ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಾವು ಗಳಿಸುವ ಸಂಪತ್ತಿನ ಒಂದು ಭಾಗವನ್ನು ದಾನಕ್ಕೆ, ಕಲಿತ ವಿದ್ಯೆಯನ್ನು ಸತ್ಕಾರ್ಯಕ್ಕೆ, ಆಡುವ ಮಾತನ್ನು ಪರೋಪಕಾರ ಮತ್ತು ಸಮಾಜ ಸೇವೆಗೆ ಬಳಸಬೇಕು. ನಿಸ್ವಾರ್ಥ ಸೇವೆ, ಶುದ್ಧ ಕಾಯಕದಿಂದ ಮನುಷ್ಯ ತನ್ನ ಜೀವನದಲ್ಲಿ ಸಾರ್ಥಕತೆ ಪಡೆಯಲು ಸಾಧ್ಯ ಎಂದು ಶ್ರೀ ಸೋಂದಾ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ವತಿಯಿಂದ ಇಲ್ಲಿನ ಸವಳಂಗ ರಸ್ತೆಯ ರೋಟರಿ ಯುವ ಕೇಂದ್ರದಲ್ಲಿ ಜು.8ರ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಸಾಪ್ತಾಹಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು.
ಜೀವನದಲ್ಲಿ ಬರುವ ಸುಖ-ದುಃಖಗಳನ್ನು ಎದುರಿಸಿ ಮಾಡುವ ಕಾಯಕದಲ್ಲಿ ದೇವರನ್ನು ಕಾಣಬೇಕು. ಧರ್ಮ ಪರಿಪಾಲನೆಗೆ ಅಶಕ್ತರು, ಅಸಹಾಯಕರಿಗೆ ಸಹಾಯ ಮಾಡಬೇಕು. ಧರ್ಮ ಪುರುಸೊತ್ತಿದ್ದಾಗ ಮಾಡುವುದಲ್ಲ. ದಿನನಿತ್ಯ ನಾವು ಧರ್ಮ ಮಾರ್ಗದಲ್ಲಿ ನಡೆಯಬೇಕೆಂದರು.
ಸೇವೆಯೇ ರೋಟರಿ ಕ್ಲಬ್‍ನ ಧ್ಯೇಯವಾಗಿದೆ. ರೋಟರಿ ಅನೇಕ ಸಮಾಜಮುಖಿ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದೆ. ಜನಪರ ಕಾರ್ಯ ಮಾಡುತ್ತಾ ಇತರೆ ಸಂಘ- ಸಂಸ್ಥೆಗಳಿಗೂ ಮಾದರಿಯಾಗಿದೆ. ರೋಟರಿ ಕ್ಲಬ್ ಶಿವಮೊಗ್ಗದ ಅಧ್ಯಕ್ಷರಾದ ಗೋಪಿನಾಥ್ ಅವರು ಈ ಹಿಂದಿನಿಂದಲೂ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
Also read: ಬೇಸೂರು ಅಣು ಸ್ಥಾವರ ಸ್ಥಾಪನೆ | ರೈತರು ಆತಂಕ ಪಡುವ ಅಗತ್ಯವಿಲ್ಲ: ಶಾಸಕ ಬೇಳೂರು ಗೋಪಾಲಕೃಷ್ಣ
ರೋಟರಿ ಕ್ಲಬ್ ಶಿವಮೊಗ್ಗ ಅಧ್ಯಕ್ಷರಾದ ರೊ.ಎನ್. ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯದರ್ಶಿ ಶೈಲಿನ್ ಬಾಬು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಸದಸ್ಯರು, ಇನ್ನರ್‍ವೀಲ್ ಸದಸ್ಯೆಯರು, ರೋರ್ಯಾಕ್ಟ್, ಇಂರ್ಯಾಕ್ಟ್ ಸದಸ್ಯರು, ಆಹ್ವಾನಿತರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಶ್ರೀಗಳಿಗೆ ಗೌರವ ಸಮರ್ಪಿಸಲಾಯಿತು.
ಮಣಿ ಪ್ರಾರ್ಥಿಸಿ, ಬಿ.ವಿ. ಲಕ್ಷ್ಮಿದೇವಿ ಸ್ವಾಗತಿಸಿ, ಶೈಲಿನ್ ಬಾಬು ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








