ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಉತ್ತರ ಮಧ್ಯ ರೈಲ್ವೆ (North Central Railway) ಪ್ರಯಾಗರಾಜ್ ಜಂಕ್ಷನ್ ಮತ್ತು ಯಶವಂತಪುರ ಜಂಕ್ಷನ್ ನಡುವೆ ವಿಶೇಷ ವಾರಂತ್ಯ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಲು ಘೋಷಿಸಿದೆ. ಈ ವಿಶೇಷ ರೈಲುಗಳು ಎರಡೂ ದಿಕ್ಕುಗಳಲ್ಲಿ ತಲಾ 8 ಪ್ರಯಾಣಗಳನ್ನು ನಡೆಸಲಿವೆ.
ರೈಲು ಸಂಖ್ಯೆ 04149 ಪ್ರಯಾಗರಾಜ್ ಜಂಕ್ಷನ್–ಯಶವಂತಪುರ ಜಂಕ್ಷನ್ ವಾರಂತ್ಯ ವಿಶೇಷ ಎಕ್ಸ್ಪ್ರೆಸ್ ಪ್ರತಿ ಬುಧವಾರ ಸಂಜೆ 6.00 ಗಂಟೆಗೆ 05.08.2026ರಿಂದ 23.09.2026ರವರೆಗೆ ಪ್ರಯಾಗರಾಜ್ನಿಂದ ಹೊರಟು, ಶುಕ್ರವಾರ ರಾತ್ರಿ 9.00ಕ್ಕೆ ಯಶವಂತಪುರ ತಲುಪಲಿದೆ.
ಹಿಂತಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 04150 ಯಶವಂತಪುರ ಜಂಕ್ಷನ್–ಪ್ರಯಾಗರಾಜ್ ಜಂಕ್ಷನ್ ವಾರಂತ್ಯ ವಿಶೇಷ ಎಕ್ಸ್ಪ್ರೆಸ್ ಪ್ರತಿ ಶನಿವಾರ ಬೆಳಗ್ಗೆ 7.00ಕ್ಕೆ 08.08.2026ರಿಂದ 26.09.2026ರವರೆಗೆ ಯಶವಂತಪುರದಿಂದ ಹೊರಟು, ಸೋಮವಾರ ಬೆಳಗ್ಗೆ 6.30ಕ್ಕೆ ಪ್ರಯಾಗರಾಜ್ ತಲುಪಲಿದೆ.
Also read>> Thums Up Brings Back ThunderWheels Campaign
ಮಾರ್ಗ ಮಧ್ಯೆ ಈ ವಿಶೇಷ ರೈಲುಗಳು ಶಂಕರಗಢ್, ದಭೌರಾ, ಮಾನಿಕ್ಪುರ್ ಜಂಕ್ಷನ್, ಚಿತ್ರಕೂಟ ಧಾಮ ಕರ್ವಿ, ಬಂಡಾ ಜಂಕ್ಷನ್, ಮಹೋಬಾ ಜಂಕ್ಷನ್, ಖಜುರಾಹೋ, ದರಿಯಾಗಂಜ್, ಮಹಾರಾಜ ಛತ್ರಸಾಲ್ ಸ್ಟೇಷನ್ ಛತರ್ಪುರ, ಟಿಕಮಗಢ್, ಲಲಿತ್ಪುರ ಜಂಕ್ಷನ್, ಬೀನಾ ಜಂಕ್ಷನ್, ರಾಣಿ ಕಮಲಾಪತಿ, ಇಟಾರ್ಸಿ ಜಂಕ್ಷನ್, ನಾಗ್ಪುರ, ಬಾಲ್ಲಾರ್ಶಾ, ಸಿರ್ಪುರ ಕಾಗಝನಗರ, ಬೆಲ್ಲಂಪಳ್ಳಿ, ಮಂಚೇರಿಯಲ್, ಕಾಜೀಪೇಟ್ ಜಂಕ್ಷನ್, ಸೆಕೆಂದ್ರಾಬಾದ್ ಜಂಕ್ಷನ್, ಲಿಂಗಂಪಳ್ಳಿ, ವಿಕಾರಾಬಾದ್ ಜಂಕ್ಷನ್, ತಾಂಡೂರು, ಯಾದಗಿರಿ, ಕೃಷ್ಣಾ, ರೈಚೂರು, ಗುಂಟಕಲ್ ಜಂಕ್ಷನ್, ಅನಂತಪುರ, ಧರ್ಮಾವರಂ ಜಂಕ್ಷನ್, ಹಿಂದೂಪುರ ಮತ್ತು ಯಲಹಂಕ ಜಂಕ್ಷನ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತವೆ.
ಈ ವಿಶೇಷ ರೈಲುಗಳು ಒಟ್ಟು 23 ಐಸಿಎಫ್ ಬೋಗಿಗಳನ್ನು ಹೊಂದಿದ್ದು, 1 ಎಸಿ ಟು ಟಿಯರ್ ಕೋಚ್, 2 ಎಸಿ ತ್ರಿ ಟಿಯರ್ ಕೋಚ್ಗಳು, 11 ಸ್ಲೀಪರ್ ಕ್ಲಾಸ್ ಬೋಗಿಗಳು, 7 ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು ಹಾಗೂ 2 ಸೀಟಿಂಗ್-ಕಮ್-ಲಗೇಜ್/ದಿವ್ಯಾಂಗ ಸ್ನೇಹಿ ಕೋಚ್ಗಳನ್ನು ಒಳಗೊಂಡಿರುತ್ತವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









