ಕಲ್ಪ ಮೀಡಿಯಾ ಹೌಸ್ | ಬಾರಕೂರು |
ಆದರ್ಶ ಕೀರ್ತಿಶೇಷ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಸತ್ಯತೀರ್ಥ ಪೀಠಾರೋಹಣ ಶತಮಾನೋತ್ಸವದ ಸಂಭ್ರಮ ಹಾಗೂ ಶ್ರೀ ವಿದ್ಯೇಶತೀರ್ಥ ಶ್ರೀಪಾದರ 47ನೇ ಚಾತುರ್ಮಾಸ್ಯದ (Chaturmasya) ಪವಿತ್ರ ಅವಧಿಯ ಅಂಗವಾಗಿ ಉಡುಪಿ ಜಿಲ್ಲೆಯ ಬಾರಕೂರಿನ ಭಂಡಾರಕೇರಿ ಮಠದಲ್ಲಿ ನಾಳೆ (ಆ.2) ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಪರಮಪೂಜ್ಯ ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರ ದಿವ್ಯ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮಗಳಿಗೆ ಭಕ್ತಾದಿಗಳಿಗೆ ಆಹ್ವಾನ ನೀಡಲಾಗಿದೆ.
Chaturmasya : ಆ.2ರ ಕಾರ್ಯಕ್ರಮಗಳು
ಸಂಜೆ 4ರಿಂದ 5 ಗಂಟೆಯವರೆಗೆ
ಭಜನಾ ಕಾರ್ಯಕ್ರಮ
ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಬ್ರಹ್ಮಾವರ ಇವರಿಂದ ಭಜನೆ ನಡೆಯಲಿದೆ.
ಸಂಜೆ 5ರಿಂದ 6.20ರವರೆಗೆ
ಮಹಾಭಾರತ ಉಪಾಖ್ಯಾನ ಪ್ರವಚನ
ವಿ. ಶ್ರೀ ಆನಂದತೀರ್ಥ ನಾಗಸಂಪಿಗೆ ಆಚಾರ್ಯ ಅವರು ಪ್ರವಚನ ನೀಡಲಿದ್ದಾರೆ.
Also Read>> ಕಾರ್ಕಳ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್‌ನಲ್ಲಿ ನೂತನ ವಿದ್ಯಾರ್ಥಿ ಪರಿಷತ್ ಉದ್ಘಾಟನೆ
ಸಂಜೆ 6.20ರಿಂದ 6.30ರವರೆಗೆ
ಕೃಷ್ಣನಾಮ ವ್ಯಾಖ್ಯಾನ
ಪರಮಪೂಜ್ಯ ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರು ನೆರವೇರಿಸಲಿದ್ದಾರೆ.
ಸಂಜೆ 6.30ರಿಂದ ರಾತ್ರಿ 8ರವರೆಗೆ
ತಾಳಮದ್ದಳೆ ಕಾರ್ಯಕ್ರಮ
ಶ್ರೀ ಸೂರಾಲು ದೇವಿಪ್ರಸಾದ್ ಭಟ್ ಮತ್ತು ಬಳಗದವರಿಂದ ನಡೆಯಲಿದೆ.
ಕಾರ್ಯಕ್ರಮದ ಬಳಿಕ ಎಲ್ಲಾ ಭಕ್ತಾದಿಗಳಿಗೆ ಮಹಾಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿದೆ. ಭಕ್ತರು ತಮ್ಮ ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾಗುವಂತೆ ಆಯೋಜಕರು ವಿನಂತಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 











