ಕಲ್ಪ ಮೀಡಿಯಾ ಹೌಸ್ | ಸೊರಬ |
ಶ್ರಮ ಜೀವಿಗಳಾದ ದೇವಾಂಗ ಸಮುದಾಯವು ಶೈಕ್ಷಣಿಕ ಹಾಗೂ ಸಂಘಟನಾತ್ಮಕವಾಗಿ ಇನ್ನಷ್ಟು ಸದೃಢವಾಗಬೇಕಿದೆ. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ದೇವಾಂಗ ಸಮಾಜದ ಜಿಲ್ಲಾಧ್ಯಕ್ಷ ಟಿ. ರಾಜೇಶ್ ಕರೆನೀಡಿದರು.
ಪಟ್ಟಣದ ಶ್ರೀರಂಗ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ದೇವಾಂಗ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ದೇವಾಂಗ ಸಮುದಾಯದ ಸಂಘಟನೆ ರಾಜ್ಯ ಮಟ್ಟದಲ್ಲಿಯೇ ವಿಶೇಷ ಮೆಚ್ಚುಗೆ ಪಡೆದಿದೆ. ಹಿರಿಯರ ಮಾರ್ಗದರ್ಶನದಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದು ಹೇಳಿದರು. ತಾಲೂಕಿನಲ್ಲಿ 183 ದೇವಾಂಗ ಮತ್ತು 356 ನೇಕಾರ ಕುಟುಂಬಗಳಿದ್ದು, ದೇವರ ದಾಸಿಮಯ್ಯ ಜಯಂತಿಯನ್ನು ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಕರೆ ನೀಡಿದರು.
Also read>> ಯುವಕರ ಭವಿಷ್ಯಕ್ಕೆ ಕಾಂಗ್ರೆಸ್ ಸರ್ಕಾರ ಬೆಂಕಿ ಹಾಕುತ್ತಿದೆ | MLC ಡಾ.ಧನಂಜಯ ಸರ್ಜಿ ಗಂಭೀರ ಆರೋಪ
ಸಭೆಯಲ್ಲಿ ನೂತನ ಪದಾಧಿಕಾರಿಗಳಾಗಿ ಇ.ಎಚ್. ಶಶಿಧರ ಉರುಗನಹಳ್ಳಿ ಅಧ್ಯಕ್ಷರಾಗಿ, ನೇಮರಾಜ್ ಶಾಂತಗೇರಿ ಉಪಾಧ್ಯಕ್ಷರಾಗಿ, ಎಂ.ಎಸ್. ಸತೀಶ್ ಕಾರ್ಯದರ್ಶಿಯಾಗಿ, ರವಿ ಕೆ. ಸುತ್ತುಕೋಟೆ ಖಜಾಂಚಿಯಾಗಿ ಆಯ್ಕೆಯಾದರು. ಸಂಘಟನಾ ಕಾರ್ಯದರ್ಶಿಗಳಾಗಿ ಕೆ.ವಿ. ಕುಮಾರ್, ಎಲ್. ವೆಂಕಟೇಶ್ ಹಾಗೂ ಸಹ ಕಾರ್ಯದರ್ಶಿಯಾಗಿ ಕೆ. ಸತೀಶ್ ಆಯ್ಕೆಯಾದರು.
ನಿರ್ದೇಶಕರಾಗಿ ಸುರೇಶ್ ಪಿ. ಸೊರಬ, ಎ. ರಂಗನಾಥ್, ಕೆ.ವಿ. ಪ್ರಕಾಶ್, ಹೇಮಾವತಿ, ಸಿ.ಕೆ. ರಾಜಪ್ಪ ಉರುಗನಹಳ್ಳಿ, ಎಂ.ಆರ್. ಲಿಂಗರಾಜ್, ಕೆ. ರವಿ, ಪಿ. ಸುರೇಶ್, ಗೋಪಿನಾಥ್ ಮಳಲಿಕೊಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ಅಭಿನಂದಿಸಲಾಯಿತು.
ಸಭೆಯಲ್ಲಿ ತಾಲೂಕು ಗೌರವಾಧ್ಯಕ್ಷ ಎಸ್.ಬಿ. ನಾಗರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸಮಿತಿಯ ಟಿ.ಟಿ. ವೆಂಕಟೇಶ್, ಶಿವಯೋಗಿ, ನಿಕಟಪೂರ್ವ ಅಧ್ಯಕ್ಷ ಡಿ. ಪರಸಪ್ಪ ಸೇರಿದಂತೆ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎಂ.ಎಚ್. ಶ್ರೇಯ ಪ್ರಾರ್ಥನೆ ನೆರವೇರಿಸಿ, ಎನ್. ಬಸವಂತಪ್ಪ ಸ್ವಾಗತಿಸಿ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








