ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮ್ಮ ನೆಲದ ಜೀವನಾಡಿಯಾದ ಅನ್ನದಾತ ಹಾಗೂ ಕೃಷಿ ಸಂಸ್ಕೃತಿಗೆ ಗೌರವ ಸಲ್ಲಿಸುವ ಪವಿತ್ರ “ಮಣ್ಣು ಎತ್ತಿನ ಅಮಾವಾಸ್ಯೆ”ಯ (ಮಣ್ಣೆತ್ತಿನ ಅಮಾವಾಸ್ಯೆ) ಹಿನ್ನಲೆಯಲ್ಲಿ ಇಂದು ಸಂಸದ ಬಿ.ವೈ. ರಾಘವೇಂದ್ರ ಗೋಮಾತೆಗೆ ಮೇವು ಉಣಿಸಿ, ಶ್ರದ್ಧಾಭಕ್ತಿಗಳಿಂದ ಗೋಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಆರಂಭವಾಗುವ ಈ ಶುಭ ದಿನದಂದು, ಕೃಷಿ ಕಾಯಕದ ದೇವರೆಂದೇ ಬಿಂಬಿತವಾಗಿದೆ ಎತ್ತುಗಳನ್ನು ಹಾಗೂ ನಮಗೆ ಅನ್ನ ನೀಡುವ ಪವಿತ್ರ ಮಣ್ಣನ್ನು ಪೂಜಿಸುವುದು ನಮ್ಮ ಮಣ್ಣಿನ ಸಂಸ್ಕೃತಿಯ ಹೆಮ್ಮೆಯ ಪ್ರತೀಕವಾಗಿದೆ ಎಂದರು.

Also read: ಪ್ರತಿಯೊಂದು ಸವಾಲನ್ನು ಆತ್ಮವಿಶ್ವಾಸದಿಂದ ಎದುರಿಸಿ: ಎನ್ಇಎಸ್ ಅಧ್ಯಕ್ಷ ನಾರಾಯಣ ರಾವ್
ಭೂಮಿತಾಯಿಯ ಒಡಲು ಹಸಿರಾಗಿ, ರೈತಾಪಿ ವರ್ಗದ ಶ್ರಮ ಸಾರ್ಥಕಗೊಳ್ಳಲಿ. ಪ್ರಕೃತಿ ಮಾತೆ ಹಾಗೂ ಗೋಮಾತೆಯು ನಾಡಿನ ಸಮಸ್ತ ಜನರಿಗೂ ಆಯುಷ್ಯ, ಆರೋಗ್ಯ, ನೆಮ್ಮದಿ ಹಾಗೂ ಸಮೃದ್ಧಿಯನ್ನು ಕರುಣಿಸಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










