂ ಆಹ್ವಾನಿತ ಗಣ್ಯರು ಭಾಗವಹಿಸಲಿದ್ದಾರೆ.
ಎಲ್ಲಾ ರೋಟರಿ ಸದಸ್ಯರು ಹಾಗೂ ಆಹ್ವಾನಿತ ಅತಿಥಿಗಳು ಈ ಅಪೂರ್ವ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಮಪೂಜ್ಯರ ಆಶೀರ್ವಾದ ಪಡೆಯುವಂತೆ ರೋಟರಿ ಕ್ಲಬ್ ಶಿವಮೊಗ್ಗ ಮನವಿ ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







