ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕುವೆಂಪು ವಿಶ್ವವಿದ್ಯಾಲಯ ದ (Kuvempu University) 2026-27ನೇ ಸಾಲಿನ ಸ್ನಾತಕೋತ್ತರ ಪದವಿ (PG Course) ಕೋರ್ಸ್‌ಗಳಿಗೆ ಪ್ರವೇಶಾತಿ ಕೌನ್ಸಿಲಿಂಗ್ ಆಗಸ್ಟ್ 13 ಮತ್ತು 14ರಂದು ನಡೆಯಲಿದೆ.
ಜ್ಞಾನ ಸಹ್ಯಾದ್ರಿ ಕ್ಯಾಂಪಸ್ ಹಾಗೂ ವಿಶ್ವವಿದ್ಯಾಲಯದ ವ್ಯಾಪ್ತಿಯ ವಿವಿಧ ಕಾಲೇಜುಗಳ ಪಿಜಿ ಕೇಂದ್ರಗಳಲ್ಲಿರುವ ಎಲ್ಲ ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಜ್ಞಾನ ಸಹ್ಯಾದ್ರಿ ಆವರಣದಲ್ಲಿರುವ ಆಯಾ ವಿಭಾಗಗಳಲ್ಲಿ ಕೇಂದ್ರೀಕೃತ ಕೌನ್ಸಿಲಿಂಗ್ ಮೂಲಕ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ.
Also Read>> ರೈಲು ಪ್ರಯಾಣಿಕರೇ ಗಮನಿಸಿ! ಯಶವಂತಪುರ-ಮಂಗಳೂರು-ಕಾರವಾರದ 6 ರೈಲು ಸಂಚಾರ ರದ್ದು
ಈಗಾಗಲೇ ವಿಷಯವಾರು ಕ್ರೋಢೀಕೃತ ಮೆರಿಟ್ ಪಟ್ಟಿಗಳನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಮೆರಿಟ್ ಪಟ್ಟಿಯಲ್ಲಿರುವ ವಿದ್ಯಾರ್ಥಿಗಳು ಆಗಸ್ಟ್ 13 ಮತ್ತು 14ರಂದು ಬೆಳಗ್ಗೆ 9.30ಕ್ಕೆ ಸಂಬಂಧಿಸಿದ ವಿಶ್ವವಿದ್ಯಾಲಯದ ವಿಭಾಗಗಳಲ್ಲಿ ಹಾಜರಿರಬೇಕು ಎಂದು ಸೂಚಿಸಲಾಗಿದೆ.
ಆಗಸ್ಟ್ 13ರಂದು ಮೆರಿಟ್ ಕೋಟಾದಡಿ ಪ್ರವೇಶಾತಿ ನಡೆಯಲಿದ್ದು, ಆಗಸ್ಟ್ 14ರಂದು ಮೆರಿಟ್ ಕಂ ಪೇಮೆಂಟ್ ಕೋಟಾದಡಿ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ ಎಂದು ವಿಶ್ವವಿದ್ಯಾಲಯದ ಶೈಕ್ಷಣಿಕ ವಿಭಾಗದ ಪ್ರಕಟಣೆ ತಿಳಿಸಿದೆ.
Kuvempu University PG Admission Counselling on August 13 and 14
Shankaraghatta: Counselling for admission to all postgraduate (PG) programmes offered at the Jnana Sahyadri Campus of Kuvempu University and PG centres of various affiliated colleges for the academic year 2026-27 will be held on August 13 and 14.
The admission process for the university and affiliated colleges will be conducted through centralised counselling at the respective departments located on the Jnana Sahyadri campus.
Subject-wise consolidated merit lists have already been published on the university website. Students included in the merit lists have been instructed to report to the respective university departments by 9.30 a.m. on the scheduled dates.
Admissions under the Merit Quota will be conducted on August 13, while admissions under the Merit-cum-Payment Quota will be held on August 14, according to a notification issued by the Academic Section of Kuvempu University.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









