No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Monday, October 5, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

Shivamogga | ದುರ್ಗಿಗುಡಿ ರಾಯರ ಮಠಕ್ಕೆ 3 ISO ಪ್ರಮಾಣಪತ್ರ | ದಕ್ಷಿಣ ಭಾರತದಲ್ಲೇ ಮೊದಲು

ಗುಣಮಟ್ಟ, ಪರಿಸರ ನಿರ್ವಹಣೆ ಮತ್ತು ಆರೋಗ್ಯ–ಸುರಕ್ಷತಾ ಕ್ಷೇತ್ರಗಳಲ್ಲಿ ಸಾಧನೆ

kalpa News by kalpa News
July 16, 2026
in ಶಿವಮೊಗ್ಗ
0
Shivamogga's Sri Raghavendra Swamy Mutt Three ISO Certifications
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |

ಶಿವಮೊಗ್ಗ (Shivamogga) ನಗರದ ಹೃದಯ ಭಾಗವಾದ ದುರ್ಗಿಗುಡಿ ಪಾರ್ಕ್ ಬಡಾವಣೆಯಲ್ಲಿ ಸ್ಥಿತಿಯಾಗಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠವು ಮಹತ್ವದ ಸಾಧನೆಗೈದು, ಮೂರು ಹಂತಗಳ ಅಂತಾರಾಷ್ಟ್ರೀಯ ಐಎಸ್ಒ (ISO) ಪ್ರಮಾಣಪತ್ರಗಳನ್ನು ಪಡೆದುಕೊಂಡಿದೆ.

ಗುಣಮಟ್ಟದ ನಿರ್ವಹಣಾ ವ್ಯವಸ್ಥೆ, ಪರಿಸರ ನಿರ್ವಹಣಾ ವ್ಯವಸ್ಥೆ ಹಾಗೂ ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತಾ ನಿರ್ವಹಣಾ ವ್ಯವಸ್ಥೆ ಸೇರಿದಂತೆ ಮೂರು ವಿಭಿನ್ನ ಕ್ಷೇತ್ರಗಳಲ್ಲಿ ಪ್ರಮಾಣೀಕರಣ ಪಡೆದ ಮೊದಲ ಹಾಗೂ ಏಕೈಕ ಮಠವಾಗಿ ಇದು ಹೊರಹೊಮ್ಮಿದೆ.

ಈ ಅಪೂರ್ವ ಸಾಧನೆ ಮಠದ ಆಡಳಿತ ಮಂಡಳಿ, ಭಕ್ತರು ಹಾಗೂ ದಾನಿಗಳಲ್ಲಿ ಹರ್ಷವನ್ನು ಮೂಡಿಸಿದೆ. ಹಲವು ದಶಕಗಳಿಂದ ಧಾರ್ಮಿಕ, ಸಾಮಾಜಿಕ ಮತ್ತು ಜನೋಪಯೋಗಿ ಸೇವಾ ಚಟುವಟಿಕೆಗಳನ್ನು ನಿಷ್ಠೆಯಿಂದ ನಡೆಸಿಕೊಂಡು ಬರುತ್ತಿರುವ ಈ ಮಠ, ಇದೀಗ ತನ್ನ ಸೇವೆಗಳ ಗುಣಮಟ್ಟಕ್ಕೆ ಜಾಗತಿಕ ಮಟ್ಟದ ಮಾನ್ಯತೆಯನ್ನು ಪಡೆದಿದೆ.

Also Read>> ಪೇಪರ್ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ | ಹೇಗಾಯ್ತು ಘಟನೆ?

ಐಎಸ್ಒ ಮಾನ್ಯತೆ: ಸೇವಾ ಕಾರ್ಯಗಳಿಗೆ ಜಾಗತಿಕ ಗುರುತು

ಐಎಸ್ಒ ಸಂಸ್ಥೆಯವರು ಮಠದ ಕಾರ್ಯವೈಖರಿಯನ್ನು ಸಮಗ್ರವಾಗಿ ಪರಿಶೀಲಿಸಿ ಈ ಪ್ರಮಾಣಪತ್ರಗಳನ್ನು ನೀಡಿದ್ದಾರೆ. ಸಾಮಾನ್ಯವಾಗಿ ಕೈಗಾರಿಕಾ ಹಾಗೂ ಸೇವಾ ವಲಯಗಳಿಗೆ ಮಾತ್ರ ನೀಡಲಾಗುತ್ತಿದ್ದ ಈ ಪ್ರಮಾಣೀಕರಣವನ್ನು ಮೊದಲ ಬಾರಿಗೆ ಧಾರ್ಮಿಕ ಸಂಸ್ಥೆಗೆ ನೀಡಿರುವುದು ವಿಶೇಷವಾಗಿದೆ. ಮಠದ ಆಡಳಿತ ಪಾರದರ್ಶಕತೆ, ಸೇವಾ ಗುಣಮಟ್ಟ, ಪರಿಸರ ಕಾಳಜಿ ಮತ್ತು ಸುರಕ್ಷತಾ ಕ್ರಮಗಳನ್ನು ಪರಿಗಣಿಸಿ ಈ ಮಾನ್ಯತೆ ನೀಡಲಾಗಿದೆ.

ಮಠದ ವತಿಯಿಂದ ನಡೆಯುವ ಭಕ್ತರ ಸೇವೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ವೈದ್ಯಕೀಯ ಶಿಬಿರಗಳು, ಶಾಲೆ ದತ್ತು ಯೋಜನೆಗಳು ಸೇರಿದಂತೆ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸುತ್ತಿರುವುದನ್ನು ಐಎಸ್ಒ ಸಂಸ್ಥೆ ಗುರುತಿಸಿದೆ.

ಮಠದ ಸೇವಾ ಗುಣಮಟ್ಟಕ್ಕೆ ಹೊಸ ಮೈಲಿಗಲ್ಲು

ಈ ತ್ರಿವಳಿ ಪ್ರಮಾಣಪತ್ರಗಳು ಮಠಕ್ಕೆ ಹೆಮ್ಮೆಯ ಸಾಧನೆಯಾಗಿದ್ದು, ಭಕ್ತರು ಮತ್ತು ದಾನಿಗಳಿಗೆ ಹೆಚ್ಚಿನ ವಿಶ್ವಾಸವನ್ನು ನೀಡಲಿವೆ. ಇದರೊಂದಿಗೆ ಮಠದ ಸೇವೆಗಳ ಗುಣಮಟ್ಟ ಇನ್ನಷ್ಟು ಹೆಚ್ಚುವುದರ ಜೊತೆಗೆ ಆಡಳಿತದಲ್ಲಿ ಪಾರದರ್ಶಕತೆ ಹಾಗೂ ವ್ಯವಸ್ಥಿತತೆ ಬಲವಾಗಲಿದೆ. ಭವಿಷ್ಯದಲ್ಲಿ ಸೇವೆಗಳು ನಿಗದಿತ ಮಾನದಂಡಗಳಿಗೆ ಅನುಗುಣವಾಗಿ ನಡೆಯಲಿವೆ.

ಮುಂದಿನ ಗುರಿಗಳು…

ಮಠವು ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಸೇವಾ ಕಾರ್ಯಕ್ರಮಗಳನ್ನು ರೂಪಿಸುವ ಗುರಿಯನ್ನು ಹೊಂದಿದೆ. ವಿಶೇಷವಾಗಿ:

  • ಹೆಚ್ಚಿನ ವೈದ್ಯಕೀಯ ಶಿಬಿರಗಳ ಆಯೋಜನೆ
  • ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ
  • ಪರಿಸರ ಸಂರಕ್ಷಣಾ ಯೋಜನೆಗಳು
  • ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳ ವಿಸ್ತರಣೆ
  • ಸಮಾಜಮುಖಿ ಸೇವಾ ಯೋಜನೆಗಳ ಹೆಚ್ಚಳ

ಸೇವಾ ಸಮಿತಿ ಪ್ರತಿಕ್ರಿಯೆ

ಮಠದ ಸೇವಾ ಸಮಿತಿ ಅಧ್ಯಕ್ಷ ಹೆಚ್.ವಿ. ಸುರೇಶ್ ಅವರು ಮಾತನಾಡಿ, “ಐಎಸ್ಒ ಸಂಸ್ಥೆಯವರು ಸ್ವಯಂ ಪ್ರೇರಿತರಾಗಿ ಮಠಕ್ಕೆ ಭೇಟಿ ನೀಡಿ, ಪೂಜೆ ವಿಧಾನ, ಸ್ವಚ್ಛತೆ, ಭಕ್ತರ ಅಭಿಪ್ರಾಯ, ಹಣಕಾಸು ನಿರ್ವಹಣೆ ಸೇರಿದಂತೆ ಎಲ್ಲವನ್ನು ಪರಿಶೀಲಿಸಿದರು. ಸುಮಾರು ಆರು ತಿಂಗಳ ಪ್ರಕ್ರಿಯೆಯ ಬಳಿಕ ಕಳೆದ ವಾರ ಈ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಈ ಸಾಧನೆಗೆ ಭಕ್ತರ ಸೇವೆಯೇ ಕಾರಣ” ಎಂದು ತಿಳಿಸಿದರು.

ಖಜಾಂಚಿ ಗುರುಪ್ರಸಾದ್ ಅವರು, “ಗುಣಮಟ್ಟ, ಆಚಾರ-ವಿಚಾರ ಮತ್ತು ಹಣಕಾಸು ವ್ಯವಸ್ಥೆ ಸೇರಿದಂತೆ ಮೂರು ವಿಭಾಗಗಳಲ್ಲಿ ಈ ಪ್ರಮಾಣೀಕರಣ ದೊರೆತಿದೆ. ಮಠಕ್ಕೂ ಇಂತಹ ಮಾನ್ಯತೆ ಸಿಗುತ್ತದೆ ಎಂಬುದನ್ನು ನಾವು ಊಹಿಸಿರಲಿಲ್ಲ. ಇದು ನಮ್ಮೆಲ್ಲರಿಗೂ ಸಂತೋಷ ತಂದಿದೆ” ಎಂದರು.

ಭಕ್ತರ ಅಭಿಪ್ರಾಯ

ಮಠದ ಭಕ್ತ ಸುಧೀಂದ್ರ ಕಟ್ಟೆ ಅವರು, “ಐಎಸ್ಒ ಎಂದರೆ ಅಂತಾರಾಷ್ಟ್ರೀಯ ಗುಣಮಟ್ಟದ ಮಾನದಂಡ. ಮಠದ ಸೇವೆಗಳನ್ನು ಪರಿಶೀಲಿಸಿ ಈ ಪ್ರಮಾಣಪತ್ರ ನೀಡಿರುವುದು ರಾಯರ ಆಶೀರ್ವಾದದ ಫಲ. ಪಾಶ್ಚಾತ್ಯ ದೇಶಗಳಿಂದ ಈ ರೀತಿಯ ಗೌರವ ದೊರೆತಿರುವುದು ಹೆಮ್ಮೆಯ ಸಂಗತಿ” ಎಂದು ಅಭಿಪ್ರಾಯಪಟ್ಟರು.

ಒಟ್ಟಿನಲ್ಲಿ, ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಲಭಿಸಿದ ಈ ಅಂತಾರಾಷ್ಟ್ರೀಯ ಐಎಸ್ಒ ತ್ರಿವಳಿ ಪ್ರಮಾಣಪತ್ರವು ಮಠದ ಸೇವಾ ಪರಂಪರೆಯನ್ನು ಮತ್ತಷ್ಟು ಬಲಪಡಿಸಿದ್ದು, ಭವಿಷ್ಯದಲ್ಲಿ ಇನ್ನಷ್ಟು ಜನಪರ ಹಾಗೂ ಗುಣಮಟ್ಟದ ಸೇವೆಗಳನ್ನು ನೀಡಲು ಪ್ರೇರಣೆ ನೀಡಿದೆ.

Shivamogga’s Sri Raghavendra Swamy Mutt Receives Triple ISO Certification

Sri Raghavendra Swamy Mutt, located in Durgigudi Park area at the heart of Shivamogga city, has achieved a remarkable milestone by receiving three international ISO certifications. The mutt has been recognized in three key areas—Quality Management System, Environmental Management System, and Occupational Health and Safety Management System—making it the first and only mutt to receive such triple certification.

This rare achievement has brought great joy to the mutt’s management committee, devotees, and donors. The mutt, which has been serving society for several decades through religious, social, and community-oriented activities, has now gained global recognition for the quality of its services.

Global Recognition for Service Excellence

The ISO organization awarded these certifications after conducting a comprehensive evaluation of the mutt’s functioning. Traditionally, such certifications were given only to industrial and service sectors, but for the first time, a religious institution has been recognized. The certification acknowledges the mutt’s administrative transparency, service quality, environmental responsibility, and safety measures.

The ISO team assessed various activities conducted by the mutt, including devotee services, religious and cultural programs, medical camps, and school adoption initiatives, and found them to be systematically managed.

A New Benchmark in Service Quality

These triple certifications mark a proud milestone for the mutt and enhance trust among devotees and donors. They are expected to further improve the quality of services, strengthen administrative transparency, and ensure that all activities adhere to established standards.

Kalahamsa Infotech private limited

Future Goals

The mutt has outlined several future initiatives aimed at expanding its social impact:

  • Organizing more medical camps
  • Providing educational assistance to students
  • Promoting environmental conservation programs
  • Expanding cultural and spiritual activities
  • Increasing community welfare initiatives

Management’s Response

H.V. Suresh, President of the Mutt’s Seva Samiti, stated, “The ISO officials visited the mutt on their own initiative and evaluated our Pooja practices, cleanliness, public feedback, and financial management. After a six-month process, we received the certifications last week. This achievement is due to the devotion and service of our devotees.”

Treasurer Guruprasad added, “We received certifications in three areas—quality standards, cultural practices, and financial management. We never expected that a mutt could receive ISO certification. This recognition has brought us immense happiness.”

Devotees’ Views

Devotee Sudheendra Katte said, “ISO represents international standards of quality. Receiving this recognition for the mutt’s services is truly a blessing of Sri Raghavendra Swamy. It is a matter of pride that such an honor has come from international organizations.”

Overall, the triple ISO certification awarded to Sri Raghavendra Swamy Mutt has elevated its stature to an international level and is expected to inspire further expansion of its quality-driven, community-focused services.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Kalpa News Advertising DisclaimerJNNCE Shivamogga

Tags: Good NewsISOISO CertificateKannada NewsLatest NewsMalnad NewsPride Of ShivamoggaShimogaShivamoggaShivamogga NewsSri Raghavendra Swamy Muttಶಿವಮೊಗ್ಗಶ್ರೀ ರಾಘವೇಂದ್ರ ಸ್ವಾಮಿ ಮಠ
Share216Tweet135Send
Aniruddha Vasishta S R

Aniruddha Vasishta S R

Editor-in-Chief

Previous Post

Shivamogga | ಪೇಪರ್ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ

Next Post

Shivamogga | Raghavendra Swamy Mutt Becomes First In South India To Receives 3 ISO Certification

kalpa News

kalpa News

Next Post
Shivamogga's Sri Raghavendra Swamy Mutt Becomes First In South India To Receive Three ISO Certifications

Shivamogga | Raghavendra Swamy Mutt Becomes First In South India To Receives 3 ISO Certification

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL