ಕಬ್ಬಿನ ಉದ್ಯಮ ಆ ಕಾಲದಲ್ಲಿ ಕೆರಿಬಿಯನ್ ದ್ವೀಪಗಳಲ್ಲಿ ಪ್ರಮುಖವಾಗಿತ್ತು. ಇದು ಕೇವಲ ಉದ್ಯಮವಾಗಿ ಮಾತ್ರ ಸೀಮಿತಗೊಳ್ಳದೆ, ಸಾಕಷ್ಟು ರಾಜಕೀಯ ಪರಿಣಾಮಗಳು ಮತ್ತು ಭಾರತೀಯರ ವಲಸೆಯ ಮೇಲೂ ಪರಿಣಾಮ ಬೀರಿತು.
ಕೆರಿಬಿಯನ್ ದ್ವೀಪಗಳಲ್ಲಿ ಕೇವಲ ಬ್ರಿಟಿಷರ ಆಳ್ವಿಕೆ ಮಾತ್ರ ಇರಲಿಲ್ಲ, ಫ್ರೆಂಚ್ ಮತ್ತು ಡಚ್ಚರು (ನೆದರ್‌ಲ್ಯಾಂಡ್) ಸಹ ಆಳ್ವಿಕೆ XLVI of 1860 ಆ್ಯಕ್ಟ್ ಪ್ರಕಾರ ಬ್ರಿಟಿಷರು ಭಾರತೀಯರನ್ನು ಫ್ರೆಂಚ್ ಮತ್ತು ಡಚ್ಚರ ಕಾಲನಿಗಳಲ್ಲಿ ಕೆಲಸ ಮಾಡಲು ಕಳುಹಿಸಿಕೊಟ್ಟರು. ಈ ಕಾರಣದಿಂದಾಗಿ ಕೇವಲ ಬ್ರಿಟೀಷರ ಕಾಲನಿಗಳಿಗೆ ಮಾತ್ರ ಭಾರತೀಯರು ಸೀಮಿತವಾಗದೆ ಫ್ರೆಂಚ್ ಮತ್ತು ಡಚ್ ಕಾಲೋನಿಗಳಲ್ಲಿ ಸೇರಿಕೊಂಡರು. ಭಾರತೀಯ ಗುತ್ತಿಗೆ ನೌಕರರಿಂದ ಭಾರಿ ಪ್ರಮಾಣದ ಲಾಭ ಪಡೆದದ್ದು ನೆದರ್‌ಲ್ಯಾಂಡ್ ಅಂದರೆ ಡಚ್ಚರು.
ಯುರೋಪಿಯನ್ನರ ವಸಾಹತಾಗಿದ್ದ ಕೆರಿಬಿಯನ್‌ನಲ್ಲಿ ಕೆಲವು ದ್ವೀಪಗಳಲ್ಲಿ ಇಂಗ್ಲಿಷ್ ಮಾತನಾಡಿದರೆ, ಇನ್ನು ಕೆಲವು ಕಡೆ ಫ್ರೆಂಚ್ ಮತ್ತು ಭಾಷೆಗಳು ಚಾಲ್ತಿಯಲ್ಲಿವೆ. ಹೀಗೆ ಇಂಗ್ಲಿಷ್ ಮಾತನಾಡುವ ದ್ವೀಪ ರಾಷ್ಟ್ರಗಳಲ್ಲಿನ ಭಾರತೀಯರು ಹೆಚ್ಚಾಗಿ ಉತ್ತರಪ್ರದೇಶ ಮತ್ತು ಬಿಹಾರ ಮೂಲದವರು. ಇವರು ಇಂದಿಗೂ ಭೋಜ್‌ಪುರಿಯನ್ನು ಮಾತೃಭಾಷೆಯಾಗಿ ಪರಿಗಣಿಸಿ ಭೋಜ್‌ಪುರಿ ಮತ್ತು ಹಿಂದಿಯನ್ನು ಉಳಿಸಿಕೊಂಡು ಬಂದಿದ್ದಾರೆ.
ಮಾರ್ಬಿನಿಕ್ ಮತ್ತು ಗುಡ್‌ಲೋಪ್ ದ್ವೀಪಗಳಲ್ಲಿನ ಭಾರತೀಯ ಗುತ್ತಿಗೆ ನೌಕರರು ಆಂಧ್ರಪ್ರದೇಶ ಮತ್ತು ತಮಿಳುನಾಡು ಮೂಲದವರು. ಟ್ರಿನಿಡಾಡ್, ಟೊಬಾಗೋ ಮತ್ತು ಗಯಾನಾದಲ್ಲಿನ ಗುತ್ತಿಗೆ ನೌಕರರಲ್ಲಿ ಶೇ. 20ಕ್ಕೂ ಹೆಚ್ಚು ಆಂಧ್ರಪ್ರದೇಶ ಮತ್ತು ತಮಿಳುನಾಡು ಮೂಲದವರು.
ಈಗಿನ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಸಣ್ಣ ಪ್ರಮಾಣದಲ್ಲಿ ವಲಸೆ ನಡೆದಿತ್ತು. ಇಂದು ಟ್ರಿನಿಡಾಡ್ ಮತ್ತು ಟಬಾಗೋಗೆ, ಸುರಿನಾಮ್ ಮತ್ತು ಗಯಾನದಲ್ಲಿ ಭಾರತೀಯಯ ಮೂಲದ ಕೆರಿಬಿಯನ್ನರು (Indo-Caribbean) ಅತಿದೊಡ್ಡ ಜನಾಂಗೀಯ ಸಮೂಹ (Ethnic Groups). ಜುಮೈಕಾ, ಗ್ರೆನೆಡಾ, ಸೇಂಟ್ ವಿನ್ಸೆಂಟ್, ಗ್ರೆನೆಡಿನ್ಸ್, ಸೇಂಟ್ ಲೂಸಿಯಾ, ಮಾರ್ಟಿನಿಕ್ ಮತ್ತು ಗುಡ್‌ಲೋಪ್‌ಗಳಲ್ಲಿ ಎರಡನೆಯ ಅತಿದೊಡ್ಡ ಸಮೂಹ.
ಇನ್ನು ಉಳಿದ ದೇಶಗಳಾದ ಆ್ಯಂಗ್ಪಿಲಾ, ಆ್ಯಂಟಿಗುವಾ ಮತ್ತು ಬಾರ್ಬುಡಾ, ದ. ಬಹಾಮಾಸ್, ಬಾರ್ಬ್‌ಡೋಸ್, ಬೆಲಿಜ್, ಫ್ರೆಂಚ್ ಗಯಾನಾ, ಪನಾಮಾ, ಪಾಮಿನಿಕನ್ ಮತ್ತು ನೆದರ್‌ಲ್ಯಾಂಡ್ ಆಂಟಿಲ್ಸ್‌ಗಳಲ್ಲೂ ಚಿಕ್ಕ ಚಿಕ್ಕ ಪ್ರಮಾಣದಲ್ಲಿ ಭಾರತೀಯರು ನೆಲೆಯೂರಿದ್ದಾರೆ.
(ಮುಂದುವರೆಯುವುದು)













