ಕಲ್ಪ ಮೀಡಿಯಾ ಹೌಸ್ | ಸಾಗರ |
ಸಾರ್ವಜನಿಕರ ಕಣ್ಣಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸಾಗರದ (Sagara) ರಾಯಲ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ (RBD) ಹಾಗೂ ಎಂ.ಎಂ. ಜೋಶಿ ಗಣೇಶ್ ನೇತ್ರಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 8ರಂದು (ಶನಿವಾರ) ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
Sagara | ಆರ್‌ಬಿಡಿ ಕಚೇರಿಯಲ್ಲಿ ಶಿಬಿರ
ಶಿಬಿರವು ಬೆಳಿಗ್ಗೆ 10.30ರಿಂದ ಸಂಜೆ 4.30ರವರೆಗೆ ನಗರದ ಕೋರ್ಟ್ ರಸ್ತೆಯಲ್ಲಿರುವ ಎಸಿ ಕಚೇರಿ ಎದುರಿನ ಆರ್‌ಬಿಡಿ ಕಚೇರಿಯಲ್ಲಿ ನಡೆಯಲಿದೆ.
Also Read>> ಕೃಷಿ ಬಾವಿಯಲ್ಲಿ ಸಮುದ್ರದ ಅಲೆಗಳಂತೆ ನೀರಿನ ಚಲನೆ | ಗುಜರಾತ್‌ನಲ್ಲಿ ವಿಚಿತ್ರ ವಿದ್ಯಮಾನ
ಶಿಬಿರದಲ್ಲಿ ನೇತ್ರ ತಜ್ಞರು ಸಾಮಾನ್ಯ ಕಣ್ಣಿನ ತಪಾಸಣೆ, ಕಣ್ಣಿನ ಪೊರೆ (ಕ್ಯಾಟರಾಕ್ಟ್) ಪರೀಕ್ಷೆ, ಕಾರ್ನಿಯಾ ಹಾಗೂ ದೃಷ್ಟಿದೋಷ ಸಂಬಂಧಿತ ತಪಾಸಣೆ, ಗ್ಲುಕೋಮಾ (ಕಣ್ಣಿನ ಒತ್ತಡ) ಪರೀಕ್ಷೆ, ಕಣ್ಣಿನ ಹಿಂಭಾಗದ ನರಗಳ (ವಿಟ್ರಿಯೋ-ರೆಟಿನಾ) ತಪಾಸಣೆ, ಮಕ್ಕಳ ಕಣ್ಣಿನ ಸಮಸ್ಯೆಗಳು ಹಾಗೂ ಅಕ್ಯುಲೋಪ್ಲಾಸ್ಟಿ ಚಿಕಿತ್ಸೆಗೆ ಸಂಬಂಧಿಸಿದ ಸಲಹೆಗಳನ್ನು ಉಚಿತವಾಗಿ ನೀಡಲಿದ್ದಾರೆ.
ಕಣ್ಣಿನ ಸಮಸ್ಯೆ, ದೃಷ್ಟಿದೋಷ ಅಥವಾ ನಿಯಮಿತ ನೇತ್ರ ತಪಾಸಣೆಯ ಅಗತ್ಯವಿರುವ ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ರಾಯಲ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಸಂಸ್ಥೆ ಪ್ರಕಟಣೆಯಲ್ಲಿ ಕೋರಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










