ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಸ್ವಾಚನ್ ಸೆಂಟರ್ ಫಾರ್ ಇಂಟೆಲಿಜೆಂಟ್ ಟ್ರೈನಿಂಗ್, ಅವೇರ್ನೆಸ್ ಅಂಡ್ ರಿಸರ್ಚ್(ಸಿಟಾರ್) ಸಂಸ್ಥೆಯು ದೇಶದ ಅತ್ಯಂತ ಪ್ರತಿಷ್ಠಿತ ಕಾನೂನು ಪ್ರವೇಶ ಪರೀಕ್ಷೆಗಳ ತರಬೇತಿ ಕಾರ್ಯಕ್ರಮಕ್ಕೆ ಅತ್ಯಂತ ಪ್ರತಿಭಾವಂತ ಆಕಾಂಕ್ಷಿಗಳನ್ನು ಆಯ್ಕೆ ಮಾಡಲು ಜು.12 ರಂದು ಡಿವಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಮಹತ್ವದ “ಲಾ ಎಂಟ್ರೆನ್ಸ್ ಸ್ಕ್ರೀನಿಂಗ್ ಟೆಸ್ಟ್” ಅನ್ನು ಆಯೋಜಿಸಿದೆ ಎಂದು ಸಿಟಾರ್‍ನ ತರಬೇತುದಾರರಾದ ಸಾದ್ವಿ ಶ್ರೀಕಾಂತ್ ತಿಳಿಸಿದರು
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಓದುತ್ತಿರುವ ಪ್ರಥಮ ಮತ್ತು ದ್ವಿತೀಯ ವಿದ್ಯಾರ್ಥಿಗಳು ಯಾವುದೆ ವಿಭಾಗದಲ್ಲೂ ಅರ್ಜಿ ಸಲ್ಲಿಸಬಹುದು. ಭವಿಷ್ಯದಲ್ಲಿ ಕಾನೂನು ಪ್ರವೇಶ ಪರೀಕ್ಷೆ ಬರೆಯಲು ಬಯಸುವ ಇತರೆ ಎಲ್ಲಾ ಆಸಕ್ತಿ ವಿದ್ಯಾರ್ಥಿಗಳ ಸಹ ಭಾಗವಹಿಸಬಹುದು ಎಂದರು.
ಸ್ಕ್ರೀನಿಂಗ್ ಪರೀಕ್ಷೆಗೆ ಡಿವಿಎಸ್‍ನಲ್ಲಿ ಪರೀಕ್ಷಾ ಕೇಂದ್ರ ನಿಗದಿ ಪಡಿಸಿದ್ದು, ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಅಂದು ಬೆಳಿಗ್ಗೆ 10 ಗಂಟೆಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದು ವರದಿ ಮಾಡಿಕೊಳ್ಳಬೇಕು. ಪರೀಕ್ಷೆಯು 10.30ಕ್ಕೆ ಆರಂಭವಾಗಲಿದ್ದು, 1 ಗಂಟೆಗೆ ಅವಧಿಯ ಪರೀಕ್ಷೆ ಇದಾಗಿದೆ. ಪರೀಕ್ಷೆ ಸಂಪೂರ್ಣವಾಗಿ ಆಫ್‍ಲೈನ್ ಮಾದರಿಯಲ್ಲಿ ನಡೆಯಲಿದೆ. ಅಭ್ಯರ್ಥಿಗಳು ಪರೀಕ್ಷೆ ಹಾಜರಾಗುವಾಗ ತಮ್ಮ ಕಾಲೇಜಿನ ಗುರುತಿನ ಚೀಟಿ ಹಾಗೂ ಲೇಖನ ಸಾಮಾಗ್ರಿಗಳನ್ನು ತರುವುದು ಕಡ್ಡಾಯವಾಗಿದೆ ಎಂದರು.
Also read: ಸಿಎಂಎ ಫಲಿತಾಂಶ ಪ್ರಕಟ : ಕ್ರಿಯೇಟಿವ್ ಸಂಸ್ಥೆಯ 14 ವಿದ್ಯಾರ್ಥಿಗಳ ಸಾಧನೆ
ಪರೀಕ್ಷೆಗೆ ಹಾಜರಾಗಲು 100 ರೂ ಶುಲ್ಕ ನಿಗದಿ ಮಾಡಲಾಗಿದೆ. ಪರೀಕ್ಷೆ ಹಾಜರಾಗಲು ನೊಂದಣಿ ಕಡ್ಡಾಯವಾಗಿದೆ. ಹೆಸರು ನೊಂದಾಯಿಸಲು ಹಾಗೂ ಹೆಚ್ಚಿನ ವಿವರಗಳಿಗಾಗಿ ಮೊ.ಸಂ:7975389195 ಅಥವಾ 9739383734 ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎ.ಎಸ್.ಚಂದ್ರಕಾಂತ್ ಅಸಗೋಡು, ಸ್ವರ್ಣಲತ, ಗುಡದಪ್ಪ, ಜಿ.ವಿಜಯ್‍ಕುಮಾರ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









