No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Tuesday, September 29, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ವಿಶ್ವ ಛಾಯಾಗ್ರಹಣ ದಿನ | ಕ್ಯಾಮೆರಾದ ಕಣ್ಣಿನಿಂದ… ನನ್ನೊಳಗಿನ ನನ್ನವರೆಗೆ

kalpa News by kalpa News
August 18, 2026
in Special Articles
0
World Photography Day : Mountain Life From Ruins to Peaks
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  | “ಪ್ರತಿಯೊಂದು ಚಿತ್ರವೂ ಒಂದು ಕಥೆ ಹೇಳುತ್ತದೆ. ಆದರೆ ಕೆಲವು ಚಿತ್ರಗಳು ನಮ್ಮ ಬದುಕನ್ನೇ ಓದಲು ಕಲಿಸುತ್ತವೆ.” ಪ್ರತಿ ವರ್ಷ ಆಗಸ್ಟ್ 19ರಂದು ವಿಶ್ವದಾದ್ಯಂತ ವಿಶ್ವ ಛಾಯಾಗ್ರಹಣ ದಿನವನ್ನು (World Photography Day) ಆಚರಿಸಲಾಗುತ್ತದೆ. ಇದು ಕೇವಲ ಕ್ಯಾಮೆರಾ, ಫೋಟೋ ಅಥವಾ ತಂತ್ರಜ್ಞಾನದ ಹಬ್ಬವಲ್ಲ. ಕಾಲವನ್ನು ನಿಲ್ಲಿಸುವ ಕಲೆಗೆ, ನೆನಪುಗಳನ್ನು ಅಮರಗೊಳಿಸುವ ಶಕ್ತಿಗೆ ಹಾಗೂ ಜಗತ್ತನ್ನು ಹೊಸ ದೃಷ್ಟಿಕೋನದಿಂದ ನೋಡುವ ಮನಸ್ಸಿಗೆ ಸಲ್ಲಿಸುವ ಗೌರವೂ ಆಗಿದೆ.

1839ರಲ್ಲಿ ಫ್ರಾನ್ಸ್‌ನ ವಿಜ್ಞಾನಿ Louis Daguerre ಅಭಿವೃದ್ಧಿ ಪಡಿಸಿದ ಡಾಗ್ಯುರೆಟೈಪ್ (Daguerreotype) ತಂತ್ರಜ್ಞಾನವನ್ನು ಫ್ರಾನ್ಸ್ ಸರ್ಕಾರ ಸಾರ್ವಜನಿಕರಿಗೆ ಮುಕ್ತವಾಗಿ ನೀಡಿದ ದಿನವೇ ಇಂದಿನ ವಿಶ್ವ ಛಾಯಾಗ್ರಹಣ ದಿನದ ಐತಿಹಾಸಿಕ ನೆಲೆ. ಅಂದಿನಿಂದ ಇಂದಿನವರೆಗೆ ಛಾಯಾಗ್ರಹಣವು ಕೇವಲ ತಂತ್ರಜ್ಞಾನವಾಗಿ ಉಳಿದಿಲ್ಲ; ಅದು ಇತಿಹಾಸದ ಸಾಕ್ಷಿಯಾಗಿ, ಪ್ರಕೃತಿಯ ರಾಯಭಾರಿಯಾಗಿ, ಪತ್ರಿಕೋದ್ಯಮದ ಕಣ್ಣಾಗಿ, ವಿಜ್ಞಾನದ ಸಹಯಾತ್ರಿಯಾಗಿ ಮತ್ತು ಮಾನವ ಭಾವನೆಗಳ ಭಾಷೆಯಾಗಿ ಬೆಳೆದಿದೆ. ಆದರೆ… ಕ್ಯಾಮೆರಾ ಜಗತ್ತನ್ನೇ ಸೆರೆಹಿಡಿಯುತ್ತದಾದರೂ ನಮ್ಮೊಳಗೆ ಒಂದು ಪ್ರಶ್ನೆ ಉಳಿಯುತ್ತದೆ— ಕ್ಯಾಮೆರಾದ ಹಿಂದೆ ನಿಂತಿರುವ ಮನಸ್ಸನ್ನು ಯಾರು ಸೆರೆಹಿಡಿಯುತ್ತಾರೆ?

ಹಲವು ವರ್ಷಗಳಿಂದ ದೇಶ ಸುತ್ತಿದ್ದೇನೆ. ಊರುಗಳನ್ನು ಕಂಡಿದ್ದೇನೆ. ಪರ್ವತಗಳ ಮೌನವನ್ನು ಕೇಳಿದ್ದೇನೆ. ಸಮುದ್ರದ ಅಲೆಗಳ ಭಾಷೆಯನ್ನು ಆಲಿಸಿದ್ದೇನೆ. ಸಾವಿರಾರು ಜನರ ಮುಖಗಳನ್ನು ನನ್ನ ಕ್ಯಾಮೆರಾದಲ್ಲಿ ಸೆರೆಯಾಗಿಸಿದ್ದೇನೆ. ಅವರ ಸಂತೋಷ, ನೋವು, ಕನಸು, ನಿರೀಕ್ಷೆ, ಸೋಲು, ಗೆಲುವು—ಎಲ್ಲವನ್ನೂ ಚಿತ್ರಗಳಲ್ಲಿ ಉಳಿಸಿದ್ದೇನೆ. ಜನರು ಆ ಚಿತ್ರಗಳನ್ನು ನೋಡಿ ಮೆಚ್ಚಿದರು. ಆದರೆ ಒಂದು ದಿನ ನನ್ನೊಳಗೆ ವಿಚಿತ್ರವಾದ ಹೇಳಲಾಗಾದ ದಣಿವು ಕಾಣಿಸಿತು. ಸೂಕ್ಷ್ಮವಾಗಿ ಗಮನಿಸಿದಾಗ ಗೊತ್ತಾಯ್ತು ಅದು ದೇಹದ ದಣಿವಲ್ಲ; ಮನಸ್ಸಿನ ದಣಿವೆಂದು.

https://kalpa.news/wp-content/uploads/2026/08/Independence-Day-Film-Kannada.mp4

ಅಂದು ಅರ್ಥವಾಗದ ವಿಚಾರವೊಂದು ನನ್ನ ಮನಸ್ಸನ್ನ ಕೊರೆಯಲಾರಂಭಿಸಿತು. ಇಷ್ಟು ವರ್ಷ ನಾನು ಜಗತ್ತನ್ನು ನೋಡಿದ್ದೆ, ಆದರೆ ನನ್ನನ್ನು ನಾನು ನೋಡಿರಲಿಲ್ಲ. ಅಲ್ಲಿಂದ ನನ್ನ ನಿಜವಾದ ನನ್ನೊಳಗಿನ ಪ್ರಯಾಣ ಆರಂಭವಾಯಿತು. ಅದು ದೇಶ ಪ್ರದೇಶಗಳ ನಡುವಿನ ಪ್ರಯಾಣವಲ್ಲ. ನನ್ನೊಳಗಿನ ಒಳ
ಮನಸ್ಸಿನ ಪ್ರಯಾಣವಾಗಿತ್ತು. ಆ ಹುಡುಕಾಟದಲ್ಲಿ ನಾನು ಅನೇಕ ಮನೆಗಳನ್ನು ಕಂಡೆ. ಸಂಬಂಧಗಳನ್ನು ಓದಿದೆ. ಅಮ್ಮನ ಮಮತೆ, ಅಪ್ಪನ ತ್ಯಾಗ, ಅಕ್ಕನ ಅಕ್ಕರೆ, ತಮ್ಮನ ಉತ್ಸಾಹ, ತಂಗಿಯ ಮುಗ್ಧತೆ, ಹಿರಿಯರ ಅನುಭವ—ಪ್ರತಿಯೊಂದು ಸಂಬಂಧವೂ ಬದುಕಿನ ಒಂದೊಂದು ಅಧ್ಯಾಯವೆಂಬಂತೆ ಕಂಡಿತು. ಹೊರಗಿನಿಂದ ಎಲ್ಲ ಮನೆಗಳೂ ಸುಂದರವಾಗಿ ಕಾಣುತ್ತವೆ. ಆದರೆ ಪ್ರತಿಯೊಂದು ಮನೆಯ ಗೋಡೆಗಳ ಹಿಂದೆ ಹೇಳದ ನೋವು, ಮೌನದ ಕಣ್ಣೀರು, ಮಾತಾಗದ ಪ್ರೀತಿ ಮತ್ತು ಕಾಣದ ಹೋರಾಟಗಳಿರುತ್ತವೆ.AdityaPrasad Photography copy

Also Read>> ಶಿವಮೊಗ್ಗದಲ್ಲಿ 3 ದಿನ ನಡೆಯಲಿದೆ ಮ್ಯಾಜಿಕ್ ಟಾಕ್ ಕಾರ್ಯಾಗಾರ | ಏನಿದರ ವಿಶೇಷ?

ಒಮ್ಮೆ ನನ್ನೊಳಗಿನಬಮನೋವಿಹಾರದಲ್ಲಿ ಅಪಾರ ಶ್ರೀಮಂತಿಕೆಯ ಮನೆಯೊಂದಕ್ಕೆ ಹೋದೆ. ಅರಮನೆಯಂತಿದ್ದ ಮನೆ. ಐಷಾರಾಮಿ ಬದುಕು. ಎಲ್ಲ ಸೌಲಭ್ಯಗಳು ಇದ್ದರೂ ಅಲ್ಲಿನ ಕೆಲ ಮನಸ್ಸುಗಳು ಖಾಲಿಯಾಗಿದ್ದವು. ಪ್ರೀತಿಗಿಂತ ಪ್ರತಿಷ್ಠೆ ದೊಡ್ಡದಾಗಿತ್ತು. ಸಂಬಂಧಗಳಿಗಿಂತ ಅಹಂಕಾರ ಎತ್ತರವಾಗಿತ್ತು. ಮೊಬೈಲ್ ಪರದೆಯಲ್ಲಿ ಸಾವಿರಾರು ಸ್ನೇಹಿತರಿದ್ದರೂ, ಮನೆಯವರೊಂದಿಗೆ ಮಾತನಾಡಲು ಸಮಯವಿರಲಿಲ್ಲ.

ಇನ್ನೊಬ್ಬಳಲ್ಲಿ ಅದ್ಭುತ ಪ್ರತಿಭೆಯಿತ್ತು. ಸಂಗೀತ, ಕಲೆ, ಕನಸು—ಎಲ್ಲವೂ ಇದ್ದವು. ಆದರೆ ಮನೆಯ ಗದ್ದಲದಲ್ಲಿ ಅವಳ ಪ್ರತಿಭೆಯ ಧ್ವನಿ ಮೌನವಾಗಿ ಮನೆಯ ಮೂಲೆ ಸೇರಿತ್ತು. ಅಲ್ಲಿಂದ ಹೊರಬಂದಾಗ ನನ್ನೊಳಗಿನ ನಾನು ಕೇಳಿದ ಪ್ರಶ್ನೆ— “ಶ್ರೀಮಂತಿಕೆ ಎಂದರೆ ಏನು?” ಹಣವೇ? ಮನೆಯೇ? ಅಧಿಕಾರವೇ? ಇಲ್ಲ… ನೆಮ್ಮದಿಯಿಂದ ನಿದ್ರೆ ಮಾಡುವ ಮನಸ್ಸೇ. Soild Waste Management Rule 2026ಕೆಲ ದಿನಗಳ ನಂತರ ಮತ್ತೊಂದು ಮನೆಗೆ ಹೋದೆ. ಅದು ಸಣ್ಣ ಗುಡಿಸಲು. ಮಳೆ ಬಂದರೆ ಛಾವಣಿ ಸೋರುತ್ತಿತ್ತು. ಆದರೆ ಅಲ್ಲಿ ನಗುವಿಗೆ ಕೊರತೆಯಿರಲಿಲ್ಲ. ತಟ್ಟೆಯಲ್ಲಿದ್ದ ಊಟ ಕಡಿಮೆಯಿದ್ದರೂ ಪ್ರೀತಿಗೆ ಬರವಿರಲಿಲ್ಲ. ಆಗ ಬದುಕಿನ ಮತ್ತೊಂದು ಸತ್ಯದ ಅರ್ಥವಾಯಿತು. ಮಾನವನ ಸಂಪತ್ತು ಮನೆಯ ಗಾತ್ರವನ್ನು ಹೆಚ್ಚಿಸಬಹುದು; ಹೃದಯದ ಗಾತ್ರವನ್ನಲ್ಲ. ಶಿಕ್ಷಣ ಪದವಿಯನ್ನು ಕೊಡಬಹುದು; ಸಂಸ್ಕಾರವನ್ನು ಅಲ್ಲ. ತಂತ್ರಜ್ಞಾನ ಜಗತ್ತನ್ನು ಹತ್ತಿರ ತರಬಹುದು; ಮನಸ್ಸುಗಳನ್ನು ಅಲ್ಲ. ಇಂದು ಡಿಜಿಟಲ್ ಯುಗ. ಮೊಬೈಲ್ ಕ್ಯಾಮೆರಾಗಳು, ಡ್ರೋನ್‌ಗಳು, ಕೃತಕ ಬುದ್ಧಿಮತ್ತೆ, ಸಾಮಾಜಿಕ ಜಾಲತಾಣಗಳು—ಛಾಯಾಗ್ರಹಣವನ್ನು ಎಲ್ಲರಿಗೂ ತಲುಪಿಸಿವೆ. ಪ್ರತಿಯೊಬ್ಬರೂ ಫೋಟೋಗ್ರಾಫರ್ ಆಗಿದ್ದಾರೆ. ಆದರೆ ಪ್ರಶ್ನೆ ಒಂದೇ— ನಾವು ಚಿತ್ರಗಳನ್ನು ತೆಗೆಯುತ್ತಿದ್ದೇವೆಯೇ, ಅಥವಾ ಈಗಿನ ಕ್ಷಣಗಳಲ್ಲಿ ‌ಮಾತ್ರ ಬದುಕುತ್ತಿದ್ದೇವೆಯೇ? ಎನ್ನುವುದು.AdityaPrasad Photography copy

World Photography Day 

ವಿಶ್ವ ಛಾಯಾಗ್ರಹಣ ದಿನವು ಒಂದರ್ಥದಲ್ಲಿ ನಮಗೆ ಈ ಪ್ರಶ್ನೆಯನ್ನು ಕೇಳುವ ದಿನವೂ ಹೌದು. ಕನ್ನಡಿಯ ಮುಂದೆ ನಿಂತಾಗ ನನ್ನೊಳಗಿನ ನಾನು ಮತ್ತೆ ಕೇಳಿತು— “ನೀನು ಸಾವಿರಾರು ಜನರ ಚಿತ್ರ ತೆಗೆದೆಯಲ್ಲ… ಒಮ್ಮೆ ನಿನ್ನ ಮನಸ್ಸಿನ ಚಿತ್ರ ತೆಗೆದಿದ್ದೀಯಾ?” “ನೀನು ಎಷ್ಟೋ ಜನರ ನಗುವನ್ನು ಸೆರೆಹಿಡಿದೆಯಲ್ಲ… ನಿನ್ನ ನಗುವಿನ ಹಿಂದೆ ಅಡಗಿರುವ ನೋವನ್ನು ನೋಡಿದ್ದೀಯಾ?” “ಜಗತ್ತಿನ ಸೌಂದರ್ಯವನ್ನು ಹುಡುಕಿದ್ದೀಯಲ್ಲ… ನಿನ್ನೊಳಗಿನ ಸೌಂದರ್ಯವನ್ನು ಯಾವಾಗ ಕಂಡುಕೊಳ್ಳುತ್ತೀಯಾ?” ಈ ಪ್ರಶ್ನೆಗಳು ಉತ್ತರ ಕೇಳಲಿಲ್ಲ. ಆದರೆ ಬದುಕಿನ ಅರ್ಥವನ್ನು ಕಲಿಸಿದವು. ಆ ದಿನದಿಂದ ನನ್ನ ಕ್ಯಾಮೆರಾ ಕೇವಲ ಮುಖಗಳನ್ನು ನೋಡುವುದಿಲ್ಲ. ಮನಸ್ಸುಗಳನ್ನು ಓದಲು ಪ್ರಯತ್ನಿಸುತ್ತದೆ.

ಕೇವಲ ಬೆಳಕು-ನೆರಳನ್ನು ಹಿಡಿಯುವುದಿಲ್ಲ. ಜೀವನದ ಅರ್ಥವನ್ನು ಹುಡುಕುತ್ತದೆ. ಏಕೆಂದರೆ ಒಂದು ದಿನ ನಾವು ಈ ಜಗತ್ತನ್ನು ಬಿಟ್ಟು ಹೋಗುತ್ತೇವೆ. ನಮ್ಮ ಜೊತೆಗೆ ಬರುವುದು ಹಣವಲ್ಲ, ಹೆಸರಲ್ಲ, ಹುದ್ದೆಯಲ್ಲ. ನಾವು ಯಾರ ಹೃದಯದಲ್ಲಿ ಉಳಿದಿದ್ದೇವೋ, ಅದೇ ನಮ್ಮ ನಿಜವಾದ ಚಿತ್ರ. ಆದ್ದರಿಂದ ವಿಶ್ವ ಛಾಯಾಗ್ರಹಣ ದಿನವು ಕೇವಲ ಒಂದು ಆಚರಣೆಯಲ್ಲ. ಅದು ಪ್ರತಿಯೊಬ್ಬ ಛಾಯಾಗ್ರಾಹಕನಿಗೂ ಒಂದು ಆತ್ಮಾವಲೋಕನ. ಕೇವಲ ಕ್ಯಾಮೆರಾದ ಕಣ್ಣು ತೆರೆಯುವ ದಿನವಲ್ಲ. ಮನಸ್ಸಿನ ಕಣ್ಣು ತೆರೆಸುವ ದಿನ. ಪ್ರತಿಯೊಂದು ಫೋಟೋ ಒಂದು ಕಥೆ ಹೇಳುತ್ತದೆ. ಆದರೆ ಅತ್ಯುತ್ತಮ ಛಾಯಾಗ್ರಾಹಕ ಎಂದರೆ ಜಗತ್ತಿನ ಸೌಂದರ್ಯವನ್ನು ಮಾತ್ರವಲ್ಲ, ಮನುಷ್ಯನೊಳಗಿನ ಬೆಳಕನ್ನೂ ಕಾಣಬಲ್ಲವನು. ಅದೇ ಛಾಯಾಗ್ರಹಣದ ನಿಜವಾದ ಅರ್ಥ. ಅದೇ ನನ್ನ ಕಲ್ಪನೆಯಲ್ಲಿ ವಿಶ್ವ ಛಾಯಾಗ್ರಹಣ ದಿನದ ಸಂದೇಶ.

– ಆದಿತ್ಯ ಪ್ರಸಾದ್ ಎಂ.
ಛಾಯಾಗ್ರಾಹಕ | ಹವ್ಯಾಸಿ ಬರಹಗಾರ | ಪ್ರಕೃತಿಯಲ್ಲಿ ಬದುಕಿನ ಕಥೆ ಹುಡುಕುವ ಪಯಣಿಗ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   PES ShivamoggaKumadvathi College ShikariuraKalpa News Advertising DisclaimerKalahamsa Infotech private limited

Tags: DaguerreotypeLouis DaguerreShivamoggaWorld Photography Dayಕ್ಯಾಮೆರಾಫೋಟೋಫ್ರಾನ್ಸ್ವಿಶ್ವ ಛಾಯಾಗ್ರಹಣ ದಿನ
Share211Tweet132Send
Aniruddha Vasishta S R

Aniruddha Vasishta S R

Editor-in-Chief

Previous Post

ಶಿವಮೊಗ್ಗದಲ್ಲಿ 3 ದಿನ ನಡೆಯಲಿದೆ ಮ್ಯಾಜಿಕ್ ಟಾಕ್ ಕಾರ್ಯಾಗಾರ | ಏನಿದರ ವಿಶೇಷ?

Next Post

ಒಡೆಯರ್ ಎಕ್ಸ್‌ಪ್ರೆಸ್, ಯಶವಂತಪುರ–ಚಿಕ್ಕಮಗಳೂರು ಸೇರಿ 19 ರೈಲುಗಳ ಸಂಚಾರದಲ್ಲಿ ಮಹತ್ವದ ಬದಲಾವಣೆ

kalpa News

kalpa News

Next Post
SWR 19 Trains Service Changes including Wodeyar Express

ಒಡೆಯರ್ ಎಕ್ಸ್‌ಪ್ರೆಸ್, ಯಶವಂತಪುರ–ಚಿಕ್ಕಮಗಳೂರು ಸೇರಿ 19 ರೈಲುಗಳ ಸಂಚಾರದಲ್ಲಿ ಮಹತ್ವದ ಬದಲಾವಣೆ

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL