ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಗರದ (Shivamogga) ಗೋಪಾಳದಲ್ಲಿರುವ ನಾರಾಯಣ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ಆವರಣದಲ್ಲಿ ಜುಲೈ 18ರ ಶನಿವಾರದಂದು ಉಚಿತ ಮೂಳೆ ಸಾಂದ್ರತೆ (Bone Mineral Density – BMD) ಪರೀಕ್ಷೆ ಹಾಗೂ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ನೋಂದಣಿ, ಬಿ.ಎಂ.ಡಿ ಪರೀಕ್ಷೆ ಮತ್ತು ವೈದ್ಯರ ತಪಾಸಣೆ ಸಂಪೂರ್ಣ ಉಚಿತವಾಗಿರುತ್ತದೆ.
ಖ್ಯಾತ ಮೂಳೆರೋಗ ತಜ್ಞರಾದ ಡಾ. ಚೇತನ್ ಎಂ.ಎಲ್ ಅವರು ರೋಗಿಗಳಿಗೆ ಉಚಿತ ತಪಾಸಣೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ.
Also Read>> Shivamogga | ದುರ್ಗಿಗುಡಿ ರಾಯರ ಮಠಕ್ಕೆ 3 ISO ಪ್ರಮಾಣಪತ್ರ | ದಕ್ಷಿಣ ಭಾರತದಲ್ಲೇ ಮೊದಲ
ದೀರ್ಘಕಾಲದ ಮೊಣಕಾಲು ಮತ್ತು ಸೊಂಟದ ನೋವು, ಕೀಲು ನೋವು, ಮೆಟ್ಟಿಲು ಹತ್ತಲು ಮತ್ತು ಇಳಿಯಲು ಕಷ್ಟಪಡುತ್ತಿರುವವರು, ಮೂಳೆ ಸವೆತ ಅಥವಾ ಮೂಳೆಯ ಸಾಂದ್ರತೆ ಕಡಿಮೆಯಾಗಿರುವ ಸಮಸ್ಯೆಯಿಂದ ಬಳಲುತ್ತಿರುವವರು ಈ ಶಿಬಿರದಲ್ಲಿ ನೋಂದಾಯಿಸಿಕೊಂಡು ಇದರ ಸದುಪಯೋಗ ಪಡಿಸಿಕೊಳ್ಳಬಹುದು.
Shivamogga | ಮೂಳೆ ಆರೋಗ್ಯದ ಕುರಿತಾಗಿ ಜಾಗೃತಿ
ವಿಶೇಷವಾಗಿ ಮಹಿಳೆಯರು ಮತ್ತು ವೃದ್ಧರಲ್ಲಿ ಮೂಳೆಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಆಸ್ಟಿಯೊಪೊರೋಸಿಸ್ನಂತಹ (Osteoporosis) ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆಹಚ್ಚುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.
ಶಿಬಿರದಲ್ಲಿ ಪಾಲ್ಗೊಳ್ಳಲು ಆಸಕ್ತಿಯುಳ್ಳವರು ನೊಂದಣಿ ಕಡ್ಡಾಯ, ಹೆಚ್ಚಿನ ಮಾಹಿತಿಗಾಗಿ +91 9108243454 ಅನ್ನು ಸಂಪರ್ಕಿಸಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









