ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾಧ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಳ್ಳಲು ಬಯಸುವವರು ಹಾಗೂ ಕ್ಯಾಮೆರಾ ಮತ್ತು ಮೈಕ್ ಎದುರು ಆತ್ಮವಿಶ್ವಾಸದಿಂದ ಮಾತನಾಡಲು ಬಯಸುವ ಯುವಜನತೆಗೆ ಅನುಕೂಲವಾಗುವಂತೆ ‘ಪ್ರವರ್ತಕ ಕ್ರಿಯೇಷನ್ಸ್’ ಸಂಸ್ಥೆಯ ವತಿಯಿಂದ ‘ಮ್ಯಾಜಿಕ್ ಟಾಕ್’ (Magic Talk) ಎಂಬ ಮೂರು ದಿನಗಳ ವಿಶೇಷ ಕಾರ್ಯಾಗಾರವನ್ನು ಶಿವಮೊಗ್ಗದಲ್ಲಿ (Shivamogga) ಆಯೋಜಿಸಲಾಗಿದೆ.
ಕಾರ್ಯಾಗಾರವು ಆಗಸ್ಟ್ 24, 25 ಹಾಗೂ 26ರಂದು ಶಿವಮೊಗ್ಗ ನಗರದ ಗೋಪಾಳ ಬಸ್‌ಸ್ಟಾಪ್‌ನಲ್ಲಿರುವ ಗಣಪತಿ ದೇವಸ್ಥಾನದ ಎದುರಿನ ‘ಪ್ರವರ್ತಕ ಕ್ರಿಯೇಷನ್ಸ್’ ಆವರಣದಲ್ಲಿ ನಡೆಯಲಿದೆ. ಮಾಧ್ಯಮ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಆಸಕ್ತಿ ಹೊಂದಿರುವ ಯುವಜನರಿಗೆ ಪ್ರಾಯೋಗಿಕ ತರಬೇತಿ ನೀಡುವ ಉದ್ದೇಶದಿಂದ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಅನುಭವಿ ಆರ್‌ಜೆಗಳು, ವಿಜೆಗಳು, ನೀನಾಸಂ ಕಲಾವಿದರು ಹಾಗೂ ಹಿರಿಯ ರಂಗಕರ್ಮಿಗಳ ನೇತೃತ್ವದಲ್ಲಿ ತರಬೇತಿ ನಡೆಯಲಿದ್ದು, ಭಾಗವಹಿಸುವವರಿಗೆ ಮಾಧ್ಯಮ ಹಾಗೂ ವೇದಿಕೆ ನಿರೂಪಣೆಗೆ ಅಗತ್ಯವಾದ ಕೌಶಲ್ಯಗಳನ್ನು ಪ್ರಾಯೋಗಿಕವಾಗಿ ಕಲಿಸಿಕೊಡಲಾಗುತ್ತದೆ.
ಧ್ವನಿ, ನಿರೂಪಣೆ ಹಾಗೂ ಕ್ಯಾಮೆರಾ ತರಬೇತಿ
ಕಾರ್ಯಾಗಾರದಲ್ಲಿ ಧ್ವನಿ ಸಂಸ್ಕರಣೆ, ಸ್ಪಷ್ಟ ಉಚ್ಚಾರಣೆ, ರೇಡಿಯೋ ಜಾಕಿ (ಆರ್‌ಜೆ) ಶೈಲಿ, ಆಡಿಯೋ ಕಥನ, ಕ್ಯಾಮೆರಾ ಭಯ ನಿವಾರಣೆ, ವಿಜೆ ತರಬೇತಿ, ಸುದ್ದಿ ನಿರೂಪಣೆ ಹಾಗೂ ವೇದಿಕೆ ನಿರೂಪಣೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ತರಬೇತಿ ನೀಡಲಾಗುತ್ತದೆ.
ಕ್ಯಾಮೆರಾ ಎದುರು ಮಾತನಾಡುವಾಗ ಎದುರಾಗುವ ಆತಂಕವನ್ನು ನಿವಾರಿಸುವುದು, ಧ್ವನಿಯ ಏರಿಳಿತ ಹಾಗೂ ಉಚ್ಚಾರಣೆಯ ಮೂಲಕ ಪರಿಣಾಮಕಾರಿಯಾಗಿ ಮಾತನಾಡುವುದು, ಸುದ್ದಿ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಆತ್ಮವಿಶ್ವಾಸದಿಂದ ನಿರೂಪಿಸುವುದು ಸೇರಿದಂತೆ ಹಲವು ಕೌಶಲ್ಯಗಳನ್ನು ತರಬೇತಿಯ ಮೂಲಕ ಕಲಿಸಲಾಗುತ್ತದೆ.
ಅನುಭವಿ ಆರ್‌ಜೆಗಳು, ವಿಜೆಗಳು, ನೀನಾಸಂ ಕಲಾವಿದರು ಹಾಗೂ ಹಿರಿಯ ರಂಗಕರ್ಮಿಗಳ ನೇತೃತ್ವದಲ್ಲಿ ತರಬೇತಿ ನಡೆಯಲಿದ್ದು, ಭಾಗವಹಿಸುವವರಿಗೆ ಮಾಧ್ಯಮ ಹಾಗೂ ವೇದಿಕೆ ನಿರೂಪಣೆಗೆ ಅಗತ್ಯವಾದ ಕೌಶಲ್ಯಗಳನ್ನು ಪ್ರಾಯೋಗಿಕವಾಗಿ ಕಲಿಸಿಕೊಡಲಾಗುತ್ತದೆ.
ಮೂರು ದಿನಗಳ ತರಬೇತಿ ವೇಳಾಪಟ್ಟಿ
ಆಗಸ್ಟ್ 24 ಮತ್ತು 25ರಂದು ಸಂಜೆ 5ರಿಂದ ರಾತ್ರಿ 8ರವರೆಗೆ ಕಾರ್ಯಾಗಾರ ನಡೆಯಲಿದೆ. ಆಗಸ್ಟ್ 26ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ತರಬೇತಿ ಆಯೋಜಿಸಲಾಗಿದೆ.
Also Read>> ರಾಜ್ಯ ಸರ್ಕಾರದ ವಿರುದ್ಧ ಎಂಪಿ ರಾಘವೇಂದ್ರ ವಾಗ್ದಾಳಿ | ಏನೆಲ್ಲಾ ಉಲ್ಲೇಖಿಸಿದರು?
ಮೂರು ದಿನಗಳ ಕಾರ್ಯಾಗಾರದಲ್ಲಿ ಸಿದ್ಧಾಂತದ ಜೊತೆಗೆ ಪ್ರಾಯೋಗಿಕ ತರಬೇತಿಗೂ ಆದ್ಯತೆ ನೀಡಲಾಗಿದ್ದು, ಭಾಗವಹಿಸುವವರು ನೇರವಾಗಿ ತಮ್ಮ ಕೌಶಲ್ಯಗಳನ್ನು ಅಭ್ಯಾಸ ಮಾಡುವ ಅವಕಾಶವನ್ನು ಪಡೆಯಲಿದ್ದಾರೆ.
ಭಾಗವಹಿಸಿದವರಿಗೆ ಪ್ರಮಾಣಪತ್ರ
ಕಾರ್ಯಾಗಾರದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ತರಬೇತಿ ಪೂರ್ಣಗೊಂಡ ಬಳಿಕ ಪ್ರಮಾಣಪತ್ರ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಕಾರ್ಯಾಗಾರಕ್ಕೆ ಪ್ರವೇಶ ಶುಲ್ಕ ರೂ.599 ನಿಗದಿಪಡಿಸಲಾಗಿದ್ದು, ಸೀಮಿತ ಸಂಖ್ಯೆಯ ಸೀಟುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರು, ಆರ್‌ಜೆ, ವಿಜೆ, ನಿರೂಪಣೆ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ತಮ್ಮ ಕೌಶಲ್ಯವನ್ನು ಬೆಳೆಸಿಕೊಳ್ಳಲು ಬಯಸುವ ಯುವಜನತೆ ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಆಸಕ್ತರು ತಮ್ಮ ಹೆಸರನ್ನು ಮುಂಗಡವಾಗಿ ನೋಂದಾಯಿಸಿಕೊಳ್ಳಲು 84318 91358 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಅಧ್ಯಕ್ಷರು ತಿಳಿಸಿದ್ದಾರೆ.
Three-Day ‘Magic Talk’ Workshop to Be Held in Shivamogga from August 24
Shivamogga: Pravarṭhaka Creations has organised a three-day special workshop titled ‘Magic Talk’ for aspiring media professionals and youngsters who wish to develop confidence in speaking before the camera and microphone.
The workshop will be held on August 24, 25 and 26 at the Pravarṭhaka Creations premises opposite Ganapathi Temple near the Gopal Last Bus Stop in Shivamogga.
The training will be conducted under the guidance of experienced radio jockeys (RJs), video jockeys (VJs), Neenasam artists and senior theatre professionals. The workshop aims to provide participants with practical skills required for media presentation, communication and stage performance.
Training in Voice, RJ Skills and News Presentation
The three-day workshop will cover a range of topics, including voice modulation, clear pronunciation, radio jockeying techniques, audio narration, overcoming camera fear, VJ training, news presentation and stage anchoring.
Participants will receive practical guidance on improving their communication skills, developing confidence in front of the camera, using voice effectively and presenting news and programmes in a professional manner.
Workshop Schedule
The workshop will be conducted from 5 pm to 8 pm on August 24 and 25, while the session on August 26 will be held from 9 am to 2 pm.
Along with theoretical inputs, the workshop will focus on practical training, allowing participants to apply the skills they learn during the sessions.
Certificates for Participants
Every participant who completes the workshop will be awarded a certificate.
The registration fee has been fixed at ₹599, with seats limited to a specified number of participants. Youngsters interested in media, RJ and VJ careers, news presentation, anchoring and theatre can make use of the opportunity.
Interested participants can reserve their seats by contacting 84318 91358, the organisers said.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


