ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಸ್ವಾಚನ್ ಸೆಂಟರ್ ಫಾರ್ ಇಂಟೆಲಿಜೆಂಟ್ ಟ್ರೈನಿಂಗ್, ಅವೇರ್ನೆಸ್ ಅಂಡ್ ರಿಸರ್ಚ್(ಸಿಟಾರ್) ಸಂಸ್ಥೆಯು ದೇಶದ ಅತ್ಯಂತ ಪ್ರತಿಷ್ಠಿತ ಕಾನೂನು ಪ್ರವೇಶ ಪರೀಕ್ಷೆಗಳ ತರಬೇತಿ ಕಾರ್ಯಕ್ರಮಕ್ಕೆ ಅತ್ಯಂತ ಪ್ರತಿಭಾವಂತ ಆಕಾಂಕ್ಷಿಗಳನ್ನು ಆಯ್ಕೆ ಮಾಡಲು ಜು.12 ರಂದು ಡಿವಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಮಹತ್ವದ “ಲಾ ಎಂಟ್ರೆನ್ಸ್ ಸ್ಕ್ರೀನಿಂಗ್ ಟೆಸ್ಟ್” ಅನ್ನು ಆಯೋಜಿಸಿದೆ ಎಂದು ಸಿಟಾರ್‍ನ ತರಬೇತುದಾರರಾದ ಸಾದ್ವಿ ಶ್ರೀಕಾಂತ್ ತಿಳಿಸಿದರು
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಓದುತ್ತಿರುವ ಪ್ರಥಮ ಮತ್ತು ದ್ವಿತೀಯ ವಿದ್ಯಾರ್ಥಿಗಳು ಯಾವುದೆ ವಿಭಾಗದಲ್ಲೂ ಅರ್ಜಿ ಸಲ್ಲಿಸಬಹುದು. ಭವಿಷ್ಯದಲ್ಲಿ ಕಾನೂನು ಪ್ರವೇಶ ಪರೀಕ್ಷೆ ಬರೆಯಲು ಬಯಸುವ ಇತರೆ ಎಲ್ಲಾ ಆಸಕ್ತಿ ವಿದ್ಯಾರ್ಥಿಗಳ ಸಹ ಭಾಗವಹಿಸಬಹುದು ಎಂದರು.
Also read: ಸಿಎಂಎ ಫಲಿತಾಂಶ ಪ್ರಕಟ : ಕ್ರಿಯೇಟಿವ್ ಸಂಸ್ಥೆಯ 14 ವಿದ್ಯಾರ್ಥಿಗಳ ಸಾಧನೆ
ಪರೀಕ್ಷೆಗೆ ಹಾಜರಾಗಲು 100 ರೂ ಶುಲ್ಕ ನಿಗದಿ ಮಾಡಲಾಗಿದೆ. ಪರೀಕ್ಷೆ ಹಾಜರಾಗಲು ನೊಂದಣಿ ಕಡ್ಡಾಯವಾಗಿದೆ. ಹೆಸರು ನೊಂದಾಯಿಸಲು ಹಾಗೂ ಹೆಚ್ಚಿನ ವಿವರಗಳಿಗಾಗಿ ಮೊ.ಸಂ:7975389195 ಅಥವಾ 9739383734 ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎ.ಎಸ್.ಚಂದ್ರಕಾಂತ್ ಅಸಗೋಡು, ಸ್ವರ್ಣಲತ, ಗುಡದಪ್ಪ, ಜಿ.ವಿಜಯ್‍ಕುಮಾರ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

